Advertisement

ಫೇಸ್‌ ಬುಕ್‌ ನ್ಯೂಸ್‌ ಫೀಡ್‌ ವಿಡಿಯೋಗಳಿಗೆ ಇನ್ನು ಸಿಗಲಿದೆ ಸಂಭಾವನೆ

11:38 AM Jan 28, 2017 | |

ನ್ಯೂಯಾರ್ಕ್‌ : ಜನಪ್ರಿಯ ಸಾಮಾಜಿಕ ಅಂತರ್ಜಾಲ ತಾಣ ಫೇಸ್‌ ಬುಕ್‌ ಇದೀಗ ತನ್ನ ವೇದಿಕಯಲ್ಲಿನ ಹೂರಣದ ಗುಣಮಟ್ಟವನ್ನು ಸುಧಾರಿಸುವತ್ತ ಗಮನಾರ್ಹ ಹೆಜ್ಜೆ ಇರಿಸಿದೆ. 

Advertisement

ಫೇಸ್‌ ಬುಕ್‌ನಲ್ಲಿನ ವಿಡಿಯೋಗಳು ಮೂರು ಸೆಕೆಂಡುಗಳಿಗಿಂತಲೂ ಹೆಚ್ಚು ಹೊತ್ತು ವೀಕ್ಷಿಸಲ್ಪಟ್ಟಲ್ಲಿ ಅಂತಹ ವಿಡಿಯೋಗಳನ್ನು ಹಾಕಿರುವವರ ಹೆಸರನ್ನು ಫೇಸ್‌ ಬುಕ್‌ ಪ್ರಕಟಿಸಲಿದೆ  ಮಾತ್ರವಲ್ಲದೆ ಅವರಿಗೆ ಗೌರವ ಸಂಭಾವನೆಯನ್ನೂ ಕೊಡಲಿದೆ. ಇದೇ ವೇಳೆ ಅತ್ಯಂತ ಕನಿಷ್ಠ ವೀಕ್ಷಣೆ ಪಡೆಯುವ ವಿಡಿಯೋಗಳನ್ನು ಫೇಸ್‌ ಬುಕ್‌ ತನ್ನ ಜಾಲ ತಾಣದಿಂದ ತೆಗೆದುಹಾಕಲಿದೆ.

ವಿಡಿಯೋ ಗುಣಮಟ್ಟಗಳನ್ನು ತೀರ್ಮಾನಿಸಲು ಫೇಸ್‌ ಬುಕ್‌ ಹೊಸ ಆಲ್‌ಗೋರಿದಂ ವ್ಯವಸ್ಥೆಯನ್ನು ಬಳಸಿಕೊಳ್ಳಲಿದೆ.  ಬಳಕೆದಾರರ ನ್ಯೂಸ್‌ ಫೀಡ್‌ನ‌ಲ್ಲಿನ ವಿಡಿಯೋಗಳಿಗೆ ಅದು ಕ್ರಮಾಂಕವನ್ನು ನೀಡಲಿದೆ. 

ಫೇಸ್‌ ಬುಕ್‌ ಇಂದು ಶನಿವಾರ ಪ್ರಕಟಿಸಿರುವ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ “ಇಂದಿನಿಂದ ನಾವು ನಮ್ಮ ನ್ಯೂಸ್‌ ಫೀಡ್‌ಗಳಲ್ಲಿನ ವಿಡಿಯೋಗಳಿಗೆ ಕ್ರಮಾಂಕ ನೀಡುವ ಕ್ರಮದಲ್ಲಿ ಬದಲಾವಣೆ ತಂದಿರುವುದಾಗಿ ಪ್ರಕಟಿಸುತ್ತಿದ್ದೇವೆ; ಯಾವ ವಿಡಿಯೋಗಳು ಯಾವ ಪ್ರಮಾಣದಲ್ಲಿ ವೀಕ್ಷಿಸಲ್ಪಡುತ್ತವೆ ಎಂಬುದರ ಮೇಲೆ ಅವುಗಳ ಗುಣಮಟ್ಟವನ್ನು ಆಧರಿಸಿ ಕ್ರಮಾಂಕ ನೀಡುತ್ತೇವೆ’ ಎಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next