Advertisement

ಸೌಲಭ್ಯ ವಂಚಿತ ಕರ್ನಾಟಕ ಪಬ್ಲಿಕ್‌ ಶಾಲೆ

10:34 AM Jul 26, 2019 | Suhan S |

ಸಂತೆಮರಹಳ್ಳಿ: ನೆಲದ ಮೇಲೆ ಕುಳಿತು ಪಾಠ ಕೇಳುವ ಅನಿವಾರ್ಯತೆ, ಸೋರುವ, ಹೆಂಚಿನ ಮೇಲ್ಭಾವ ಣಿಯಲ್ಲೇ ಬಿಸಿಲು ಮಳೆಯಲ್ಲಿ ಪಾಠ ಕೇಳುವ ಅನಿವಾರ್ಯತೆ. ದೊಡ್ಡ ಮಕ್ಕಳ ಶೌಚಾಲಯಗಳನ್ನೇ ಬಳಸಲು ಪರದಾಡುವ ಪುಟಾಣಿ ಚಿಣ್ಣರು.

Advertisement

ಇದು ಯಳಂದೂರು ಪಟ್ಟಣದಲ್ಲಿ ತೆರೆದಿರುವ ಕರ್ನಾಟಕ ಪಬ್ಲಿಕ್‌ ಶಾಲೆ ಹಾಗೂ ಕೆಸ್ತೂರು ಗ್ರಾಮದಲ್ಲಿ ಆಂಗ್ಲಮಾಧ್ಯಮ ಶಾಲೆಗಳ ಇಂದಿನ ಪರಿಸ್ಥಿತಿ. ಪೋಷಕರಲ್ಲಿ ದಾಖಲಾತಿ ವೇಳೆ ಹೇಳಿದ್ದ ಸೌಲಭ್ಯಗಳಲ್ಲಿ ಶೇ.10ರಷ್ಟು ಈಡೇರದ ಕಾರಣ ಪೋಷಕರಲ್ಲಿ ಬೇಸರ ಮೂಡಿದೆ.

ಕನಿಷ್ಠ ಸೌಲಭ್ಯವೇ ಇಲ್ಲ: ತಾಲೂಕಿನಲ್ಲಿ ಎರಡು ಕಡೇ ಪ್ರಾರಂಭವಾಗಿ ನಡೆಯುತ್ತಿರುವ ಶಾಲೆಯಲ್ಲಿ ಎಲ್ಕೆಜಿ ಹಾಗೂ ಒಂದನೇ ತರಗತಿಗಳನ್ನು ಆರಂಭಿಸಲಾಗಿದೆ. ಇದರಲ್ಲಿ ತಲಾ 30 ರಂತೆ ಒಟ್ಟು 60 ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ. ಎರಡೂ ಕಡೆಗಳಿಗೂ ತಲಾ ಒಬ್ಬರು ಅತಿಥಿ ಶಿಕ್ಷಕರನ್ನು ಹಾಗೂ ಸಹಾಯಕಿಯರನ್ನು ಗೌರವ ಧನದ ಆಧಾರದಲ್ಲಿ ನೇಮಕ ಮಾಡಲಾಗಿದೆ. ಇದಕ್ಕೆ ಇರುವ ಕೊಠಡಿಗಳನ್ನೇ ಬಳಸಿಕೊಳ್ಳಲಾಗುತ್ತಿದೆ.

ಮಕ್ಕಳಿಗೆ ಶೌಚಗೃಹದ್ದೇ ದೊಡ್ಡ ಸಮಸ್ಯೆಯಾಗಿದೆ. ಬೆಳಗ್ಗೆ 9.50 ರಿಂದ ಸಂಜೆ 4 ರವರೆಗೆ ಎಲ್ಕೆಜಿ ಹಾಗೂ ಒಂದನೇ ತರಗತಿ ನಡೆಯುತ್ತಿದೆ. ಒಬ್ಬರೇ ಶಿಕ್ಷಕರಿರುವ ಕಾರಣ ಪ್ರಾಥಮಿಕ ಶಾಲೆಯ ಶಿಕ್ಷಕರು ಕೆಲ ವೇಳೆ ತರಗತಿಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಅಲ್ಲದೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಟೈ, ಬೆಲ್r, ಶುದ್ಧವಾದ ಕುಡಿಯುವ ನೀರಿನ ಸೌಲಭ್ಯ, ಸಹ ಇದುವರೆಗೂ ನೀಡಿಲ್ಲ. ಎರಡೂ ಕಡೆಗಳಲ್ಲಿ ಸದ್ಯಕ್ಕೆ ಮಕ್ಕಳಿಗೆ ಊಟವನ್ನು ಬಿಸಿಯೂಟದಲ್ಲೇ ವ್ಯವಸ್ಥೆ ಮಾಡಲಾಗುತ್ತಿದೆ.

Advertisement

ಕಲಿಕಾ ವಾತಾವರಣವಿಲ್ಲ: ಚಿಕ್ಕ ಮಕ್ಕಳಿಗೆ ಬೇಕಿರುವ ಪೂರಕ ಕಲಿಕಾ ವಾತಾವರಣ, ಪೀಠೊಪಕರಣಗಳು ಕಂಡುಬರುತ್ತಿಲ್ಲ. ಹೀಗಾಗಿ ಕರ್ನಾಟಕ ಪಬ್ಲಿಕ್‌ ಶಾಲೆಯ ಕಲ್ಪನೆಯ ರೀತಿಯಲ್ಲಿ ಸೌಲಭ್ಯ ಇಲ್ಲದಾಗಿದೆ. ಶಾಲೆಯಲ್ಲಿ ಎಲ್ಕೆಜಿ ಹಾಗೂ 1ನೇ ತರಗತಿಗಳು ನಡೆಯುತ್ತಿವೆ. ಪ್ರಾರಂಭವಾಗಿ 2 ತಿಂಗಳಾದರೂ ಸೌಲಭ್ಯಗಳು ಮರಿಚೀಕೆಯಾಗಿರು ವುದು ದೊಡ್ಡ ದುರಂತವಾಗಿದೆ. ಕನಿಷ್ಠ ಸೌಲಭ್ಯ ಗಳನ್ನು ಕಲ್ಪಿಸದ್ದೇ ತರಗತಿಯಲ್ಲಿ ಚಿಕ್ಕ ಮಕ್ಕಳಿಗೆ ಪಾಠ ಪ್ರವಚನ ಮಾಡುವುದು ಸರಿಯಾದ ಕ್ರಮವಲ್ಲ ಎಂಬುದು ಪೋಷಕರ ಆರೋಪವಾಗಿದೆ.

ಪ್ರಚಾರಕ್ಕಷ್ಟೇ ಸೀಮಿತಗೊಂಡ ಪಬ್ಲಿಕ್‌ ಶಾಲೆ: ಪ್ರಾರಂಭದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಖಾಸಗಿ ಶಾಲೆಗಿಂತಲೂ ಇಂಗ್ಗಿಷ್‌ ಕಲಿಕೆಯನ್ನು ಉತ್ತಮ ರೀತಿಯಲ್ಲಿ ಮಾಡುವ ನಿಟ್ಟಿನಲ್ಲಿ ಆರಂಭದಲ್ಲಿ ಪ್ರಚಾರ ಮಾಡಿದ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ಪ್ರಚಾರವನ್ನು ನೋಡಿ ಸಾಕಷ್ಟು ಪೋಷಕರು ಅರ್ಜಿಗಳನ್ನು ಸಲ್ಲಿಸಿದರು.

ಲಾಟರಿ ಮೂಲಕ ಮಕ್ಕಳ ಆಯ್ಕೆ: ನಂತರ ಲಾಟರಿ ಮೂಲಕ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡ ಲಾಯಿತು. ಉದ್ಘಾಟನೆಯಾದ ಕೆಲವೇ ತಿಂಗಳಲ್ಲಿ ಮೂಲಭೂತ ಕನಿಷ್ಠ ಸೌಲಭ್ಯಗಳನ್ನೂ ನೀಡದೆ ಪೋಷ ಕರನ್ನು ಮಕ್ಕಳನ್ನು ವಂಚಿಸಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ ಎಂದು ಪೋಷಕರು ದೂರುತ್ತಾರೆ.

 

● ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next