Advertisement

ಗಬ್ಬೂರು ಆರೋಗ್ಯ ಕೇಂದ್ರಕ್ಕೆ ಸೌಲಭ್ಯ; ನಾಳೆ ಹೋರಾಟ

01:03 PM Apr 06, 2022 | Team Udayavani |

ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರ ನೇಮಕ, 108 ಆಂಬ್ಯುಲೆನ್ಸ್‌ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಏ.7ರಂದು ಆರೋಗ್ಯ ಕೇಂದ್ರದ ಎದುರೇ ಧರಣಿ ನಡೆಸುವುದಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ದೇವದುರ್ಗ ತಾಲೂಕು ಸಮಿತಿ ಅಧ್ಯಕ್ಷ ಶಾಂತಕುಮಾರ ಹೊನ್ನಟಗಿ ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಬ್ಬೂರು ಹೋಬಳಿ ವ್ಯಾಪ್ತಿಗೆ 40 ಹಳ್ಳಿಗಳು ಬರುತ್ತಿದ್ದು, ರಾಯಚೂರು ಹೋಬಳಿ ಸೇರಿ ಹತ್ತಾರು ಹಳ್ಳಿಗಳ ಜನರು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ಆದರೆ, ಇಲ್ಲಿ ವೈದ್ಯರಿಲ್ಲದ ಕಾರಣ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಇನ್ನೂ ಆಂಬ್ಯುಲೆನ್ಸ್‌ ಕೆಟ್ಟು ಹೋದರೂ ದುರಸ್ತಿ ಮಾಡಿಸಿಲ್ಲ. ಇದರಿಂಗ ಗರ್ಭಿಣಿಯರು, ವೃದ್ಧರು, ರೋಗಿಗಳು ಪರದಾಡುವಂತಾಗಿದೆ. ಒಂದು ವೇಳೆ ಕೂಡಲೇ ಕ್ರಮ ವಹಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಈ ವೇಳೆ ಸಮಿತಿ ಮುಖಂಡರಾದ ರಾಜಪ್ಪ ಸಿರವಾರಕರ್‌, ಮರೆಪ್ಪ ಮಲದಕಲ್‌, ನರಸಪ್ಪ ಎನ್‌.ಗಣೇಕಲ್‌, ಬಸಲಿಂಗಪ್ಪ ಖಾನಾಪುರ, ಹುಲಿಗೆಪ್ಪ ಹೊನ್ನಟಗಿ, ಮುತ್ತುರಾಜ ಮ್ಯಾತ್ರಿ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next