ಬಂಟ್ವಾಳ : ಕುಡಿಯುವ ನೀರಿನ ವಿಚಾರದಲ್ಲಿ ಗ್ರಾಮವು ಸ್ವಾವಲಂಬಿ ಆಗ ಬೇಕು. ಅದಕ್ಕಾಗಿ ಸರಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಬಳಸಿಕೊಂಡು ಸೌಕರ್ಯಗಳನ್ನು ಅನುಷ್ಠಾನಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಫೆ. 4ರಂದು ನರಿಕೊಂಬು ಗ್ರಾಮದ ಬಿಕ್ರೋಡಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಿ.ಪಂ.ನಿಧಿ 7 ಲಕ್ಷ ರೂ. ವೆಚ್ಚದ ಟ್ಯಾಂಕ್ ನಿರ್ಮಾಣಕ್ಕೆ ಶಿಲಾನ್ಯಾಸ ಸಂದರ್ಭ ಊರಿನ ಜನರನ್ನು ಉದ್ದೇಶಿಸಿ ಮಾತನಾಡಿದರು.
ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮಾತನಾಡಿ, ನಾಡಿನಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಕುಡಿಯುವ ನೀರಿನ ಯೋಜನೆಯ ಈ ಯೋಜನೆಗೆ ಜಿ.ಪಂ. ನಿಧಿಯಿಂದ ಅನುದಾನ ಇಡಲಾಗಿದೆ. ಯೋಜನೆ ಆದಷ್ಟು ಶೀಘ್ರ ಅನುಷ್ಠಾನಕ್ಕೆ ಬರುವ ಮೂಲಕ ಜನರಿಗೆ ಅದರ ಪ್ರಯೋಜನ ಸಿಗಲಿ ಎಂದು ಹಾರೈಸಿದರು.
ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು, ಸದಸ್ಯರಾದ ದಿವಾಕರ ಶಂಭೂರು, ಕಿಶೋರ್ ಶೆಟ್ಟಿ, ತ್ರಿವೇಣಿ ಕೇದಿಗೆ, ಮಾದವ ಕರ್ಬೆಟ್ಟು, ಮಾಜಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ ಅಂತರ, ಮಾಜಿ ಸದಸ್ಯರಾದ ಗಣೇಶ್ ಕುಮಾರ್ ಅಂತರ, ಜಿನರಾಜ ಕೋಟ್ಯಾನ್, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಎಸ್., ಪ್ರಮುಖರಾದ ಸದಾಶಿವ ಸಪಲ್ಯ ಬಂಗುಲೆ, ಮೋಹನ ಭಂಡಾರಿ ಕಲ್ಯಾರು, ಸುರೇಶ್ ಕುಮಾರ್, ನಾರಾಯಣ ಪೂಜಾರಿ ದರ್ಖಾಸ್, ಅಭಿವೃದ್ಧಿ ಅಧಿಕಾರಿ ಶಿವಜನಕೊಂಡ, ಕೇದಿಗೆ ನಾರಾಯಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಪಂಚಾಯತ್‌ರಾಜ್ ಎಂಜಿನಿಯ ರಿಂಗ್ ಉಪ ವಿಭಾಗದ ಸ.ಕಾ.ನಿ. ಎಂಜಿನಿ ಯರ್ ರೋಹಿದಾಸ್, ಸ. ಎಂಜಿನಿಯರ್ ಕುಶ ಕುಮಾರ್ ಉಪಸ್ಥಿತರಿದ್ದರು.
ಅಭಿವೃದ್ಧಿ ಕಾರ್ಯಕ್ರಮ
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧ್ದಿ, ಕೆರೆ ಅಭಿವೃದ್ಧಿ, ನೀರಿನ ಸಂಪುಗಳ ಪುನರ್ ನಿರ್ಮಾಣ, ನೀರು ಹರಿಯುವ ತೋಡುಗಳಲ್ಲಿ ಜಲ ಸಂರಕ್ಷಣೆ, ಅಂತರ್ಜಲ ವೃದ್ಧಿಗಾಗಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ. ಜನರು ಕುಡಿಯುವ ನೀರನ್ನು ಪೋಲು ಮಾಡುವ ಕೆಲಸವನ್ನು ಗಮನಿಸಿದರೆ ಅದನ್ನು ನಿಯಂತ್ರಿಸುವ ಕೆಲಸ ಮಾಡಬೇಕು.
– ರಾಜೇಶ್ ನಾೖಕ್, ಶಾಸಕರು