Advertisement

ಫೇಸ್‌ ಬುಕ್‌ ಝುಕರ್‌ಬರ್ಗ್‌ಗೆ ಸಮನ್ಸ್‌ ಸಾಧ್ಯತೆ

06:00 AM Mar 22, 2018 | Team Udayavani |

ಹೊಸದಿಲ್ಲಿ: ಲಂಡನ್‌ ಮೂಲದ ರಾಜಕೀಯ ವಿಶ್ಲೇಷಣಾ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕಾಗೂ ಭಾರತಕ್ಕೂ ನಂಟಿರುವ ಆಘಾತಕಾರಿ ಸಂಗತಿ ಬಯಲಾಗಿದೆ. ಭಾರತದ ಮತದಾರರ ಮೇಲೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವ ಬೀರುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ.

Advertisement

ಈ ಮಧ್ಯೆ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಜತೆಗಿನ ನಂಟಿನ ಸಂಬಂಧ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಭಾರೀ ವಾಕ್ಸಮರವೇ ನಡೆದಿದೆ. 2019ರ ಲೋಕಸಭೆ ಚುನಾವಣೆಗಾಗಿ ರಾಹುಲ್‌ ಗಾಂಧಿ ಇಮೇಜ್‌ ವೃದ್ಧಿಸಲು ಇದೇ ಕಂಪೆನಿ ಜತೆ ಕಾಂಗ್ರೆಸ್‌ ಒಡಂಬಡಿಕೆ ಮಾಡಿ ಕೊಂಡಿದೆ ಎಂದು ಬಿಜೆಪಿ ಆರೋಪಿಸಿದ್ದರೆ, 2010ರಲ್ಲಿ ಬಿಹಾರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಕೂಟಕ್ಕೆ ನೆರವಾಗಿದ್ದು ಇದೇ ಸಂಸ್ಥೆಯಲ್ಲವೇ? ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಗೆಲ್ಲುತ್ತಿದ್ದಂತೆ, ರಾಹುಲ್‌ ಗಾಂಧಿ ಅವರ ಇಮೇಜ್‌ ವೃದ್ಧಿಗಾಗಿ ಇದೇ ಸಂಸ್ಥೆಯನ್ನು ಸಂಪರ್ಕಿಸಿರುವ ವಿಚಾರ ಕಳೆದ ಅಕ್ಟೋಬರ್‌ನಲ್ಲೇ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇಡೀ ಹಗರಣ ಬಯಲಿಗೆ ಬೀಳುತ್ತಿದ್ದಂತೆ, ದಿಲ್ಲಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಕೇಂದ್ರ ಕಾನೂನು ಮತ್ತು ಮಾಹಿತಿ, ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌, ಈ ಸಂಸ್ಥೆಯೊಂದಿಗೆ ಕಾಂಗ್ರೆಸ್‌ ಯಾವ ರೀತಿಯ ನಂಟು ಹೊಂದಿದೆ ಎಂಬುದನ್ನು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಯವರೇ ಖುದ್ದು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ನ್ಯೂಯಾರ್ಕ್‌ ಮೂಲಕ ಸಂಸ್ಥೆಯ ಸಿಇಒ ಅವರನ್ನು ರಾಹುಲ್‌ ಎಷ್ಟು ಬಾರಿ ಭೇಟಿಯಾಗಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ನೀಡಲಿ ಎಂದು ಅವರು ಒತ್ತಾಯಿಸಿದ್ದಾರೆ.

ಝುಕರ್‌ ಬರ್ಗ್‌ಗೇ ಸಮನ್ಸ್‌: ಅಲ್ಲದೆ ಭಾರತದಲ್ಲೂ ಯಾವುದೇ ಸಾಮಾಜಿಕ ಜಾಲತಾಣವು ಇದೇ ರೀತಿ ಕೃತ್ಯ ನಡೆಸುತ್ತಿದ್ದರೆ ಕಠಿನ ಕ್ರಮ ಕೈಗೊಳ್ಳುವುದಾಗಿ ಎಚ್ಚ ರಿಕೆ ನೀಡಿದ್ದಾರೆ. ಜತೆಗೆ ಅಗತ್ಯವೆನಿಸಿದರೆ ಫೇಸ್‌ ಬುಕ್‌ ಸಿಇಒ ಮಾರ್ಕ್‌ ಝುಕರ್‌ ಬರ್ಗ್‌ ಅವರಿಗೂ ಸಮನ್ಸ್‌ ಕೊಟ್ಟು ಕರೆಸಿಕೊಳ್ಳುವುದಾಗಿ ಹೇಳಿದ್ದಾರೆ.

ರಮ್ಯಾ, ಸುಜೇìವಾಲಾ ತಿರುಗೇಟು: ರವಿಶಂಕರ್‌ ಪ್ರಸಾದ್‌ ಅವರ ಆರೋಪಗಳಿಗೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿರುವ ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ ವಿಭಾಗದ ಮುಖ್ಯಸ್ಥೆ ರಮ್ಯಾ ಹಾಗೂ ರಣ ದೀಪ್‌ ಸುಜೇìವಾಲ “”2010ರಲ್ಲಿ ಬಿಹಾರದಲ್ಲಿ ಬಿಜೆ ಪಿ-ಜೆಡಿಯು ಮೈತ್ರಿ ಕೂಟ ಗೆದ್ದಿದ್ದು ಇದೇ ಸಂಸ್ಥೆಯ ನೆರ ವಿಂದಲ್ಲವೇ? ಈ ಬಗ್ಗೆ ಉತ್ತ ರಿಸಿ” ಎಂದು ತಿರುಗೇಟು ನೀಡಿದ್ದಾರೆ. 

Advertisement

1. ಅಷ್ಟಕ್ಕೂ ಕೇಂಬ್ರಿಡ್ಜ್ ಅನಾಲಿ ಟಿಕಾ ಅಂದ್ರೆ ಏನು?
ಇದು ಗ್ರಾಹಕರ ಕುರಿತ ಸಂಶೋಧನೆ ಮಾಡುವ ಸಂಸ್ಥೆ. ಅಂದ್ರೆ, ನಿರ್ದಿಷ್ಠ ಗ್ರಾಹಕರ ಆಸಕ್ತಿ, ಬೇಕು ಬೇಡ ಗಳ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಕೊಡುವುದು. ಅಲ್ಲದೆ ನಿರ್ದಿಷ್ಟ ಮಂದಿಗೆ ಜಾಹೀರಾತು ತಲುಪುವ ಮತ್ತು ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತದೆ.

2. ಯಾರ ಪರ ಕೆಲಸ ಮಾಡಿದೆ?
ಈ ಸಂಸ್ಥೆ ಮೇಲ್ಪಂಕ್ತಿಗೆ ಬಂದಿದ್ದು ಅಮೆರಿಕ ಚುನಾವಣೆಯಲ್ಲಿ. ಮೊದಲು ಟೆಡ್‌ ಕ್ರೂಸ್‌ ಬಳಿಕ, ಟ್ರಂಪ್‌ ಪರವಾಗಿ ಕೆಲಸ ಮಾಡಿತು. ಬಳಿಕ ಬ್ರಿಟನ್‌ನ ಬ್ರೆಕ್ಸಿಟ್‌ ವೋಟಿಂಗ್‌ನಲ್ಲೂ “ಲೀವ್‌'(ಐರೋಪ್ಯ ಒಕ್ಕೂಟದಿಂದ ಹೊರಗೆ ಹೋಗುವ) ಪರವಾಗಿ ಕೆಲಸ ಮಾಡಿತ್ತು. ಭಾರತದ್ದು ಸೇರಿ ವಿವಿಧ ದೇಶಗಳ 200 ಚುನಾವಣೆಗಳಲ್ಲಿ ಈ ಸಂಸ್ಥೆ ಕೆಲಸ ಮಾಡಿದೆ.

3. ಸಂಸ್ಥೆಯ ಮೇಲಿರುವ ಆರೋಪವೇನು?
ಅಮೆರಿಕದ ಅಧ್ಯಕ್ಷೀಯ ಚುನಾವಣೆ ವೇಳೆ ಫೇಸ್‌ ಬುಕ್‌ನ 50 ದಶ ಲಕ್ಷ ಬಳಕೆದಾರರ ಮಾಹಿತಿ ಕದ್ದು, ಇವರ ಆಸಕ್ತಿಗಳನ್ನು ಅರಿತು ಅವರ ಮನಸ್ಸು ಬದಲಾಯಿಸಲು ಪ್ರೇರೇಪಿಸಿದ್ದು. ಆದರೆ ಈ ಆರೋಪವನ್ನು ಕಂಪೆನಿ ನಿರಾಕರಿಸಿದೆ. 

ಭಾರತಕ್ಕೆ ಏಕೆ ಆತಂಕ?
ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಫೇಸ್‌ ಬುಕ್‌ ಬಳಕೆದಾರರಿರುವುದು ಭಾರತೀಯರು. 2018ರ ಜನವರಿಯ ವರದಿ ಪ್ರಕಾರ ಭಾರತದಲ್ಲಿನ ಫೇಸ್‌ ಬುಕ್‌ ಬಳಕೆದಾರರ ಸಂಖ್ಯೆ 25 ಕೋಟಿ. ಆದರೆ, ಅಮೆ ರಿ ಕದಲ್ಲಿನ ಗ್ರಾಹ ಕರ 
ಸಂಖ್ಯೆ 23 ಕೋಟಿ.

ಟಾಪ್‌ ತ್ರಿ  ಬಳಕೆದಾರರು
ಭಾರತ 25 ಕೋಟಿ
ಅಮೆರಿಕ 23 ಕೋಟಿ
ಬ್ರೆಜಿಲ್‌ 13 ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next