Advertisement

ಟ್ರಂಪ್‌ ಜಾಹೀರಾತು ತೆಗೆದ ಫೇಸ್ಬುಕ್ ; ಸಂಘಟಿತ ದ್ವೇಷದ ಕಾರಣಕ್ಕಾಗಿ ಈ ಕ್ರಮ

02:43 AM Jun 20, 2020 | Hari Prasad |

ವಾಷಿಂಗ್ಟನ್‌: ಮೈಕ್ರೋ ಬ್ಲಾಗಿಂಗ್‌ ಜಾಲತಾಣ ಟ್ವಿಟರ್‌ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಕ್ಷೇಪಾರ್ಹ ಟ್ವೀಟ್‌ ತೆಗೆದು ಹಾಕಿತ್ತು. ಅದೇ ಮಾದರಿಯನ್ನು ಫೇಸ್‌ಬುಕ್‌ ಕೂಡ ಅನುಸರಿಸಿದೆ.

Advertisement

ಸಂಘಟಿತ ದ್ವೇಷದ ವಿರುದ್ದದ ತನ್ನ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚುನಾವಣಾ ಪ್ರಚಾರದ ಪೋಸ್ಟ್‌ಗಳು ಮತ್ತು ಜಾಹೀರಾತು­ಗಳನ್ನು ತನ್ನ ವೇದಿಕೆಯಿಂದ ತೆಗೆದುಹಾಕಿರುವುದಾಗಿ ಫೇಸ್‌ಬುಕ್‌ ತಿಳಿಸಿದೆ.

ತಲೆಕೆಳಗಾದ ಕೆಂಪು ತ್ರಿಕೋನದ ಚಿಹ್ನೆಗಳು ಟ್ರಂಪ್‌ ಅವರ ಜಾಹೀರಾತು­ಗಳಲ್ಲಿ ಇದ್ದವು. ಇದು ರಾಜಕೀಯ ಕೈದಿಗಳನ್ನು ಗುರುತಿಸಲು ನಾಜಿಗಳು ಈ ಹಿಂದೆ ಬಳಸುತ್ತಿದ್ದ ಸಂಕೇತ ಕೂಡ ಆಗಿದೆ.

‘ಫ್ಯಾಸಿಸ್ಟ್‌ ವಿರೋಧಿ ಆಂದೋ­ಲನಕ್ಕೆ ಸಹಿ ಮಾಡಿ’, ಎಂದು ಫೇಸ್‌ಬುಕ್‌ ಬಳಕೆ­ದಾರನೊಬ್ಬ ಹಾಕಿದ್ದ ಪೋಸ್ಟ್‌ಗಳನ್ನು ಟ್ರಂಪ್‌ ಮತ್ತು ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರಿಗೆ ಸಂಬಂಧಿಸಿದ ಪೇಜ್‌ಗಳು ಮತ್ತು ‘ಟೀಮ್‌ ಟ್ರಂಪ್‌’ ಫೇಸ್‌ಬುಕ್‌ ಖಾತೆಗಳಲ್ಲಿ ಹಂಚಿ­ಕೊಳ್ಳ­­ಲಾ­­ಗಿತ್ತು.  ಆದರೆ, ಇದನ್ನು ಸಂಘಟಿತ ದ್ವೇಷ ಎಂದು ಪರಿಗಣಿ­ಸುವುದಾಗಿ ಫೇಸ್‌ಬುಕ್‌ ತಿಳಿಸಿದೆ. ಅಲ್ಲದೆ, ಆ ಪೋಸ್ಟ್‌, ಜಾಹೀರಾತು­ಗಳನ್ನು ತೆಗೆದು ಹಾಕಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್‌ ಅಭಿಯಾನದ ವಕ್ತಾರ ಟಿಮ್‌ ಮುರ್ತಾಗ್‌, ಇದೊಂದು ಐತಿಹಾಸಿಕ ಚಿಹ್ನೆಯಾಗಿದ್ದು, ಫ್ಯಾಸಿಸ್ಟ್‌ ವಿರೋಧಿ ಸಂಕೇ­ತ­ವಾಗಿದೆ. ಆದ್ದರಿಂದ ನಾವು ಫ್ಯಾಸಿಸ್ಟ್‌ ವಿರೋಧದ ಕುರಿತಾದ ಜಾಹೀರಾತಿನಲ್ಲಿ ಇದನ್ನು ಅಳವಡಿಸಿದ್ದೆವು. ಅದರಲ್ಲಿ ದ್ವೇಷ ಹರಡುವ ಉದ್ದೇಶ ಇಲ್ಲ ಎಂದು ತಿಳಿಸಿದ್ದಾರೆ. ಟ್ರಂಪ್‌ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾ­ಗಿದ್ದು, ಜಾಹೀರಾತುಗಳಿಗಾಗಿ 10 ಸಾವಿರ ಡಾಲರ್‌ಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡ­ಲಾಗಿದೆ.

Advertisement

ಅಮೆರಿಕ ಅಧ್ಯಕ್ಷರಿಗೆ ಮತ್ತೆ ಟ್ವಿಟರ್‌ ಬಿಸಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಟ್ವಿಟ್ಟರ್‌ ಮತ್ತೊಮ್ಮೆ ಬಿಸಿಮುಟ್ಟಿಸಿದೆ. ಟ್ರಂಪ್‌ ಪೋಸ್ಟ್‌ ಮಾಡಿದ್ದ ವಿಡಿಯೊ ಟ್ವೀಟ್‌ ಕೆಳಗೆ ‘ಮಾಧ್ಯಮದ ದುರುಪ­ಯೋಗ’ ಎಂದು ಟ್ವಿಟ್ಟರ್‌ ಕ್ಯಾಪ್ಷನ್‌ ಹಾಕಿದೆ. ಒಂದು ಬಿಳಿ ಪುಟಾಣಿ, ಕಪ್ಪು ಕಂದಮ್ಮನನ್ನು ಓಡಿಸಿಕೊಂಡು ಹೋಗು­ತ್ತಿರುವ ವಿಡಿಯೊವನ್ನು ಸಿಎನ್‌ಎನ್‌ ವರದಿ ಮಾಡಿದೆ ಎಂದು ಟ್ರಂಪ್‌ ಪೋಸ್ಟ್‌ ಹಾಕಿದ್ದರು. ಆ ವಿಡಿಯೋ ಹಿಂದಿನ ವಾಸ್ತವವನ್ನೂ ಟ್ರಂಪ್‌ ತೋರಿಸಿದ್ದರು.

ಅವೆರಡೂ ಮಕ್ಕಳು ಪರಸ್ಪರ ಅಪ್ಪಿಕೊಂಡು ಆಡುತ್ತಿದ್ದವು. ಆದರೆ, ಸಿಎನ್‌ಎನ್‌ ಅಟ್ಟಿಸಿಕೊಂಡು ಹೋಗು­ತ್ತಿರುವ ದೃಶ್ಯವನ್ನು ಮಾತ್ರವೇ ತುಂಡರಿಸಿ ವರದಿ ಮಾಡಿದೆ ಎನ್ನುವುದು ಟ್ರಂಪ್‌ ಪೋಸ್ಟ್‌ನ ಆರೋಪ. ಟ್ವಿಟ್ಟರ್‌ನ ಕ್ಯಾಪ್ಷನ್‌ ಕೊಂಡಿಯನ್ನು ಕ್ಲಿಕ್ಕಿಸಿದರೆ ಸಿಎನ್‌ಎನ್‌ ಮಾಡಿದ್ದ 2019ರ ನೈಜ ವಿಡಿಯೊ ಕಾಣಿಸುತ್ತದೆ. ಅಲ್ಲಿ ವಾಸ್ತವದಲ್ಲಿ ಸಿಎನ್‌ಎನ್‌ ಆ ಎರಡು ಕಂದಮ್ಮಗಳು ಪರಸ್ಪರ ಅಪ್ಪಿಕೊಂಡಿದ್ದನ್ನು ಮಾತ್ರವೇ ತೋರಿಸಿ ವರದಿ ಮಾಡಿರುವುದು ಸ್ಪಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next