Advertisement

ವಿವಾದದ ಅಲೆ; ಫೇಸ್‌ಬುಕ್‌ ಸಾರ್ವಜನಿಕ ನೀತಿ ಮುಖ್ಯಸ್ಥೆ ಆಂಖಿದಾಸ್‌ ರಾಜೀನಾಮೆ

05:37 PM Oct 31, 2020 | Nagendra Trasi |

ನವದೆಹಲಿ: ದ್ವೇಷಪೂರಿತ ಭಾಷಣ’ ವಿವಾದದ ಅಲೆ ಕೊನೆಗೂ ಫೇಸ್‌ಬುಕ್‌ ಇಂಡಿಯಾದ ಸಾರ್ವಜನಿಕ ನೀತಿ ಮುಖ್ಯಸ್ಥೆ ಆಂಖಿದಾಸ್‌ ಹುದ್ದೆ ಕಿತ್ತುಕೊಂಡಿದೆ. ಆಂಖಿದಾಸ್‌ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ಬಗ್ಗೆ ಸಂಸ್ಥೆ ಮಂಗಳವಾರ ಘೋಷಿಸಿದೆ.

Advertisement

ಭಾರತದಲ್ಲಿ ರಾಜಕೀಯ ನಾಯಕರ ದ್ವೇಷಪೂರಿತ ಭಾಷಣ ನಿಯಂತ್ರಿಸಲು ಫೇಸ್‌ ಬುಕ್‌ ವಿಫ‌ಲವಾಗಿದೆ ಎಂಬ ಗಂಭೀರ ಆರೋಪದ ನಡುವೆ ಆಂಖಿದಾಸ್ ಪದತ್ಯಾಗ ಮಾಡಿದ್ದಾರೆ.

ಸಾರ್ವಜನಿಕ ಸೇವೆಗಳಲ್ಲಿ ಮುಂದುವರಿಯುವ ಸಲುವಾಗಿ ಅವರು ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಭಾರತದ ಆರಂಭದ ದಿನಗಳಲ್ಲಿ ಫೇಸ್‌ಬುಕ್‌ ಗೆ ಬುನಾದಿ ಹಾಕಿಕೊಡುವಲ್ಲಿ ಆಂಖೀ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ಫೇಸ್‌ಬುಕ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಜಿತ್‌ ಮೋಹನ್‌ ತಿಳಿಸಿದ್ದಾರೆ.

ಸಿಂಗಲ್‌ ಪೇರೆಂಟ್‌ ಪುರುಷ ನೌಕರರಿಗೆ ಸಿಸಿಎಲ್‌ ಸಿಹಿ
ಸರ್ಕಾರಿ ಉದ್ಯೋಗದಲ್ಲಿರುವ ಪುರುಷ ಸಿಂಗಲ್‌ ಪೇರೆಂಟ್‌ಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಮಗುವಿನ ಆರೈಕೆಗೆ ವಿಶೇಷ ರಜೆ ಪಡೆಯುವ ಅವಕಾಶವನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಲ್ಪಿಸಿದೆ.

ಮದುವೆಯಾಗದೆ ಮಗು ಹೊಂದಿದ ಪುರುಷ, ಪತ್ನಿಯನ್ನು ಕಳೆದುಕೊಂಡ ಗಂಡ ಮತ್ತು ವಿಚ್ಛೇದಿತನಿಗೆ ಮಕ್ಕಳ ಆರೈಕೆ ರಜೆ (ಸಿಸಿಎಲ್‌) ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

Advertisement

ಇದುವರೆಗೆ ಕೇವಲ ಮಹಿಳಾ ಸಿಬ್ಬಂದಿಗೆ ಮಾತ್ರವೇ 2 ವರ್ಷ ಸಂಭಾವನೆ ಸಹಿತ ಸಿಸಿಎಲ್‌ ಪಡೆಯಲು ಅವಕಾಶವಿತ್ತು. ಆದರೆ, ಈಗ ಪುರುಷ ಸಿಂಗಲ್‌ ಪೇರೆಂಟ್‌ ವ್ಯಕ್ತಿ ಮೊದಲ ವರ್ಷ ಮಗುವಿನ ಆರೈಕೆಗೆ ಶೇ.100 ಸಂಭಾವನೆಸಹಿತ ರಜೆ ಪಡೆಯಬಹುದು.

ಎರಡನೇ ವರ್ಷ ಶೇ.80 ಸಂಭಾವನೆಯೊಂದಿಗೆ ಸಿಸಿಎಲ್‌ ತೆಗೆದುಕೊಳ್ಳಬಹು ದಾಗಿದೆ. ವಿಕಲಾಂಗ ಮಗುವಿದ್ದರೆ 22 ವರ್ಷ ತುಂಬು ವವರೆಗೂ ಸಿಸಿಎಲ್‌ ಪಡೆಯಲು ಈ ಹಿಂದೆ ಅವಕಾಶವಿತ್ತು. ಈಗ ವಯೋಮಿತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next