ಉತ್ತರ ಪ್ರದೇಶ : ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ವೈದ್ಯರೊಬ್ಬರು ಮೊಬೈಲ್ ಬೆಳಕಿನಿಂದಲೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಘಟನೆ ಉತ್ತರಪ್ರದೇಶದ ಬಲಿಯಾ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಉತ್ತರ ಪ್ರದೇಶದ ನಗರದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ ಅಲ್ಲದೆ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಯು ಹೆಚ್ಚಾಗಿದ್ದು ವೈದ್ಯರು ಮೊಬೈಲ್ ಬೆಳಕಿನಲ್ಲಿ ರೋಗಿಗಗನ್ನು ತಪಾಸಣೆ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ. ಅಂದಹಾಗೆ ಈ ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸೆ ಇದೆಯಂತೆ ಆದರೆ ಅದರ ಬ್ಯಾಟರಿ ಇಲ್ಲ, ಕಾರಣ ವಿದ್ಯುತ್ ಸಮಸ್ಯೆ ಎದುರಾದಾಗ ಈ ಆಸ್ಪತ್ರೆಯಲ್ಲಿ ಮೊಬೈಲ್ ಬೆಳಕೇ ಗತಿಯಂತೆ.
ಈ ಕುರಿತು ಆಸ್ಪತ್ರೆಯ ಪ್ರಭಾರ ಮುಖ್ಯಾಧಿಕಾರಿ ಡಾ.ಆರ್.ಡಿ.ರಾಮ್ ಅವರು ಹೇಳುವಂತೆ ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆ ಮೊದಲಿನಿಂದಲೂ ಇತ್ತು ಆದರೆ ಕಳ್ಳರು ಇದರ ಬ್ಯಾಟರಿ ಪದೇ ಪದೇ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ ಹಾಗಾಗಿ ಹೊಸ ಬ್ಯಾಟರಿ ಅಳವಡಿಸಲಿಲ್ಲ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ಕಾಣುವಂತೆ ಒಬ್ಬ ರೋಗಿಗೆ ವೈದ್ಯರು ಮೊಬೈಲ್ ಬೆಳಕಿನಲ್ಲಿ ಚಿಕಿತ್ಸೆ ನೀಡುತ್ತಿದ್ದರೆ ಉಳಿದ ರೋಗಿಗಳು ಕತ್ತಲೆಯಲ್ಲಿ ಕುಳಿತಿರುವುದು ಕಾಣಬಹುದು.
ಇದನ್ನೂ ಓದಿ : ಸೆ.17ರಿಂದ ಅ.2ರವರೆಗೆ ಪ್ರಧಾನಿ ಮೋದಿಯವರ ಗಿಫ್ಟ್‌ಗಳ ಹರಾಜು