Advertisement

2021 ಕ್ಕೆ ಇನ್ನಷ್ಟು ಭದ್ರತೆಯೊಂದಿಗೆ ಜನರನ್ನು ತಲುಪಲಿರುವ ಫೇಸ್ ಬುಕ್

12:25 PM Dec 26, 2020 | Adarsha |

ನವದೆಹಲಿ: 2020ಕ್ಕೆ ವಿದಾಯ ಹೇಳಿ 2021ರ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಎಲ್ಲರಿಗೂ ಹೊಸತನಗಳ ಬಯಕೆ ಇದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವದ ಬೃಹತ್ ಸಾಮಾಜಿಕ ಜಾಲ ತಾಣವಾದ ಫೇಸ್ ಬುಕ್ ಒಂದಷ್ಟು ಹೊಸ ಬದಲಾವಣೆಗಳೊಂದಿಗೆ ಗ್ರಾಹಕರಿಗೆ ಮತ್ತಷ್ಟು ಭದ್ರತೆಯನ್ನು ನೀಡಲು ಮುಂದಾಗಿದೆ.

Advertisement

ಫೇಸ್ ಬುಕ್ ಬಳಕೆದಾರರು ತಮ್ಮ ಖಾತೆಗೆ ಲಾಗ್ ಇನ್ ಮಾಡುವ ಮೊದಲು ಅಥವಾ ಡೆಸ್ಕ್ ಟಾಪ್ ಕಂಪ್ಯೂಟರ್ ಗೆ ಲಾಗಿನ್ ಆಗುವಾಗ ಹಾರ್ಡ್ ಸೆಕ್ಯೂರಿಟಿ ಕೀಯನ್ನು ಬಳಸಿಯೇ ಲಾಗಿನ್ ಆಗುವ ರೀತಿಯಲ್ಲಿ ಫೇಸ್ ಬುಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹಾರ್ಡ್ ಕೀ ಕುರಿತಾದ ಮಾಹಿತಿಯನ್ನು ಫೇಸ್ ಬುಕ್ ರಿಟೇಲರ್ ಬಳಿ ತಿಳಿದುಕೊಳ್ಳುವ ಮೂಲಕ ರಿಜಿಸ್ಟರ್ ಆಗುವಂತೆ ಸಂಸ್ಥೆ ತಿಳಿಸಿದೆ.

ಬಳಕೆದಾರರು ತಮ್ಮ ಮೊಬೈಲ್ ಅಥವಾ ಡೆಸ್ಕ್ ಟಾಪ್ ಮೂಲಕ ಲಾಗ್ ಇನ್ ಆಗುವವರು ತಮ್ಮ ಲಾಗಿನ್ ಗಿಂತಲೂ ಮೊದಲು ತಮ್ಮ ಗುರುತನ್ನು ದೃಢಪಡಿಸಬೇಕಿದೆ. ಹೀಗೆ ದೃಢೀಕರಿಸಿದ ನಂತರವೇ ಬಳಕೆದಾರರು ತಮ್ಮ ಖಾತೆಯನ್ನು ಬಳಸಲು ಅವಕಾಶ ದೊರೆಯುತ್ತದೆ ಎನ್ನಲಾಗಿದೆ.

ಇದನ್ನೂ ಓದಿ:ಆ್ಯಪ್ ಸಾಲದ ಜಾಲ-ಸಾಲಗಾರರಿಗೆ ಬೆದರಿಕೆ ಕೇಸ್: ಚೀನಿ ಪ್ರಜೆ ಸೇರಿ ನಾಲ್ವರ ಬಂಧನ

ಬಳಕೆದಾರರ ಖಾತೆಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಫೇಸ್ ಬುಕ್ ನ ಸೆಕ್ಯೂರಿಟಿ ವಿಭಾಗದ ಮುಖ್ಯಸ್ಥರಾಗಿರುವ ನಥಾನಿಯಲ್ ಗ್ಲೀಚೆರ್ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಫಾಸ್ಟ್‌ ಟ್ಯಾಗ್‌ ಮೂಲಕ ಒಂದೇ ದಿನದಲ್ಲಿ 80 ಕೋಟಿ ರೂ. ಸಂಗ್ರಹ

ಇತ್ತೀಚಿನ ದಿನಗಳಲ್ಲಿ ಹಲವಾರು ಸಿನಿಮಾ ತಾರೆಯರು ಮತ್ತು ಪ್ರಭಾವಿ ವ್ಯಕ್ತಿಗಳ ಫೇಸ್ ಬುಕ್ ಖಾತೆಗಳು ಹ್ಯಾಕ್ ಆಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಫೇಸ್ ಬುಕ್ ಸಂಸ್ಥೆ ಕೈಗೊಂಡಿದೆ ಎಂದು ವರದಿಯಾಗಿದೆ.

ಮುಂಬರುವ ವರ್ಷದಲ್ಲಿ ತಮ್ಮ ಜಾಲತಾಣದ ಮೂಲಕ ಇನ್ನಷ್ಟು ಹೆಚ್ಚಿನ ಭದ್ರತಾ ಸೌಲಭ್ಯಗಳನ್ನು ಗ್ರಾಹಕರಿಗೆ  ನೀಡಲಿದ್ದೇವೆ ಹಾಗೂ ಜಾಗತಿಕವಾಗಿ ತಮ್ಮನ್ನು ತಾವು ಇನ್ನಷ್ಟು ವಿಸ್ತರಿಸಿಕೊಳ್ಳಲಿದ್ದೇವೆ ಎಂದು ಫೇಸ್ ಬುಕ್ ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next