Advertisement

ಪರಿಶಿಷ್ಟರಿಗೆ ಜವಳಿ ಆಧಾರಿತ ಕೈಗಾರಿಕೆ ಸ್ಥಾಪಿಸಲು ಸೌಲಭ್ಯ

02:00 PM Oct 25, 2017 | |

ಬಳ್ಳಾರಿ: ಕೈ ಮಗ್ಗ ಮತ್ತು ಜವಳಿ ಇಲಾಖೆಯ ನೂತನ ಜವಳಿ ನೀತಿಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಜವಳಿ ಆಧಾರಿತ ಕೈಗಾರಿಕೆ ಸ್ಥಾಪಿಸಲು ಹೆಚ್ಚಿನ ಸಹಾಯ ಸೌಲಭ್ಯ ನೀಡುತ್ತಿದೆ ಎಂದು ಕೈ ಮಗ್ಗ ಮತ್ತು ಜವಳಿ ಉತ್ತರ ವಲಯದ ಜಂಟಿ ನಿರ್ದೇಶಕ ಡಿ.ಶ್ರೀಧರ ನಾಯಕ್‌ ತಿಳಿಸಿದರು.

Advertisement

ನಗರದ ನಿರೂಡ್ಸ್‌ ಸಂಸ್ಥೆಯ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಉತ್ತರ ವಲಯ, ರಾಷ್ಟ್ರೀಯ ಶಿಕ್ಷಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಬಳ್ಳಾರಿ ಹಾಗೂ ನಿರೂಡ್ಸ್‌ ಸಂಸ್ಥೆ ವತಿಯಿಂದ ನೂತನ ಜವಳಿ ನೀತಿ 2013-2018ರ ಗಿರಿಜನ ಯೋಜನೆಯಡಿ ಆಯೋಜಿಸಿದ್ದ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು  ತನಾಡಿದರು. ಪರಿಶಿಷ್ಟರ ಫಲಾನುಭವಿಗಳಿಗೆ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ಶೇ. 75ರಷ್ಟು ಸಹಾಯಧನ ನೀಡಲಾಗುವುದು. ಬ್ಯಾಂಕಿನಿಂದ ಶೇ.15ರಷ್ಟು ಸಾಲ ಪಡೆಯಬೇಕು. ಶೇ.10ರಷ್ಟು ಫಲಾನುಭವಿಗಳು ತಮ್ಮ ವಂತಿಕೆಯನ್ನು  ಭರಿಸಬೇಕು. ಘಟಕಕ್ಕೆ ಬೇಕಾಗುವ ಕಟ್ಟಡ ಯಂತ್ರೋಪಕರಣ ಹಾಗೂ ಇತರ ಸ್ಥಿರ ಬಂಡವಾಳ ಹೂಡಿಕೆಯ ಮೇಲೆ ಸಹಾಯಧನ ನೀಡಲಾಗುವುದು. ವಿದ್ಯುತ್‌ ಮಗ್ಗ ಸಹಾಯ ಧನ ಯೋಜನೆಯಡಿ ಎಸ್‌ಸಿ ಮತ್ತು ಎಸ್‌ಟಿ ಫಲಾನುಭವಿಗಳಿಗೆ ಘಟಕ ವೆಚ್ಚ 3 ಲಕ್ಷ ರೂ.ನಲ್ಲಿ ಶೇ.90ರಷ್ಟು ( 2.70 ಲಕ್ಷ ರೂ.) ಸಹಾಯಧನ ನೀಡಲಾಗುವುದು. ಎರಡು ವಿದ್ಯುತ್‌ ಕೈ ಮಗ್ಗ ಹಾಗೂ ಡಾಬಿ ಅಳವಡಿಸಲಾಗುವುದು. ಇದರ ಪ್ರಯೋಜನವನ್ನು ಜಿಲ್ಲೆಯಾದ್ಯಂತ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಸುಲಭವಾಗುವ ರೀತಿಯಲ್ಲಿ ಸರ್ಕಾರದ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕೆಂದು ತಿಳಿಸಿದರು.

ಗಾರ್ಮೆಂಟ್ಸ್‌ ಅಸೋಸಿಯೇಷನ್‌ ಕಾರ್ಯದರ್ಶಿ ಹೀರಾಲಾಲ್‌ ಮಾತನಾಡಿ, ತಮ್ಮಲ್ಲೆ ಸ್ವಸಹಾಯ ಗುಂಪುಗಳನ್ನು ಮಾಡಿಕೊಂಡು ಜೀನ್ಸ್‌ ಪ್ಯಾಂಟ್‌ ಮಾಡುವ ಕಾರ್ಖಾನೆಗಳಲ್ಲಿ ವೆಸ್ಟೇಜ್‌ಗಳನ್ನು ರೂ. 10ಕ್ಕೆ ಕೆ.ಜಿ.ಯಲ್ಲಿ ತೆಗೆದುಕೊಂಡು, ಅದರಿಂದ ಪರ್ಸ್‌, ಚೀಲಗಳನ್ನು ತಯಾರು ಮಾಡಿ ಮಾರಾಟ ಮಾಡಿದರೆ ಶೇ.100ರಷ್ಟು ಲಾಭ ಪಡೆಯಬಹುದು. ತಾವುಗಳು ನಮ್ಮ ಕಾರ್ಖಾನೆಗೆ ಬಂದರೆ ಅದನ್ನು ತಮಗೆ ಮಾರ್ಗದರ್ಶನ ನೀಡಲಾಗುವುದು. ಇದು ಬಳ್ಳಾರಿ ಜಿಲ್ಲೆಗೆ ಪೂರಕವಾಗಿದ್ದು, ಗಾಮೆಂಟ್ಸ್‌ ಉದ್ಯಮಿಗಳಿಗೆ ಇದರಿಂದ ವರದಾನವಾಗಲಿದೆ ಎಂದು ತಿಳಿಸಿದರು.

ಸೀಡಾಕ್‌ ಉಪನಿರ್ದೇಶಕ ಶಂಕರರಾವ್‌ ಮಾತನಾಡಿ, ಜವಳಿ ಯೋಜನೆಗಳ ಅನೇಕ ಯೋಜನೆಗಳು ಹಾಗೂ ಹಾಲಿ
ಜಿಲ್ಲೆಗಳಿರುವ ಜೀನ್ಸ್‌ ಪ್ಯಾಂಟ್‌ ಉದ್ಯಮಕ್ಕೆ ಚೇತನಕಾರಕವಾಗಿದೆ. ಸರ್ಕಾರದ ಸೌಲಭ್ಯವನ್ನು ಹೆಚ್ಚಿನ ಶಕ್ತಿ ನೀಡುವುದರಲ್ಲಿ ಸಾಧ್ಯವಾಗುತ್ತದೆ. ಎಲ್ಲಾ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಬಂದು ಐದು ದಿನಗಳ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಜಿಲ್ಲೆಗೆ ಮಾದರಿಯಾಗಬೇಕೆಂದರು. ನೀರೂಡ್ಸ್‌ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಸ್ವಾಗತಿಸಿದರು. 

ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಜವಳಿ ಪ್ರವರ್ಧನಾಧಿಕಾರಿ ಬಿ.ಮಲ್ಲಿಕಾರ್ಜುನ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next