Advertisement

ಅರೆಸೇನೆಯ ನಿವೃತ್ತ ಸಿಬ್ಬಂದಿಗೆ ಸೌಲಭ್ಯ: ಸಚಿವ ಆರಗ ಜ್ಞಾನೇಂದ್ರ

08:44 PM Dec 23, 2022 | Team Udayavani |

ಸುವರ್ಣ ವಿಧಾನಸೌಧ: ಅರೆಸೇನಾ ಪಡೆಗಳ ಯೋಧರ ಕ್ಷೇಮಾಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯ ಸಿಎಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಬಿಪಿ ಮತ್ತು ಎಸ್‌ಎಸ್‌ಬಿ ನಿವೃತ್ತ ಸಿಬ್ಬಂದಿಗೆ ಅರ್ಹ ಸೌಲಭ್ಯ ನೀಡಲು ಆದೇಶ ಹೊರಡಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

Advertisement

ಗಮನಸೆಳೆಯುವ ಸೂಚನೆಯಡಿ ಕಾಂಗ್ರೆಸ್‌ ಉಪನಾಯಕ ಯು.ಟಿ.ಖಾದರ್‌ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಕೇಂದ್ರ ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೆ ಕೇಂದ್ರ ಶಸಸ್ತ್ರ ಪಡೆ ಮಾಜಿ ಸಿಬ್ಬಂದಿ ಎಂದು ಪದನಾಮೀಕರಿಸಿ ಇವರಿಗೆ ಕೇಂದ್ರ ಸರಕಾರದ ಮಾದರಿಯಲ್ಲೇ ಅರ್ಹ ಸೌಲಭ್ಯಗಳನ್ನು ಪರಿಗಣಿಸಲು ನ.1ರಂದು ಆದೇಶ ಹೊರಡಿಸಲಾಗಿದೆ ಎಂದರು.

ಅಲ್ಲದೆ, ಅಗ್ನಿಶಾಮದಳ ಹಾಗೂ ವಿವಿಧ ಇಲಾಖೆಯಲ್ಲಿ ಇಂತಹ ಹುದ್ದೆ ನೇಮಕದ ಸಂದರ್ಭದಲ್ಲಿ ಇವರಿಗೆ ಮೀಸಲಾತಿ ಒದಗಿಸಲಾಗುವುದು. ಇದರಿಂದ ವಿಶೇಷ ತರಬೇತಿ ನೀಡುವುದು ತಪ್ಪಲಿದೆ. ರಾಜ್ಯ ಸರ್ಕಾರದ ಆದೇಶದಂತೆ ಈಗಾಗಲೇ 46 ನಿವೃತ್ತ ಸಿಬ್ಬಂದಿ ಅರ್ಹ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

ಯು.ಟಿ.ಖಾದರ್‌ ಮಾತನಾಡಿ, ಅರೆಸೇನೆಯಲ್ಲಿ ಸೈನಿಕರಂತೆ ಸೇವೆ ಸಲ್ಲಿಸಿದವರ ಕಲ್ಯಾಣಕ್ಕಾಗಿ ಅರೆಸೈನಿಕ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಎಲ್ಲ ಸೌಲಭ್ಯ ಸಿಗುವಂತೆ ಮಾಡಬೇಕು ಮತ್ತು ವೈದ್ಯಕೀಯ ವಿಮಾ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next