ಜೈಪುರ: ಎಳವೆಯಲ್ಲಿ ನಡೆಸಲಾಗಿದ್ದ ಮದುವೆಯನ್ನು ಅಸಿಂಧುಗೊಳಿಸಲು ಯುವತಿ ಫೇಸ್‌ಬುಕ್‌ನಲ್ಲಿ ಪತಿ ಅಪ್ ಲೋಡ್ ಮಾಡಿದ್ದ ಫೋಟೋವನ್ನು ದಾಖಲೆಯಾಗಿ ನೀಡಿ, ಗೆದ್ದಿದ್ದಾಳೆ. ಆಕೆಯ ಸಾಕ್ಷ್ಯಗಳನ್ನು ರಾಜಸ್ಥಾನ ಕೋರ್ಟೊಂದು ಒಪ್ಪಿಕೊಂಡು ಆಕೆಯ ಪರ ತೀರ್ಪು ನೀಡಿದೆ.
ಸುಶೀಲಾ ಬಿಶ್ನೋಯಿ (19) ಎಂಬಾಕೆ ತಾನು ಅಪ್ರಾಪ್ತ ವಯಸ್ಕಳಾಗಿದ್ದಾಗ ಒತ್ತಾಯ ದಿಂದ ಬಾಲ್ಯವಿವಾಹ ಮಾಡಲಾಗಿತ್ತು ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿ ದ್ದರು. ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಕೀರ್ತಿ ಭಾರತಿ ಎಂಬುವರ ನೆರವಿನ ಜತೆ ಕಾನೂನು ಹೋರಾಟ ಆರಂಭಿಸಿದ್ದರು.
ಪ್ರಕರಣ ವಿಚಾರಣೆಗೆ ಬಂದಾಗ ಸುಶೀಲಾಳನ್ನು ವಿವಾಹವಾಗಿದ್ದ ವ್ಯಕ್ತಿ ಅದನ್ನು ನಿರಾಕರಿಸಿದ. ಛಲಬಿಡದ ಬಿಶ್ನೋಯ್ ಮಕ್ಕಳ ಹಕ್ಕುಗಳ ಹೋರಾಟದ ಸಂಘಟನೆ ಜತೆ ಶೋಧ ಕಾರ್ಯ ನಡೆಸಿದರು. ಫೇಸ್ ಬುಕ್‌ನಲ್ಲಿ ಮದುವೆಯಾಗಿದ್ದ ಸಂದರ್ಭದಲ್ಲಿ ಅಪ್‌ಲೋಡ್ ಮಾಡಲಾಗಿದ್ದ ಫೋಟೋಗಳು, ಅದಕ್ಕೆ ಶುಭ ಹಾರೈಕೆ ಮತ್ತು ಅಭಿನಂದನೆ ಸಂದೇಶಗಳ ದಾಖಲೆಗಳನ್ನು ಸಂಗ್ರ ಹಿಸಿ ನ್ಯಾಯಾಲಯಕ್ಕೆ ನೀಡಲಾಯಿತು.
2010ರಲ್ಲಿ ಸುಶೀಲಾ ಕುಟುಂಬ ವರ್ಗದ ಆಪ್ತರ ಸಮ್ಮುಖದಲ್ಲಿ ರಹಸ್ಯವಾಗಿ ಈ ವಿವಾಹ ನಡೆದಿತ್ತು. ಬಳಿಕ ಹೆತ್ತವರು ಪತಿಯ ಮನೆಗೆ ತೆರಳುವಂತೆ ಒತ್ತಡ ಹೇರುತ್ತಿದ್ದರು. ಒಂದು ಹಂತದಲ್ಲಿ ಆಕೆ ಮನೆ ಬಿಟ್ಟು ಓಡಿ ಹೋಗಿದ್ದಳು.
ನಂತರ ಕೀರ್ತಿ ಅವರ ಸಂಘಟನೆಯ ನೆರವು ಪಡೆದು ಹೋರಾಟ ಆರಂಭಿಸಿದ್ದಳು. “ಸಾವು ಮತ್ತು ಜೀವನ ಇವೆ ರಡು ನನ್ನ ಮುಂದೆ ಇದ್ದ ಆಯ್ಕೆಗಳಾಗಿದ್ದವು. ಆದರೆ ನಾನು ಧೈರ್ಯದಿಂದ ಜೀವನ ಎದುರಿಸಲು ನಿರ್ಧರಿಸಿದೆ’ ಎಂದು ಸುಶೀಲಾ ಹೇಳಿಕೊಂಡಿದ್ದಾಳೆ.