Advertisement

ಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ಥರ ನೆರವಿಗೆ ಮುಂದಾದ Facebok:1 ಮಿಲಿಯನ್ ಡಾಲರ್ ದೇಣಿಗೆ

09:53 AM Jan 17, 2020 | Mithun PG |

ನ್ಯೂಯಾರ್ಕ್: ಆಸ್ಟ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚುವಿಗೆ ಅಪಾರ ಪ್ರಮಾಣದ ಅರಣ್ಯ ಪ್ರದೇಶ ನಾಶವಾಗಿದ್ದು ಕೋಟ್ಯಾಂತರ ಪ್ರಾಣಿ ಪಕ್ಷಿಗಳು ಬೆಂಕಿಗಾಹುತಿಯಾಗಿದೆ.  ಈ ಕಾರಣದಿಂದ ಫೇಸ್ ಬುಕ್ ಸಂಸ್ಥೆ 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಸ್ ಗಳನ್ನು ಆಸ್ಟ್ರೇಲಿಯನ್ ರೆಡ್ ಕ್ರಾಸ್ ಗೆ ಕಾಳ್ಗಿಚ್ಚು ಪರಿಹಾರ ಕಾರ್ಯಗಳಿಗೆ ದೇಣಿಗೆ ನೀಡಲು ಮುಂದಾಗಿದೆ.

Advertisement

ಪ್ರಸ್ತುತ ಫೇಸ್ ಬುಕ್  ವಿಪ್ಪತ್ತು ನಕ್ಷೆಗಳನ್ನು ಆಸ್ಟ್ರೇಲಿಯಾದಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಪರಿಹಾರ ಕಾರ್ಯಗಳಿಗೆ, ಶೈಕ್ಷಣಿಕ ಸಂಸ್ಥೆಗಳು ಬಳಸುತ್ತಿವೆ.

ಆರೋಗ್ಯ ಮತ್ತು ತುರ್ತು ಪರಿಸ್ಥಿತಿಗಳಿಗೆ 500,000 ಉಸಿರಾಟದ ಮಾಸ್ಕ್ ಗಳನ್ನು ಫೂರೈಸಲು  ಕೂಡ ನಿರ್ಧರಿಸಲಾಗಿದೆ. ಹವಮಾನ ವೈಪರಿತ್ಯದಿಂದಾಗಿ ಉಂಟಾಗಿರುವ ಪ್ರಕೃತಿ ವಿಕೋಪಕ್ಕೆ ದೇಶವೇ ಬೆಚ್ಚಿ ಬೀಳುವಂತಾಗಿದೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ವನ್ಯಜೀವಿಗಳ ರೋದನ ಕೂಡ ಮುಗಿಲು ಮುಟ್ಟಿದೆ. ಕೋಲಾ ಪ್ರಾಣಿಗಳ ಸಂತತಿ ವಿನಾಶದ ಅಂಚಿಗೆ ತಲುಪಿದೆ.  ಈ ಸಂದರ್ಭದಲ್ಲಿ ಪ್ರತಿಯೊಬ್ಬರು ನೆರವಾಗುವುದು ಅತ್ಯಗತ್ಯ ಎಂದು ಫೇಸ್ ಬುಕ್ ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next