ಲಂಡನ್: ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ವಿರುದ್ಧ ರೊಹಿಂಗ್ಯಾ ನಿರಾಶ್ರಿತರು 11.31 ಲಕ್ಷ ಕೋಟಿ ರೂ. ಮೌಲ್ಯದ ಮೊಕದ್ದಮೆ ಹೂಡಿದ್ದಾರೆ.
ಮಯನ್ಮಾರ್‌ನಲ್ಲಿ ರೊಹಿಂಗ್ಯಾ ಗುಂಪಿನ ಮೇಲೆ 2017ರಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಫೇಸ್‌ಬುಕ್‌ನಲ್ಲಿನ ದ್ವೇಷಪೂರಿತ ಪೋಸ್ಟ್‌ಗಳೇ ಕಾರಣ ಎಂದು ನಿರಾಶ್ರಿತರು ಅವರು, ಆರೋಪಿಸಿದ್ದಾರೆ.
ರೊಹಿಂಗ್ಯಾ ಸಮುದಾಯದ ಪರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ನ್ಯಾಯವಾದಿಯೊಬ್ಬರು ವಾದಿಸಲು ಒಪ್ಪಿಕೊಂಡಿದ್ದಾರೆ ಮತ್ತು ಅವರ ಪರವಾಗಿ 11.31 ಲಕ್ಷ ಕೋಟಿ ರೂ. ಮೊಕದ್ದಮೆ ಹೂಡಿದ್ದಾರೆ.
2018ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರೂ ಕೂಡ ಹಿಂಸಾಕೃತ್ಯಗಳ ಬಗ್ಗೆ ತನಿಖೆ ನಡೆಸಿದ್ದರು. ಅವರು ಕೂಡ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದ ದ್ವೇಷಪೂರಿತ ಮಾಹಿತಿಯೇ ಹಿಂಸಾಚಾರಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ:ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!
ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಅಸುನೀಗಿದ್ದರೆ, 1.50 ಲಕ್ಷ ಮಂದಿಗೆ ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ವಿಶ್ವಸಂಸ್ಥೆ ಪ್ರತಿಪಾದಿಸಿತ್ತು.