ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಪ್ರಚಾರ ಮಾಡುವ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಇಲಾಖೆ ಮುಂದಾಗಿದೆ.
Advertisement
ಸರ್ಕಾರದ ಸೂಚನೆ, ಯೋಜನೆ ಅಥವಾ ಕಾರ್ಯಕ್ರಮ, ಸಭಾ ನಡವಳಿ, ತುರ್ತು ಸಭೆ, ಅಧಿಕಾರಿಗಳು ಮತ್ತು ಸಚಿವರ ಪ್ರವಾಸ, ಇತ್ಯಾದಿ ಮಾಹಿತಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಕಾಲೇಜಿನ ಪ್ರಾಂಶುಪಾಲರಿಗೆ ತಲುಪಿಸಲು ಇಲಾಖೆಯಲ್ಲಿ ಪ್ರತ್ಯೇಕವಾದ ವ್ಯವಸ್ಥೆ ಇದೆ.ವೆಬ್‌ಸೈಟ್, ದೂರವಾಣಿ, ಅಂಚೆ ಅಥವಾ ಇ-ಮೇಲ್ ಮೂಲಕ ಕೇಂದ್ರ ಕಚೇರಿಯಿಂದ ಅಧಿಕಾರಿಗಳಿಗೆ ಹಾಗೂ ಪ್ರಾಂಶುಪಾಲರಿಗೆ ಮಾಹಿತಿ ರವಾನೆ ಮಾಡಲಾಗುತ್ತದೆ. ಇದನ್ನು ಹೊರತುಪಡಿಸಿ ಬೇರಾವುದೇ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲು ಮೇಲಾಧಿಕಾರಿಗಳ ಅನುಮತಿ
ಪಡೆಯಬೇಕು. ಆದರೆ, ಇಲಾಖೆಯ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮೇಲಾಧಿಕಾರಿಗಳ ಅನುಮತಿ ಇಲ್ಲದೇ ಆದೇಶ, ಟಿಪ್ಪಣಿ ಹಾಳೆ, ಪತ್ರಗಳು ಮತ್ತು ಗೌಪ್ಯ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿರುವ ಬಗ್ಗೆ ಇಲಾಖೆಗೆ ದೂರು ಬಂದಿದೆ. ಇದರ ಪತ್ತೆಗೂ ಬೇಕಾದ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಇಲಾಖಾ ವ್ಯಾಪ್ತಿಯ ಬೆಂಗಳೂರಿನ ಕೇಂದ್ರ ಕಚೇರಿ, ವಿಭಾಗೀಯ ಮಟ್ಟದ ಕಚೇರಿ, ಜಿಲ್ಲಾ ಕಚೇರಿ ಮತ್ತು ಕಾಲೇಜುಗಳಲ್ಲಿ ಇರುವ ಕಡತದೊಳಗಿನ ಆದೇಶ, ಟಿಪ್ಪಣಿ ಹಾಳೆ, ಪತ್ರಗಳು, ಗೌಪ್ಯ ಮಾಹಿತಿ, ಅಧಿಕಾರಿಗಳ ಪ್ರವಾಸದ ಕಾರ್ಯಕ್ರಮ ಹಾಗೂ ಇತರೆ ದಾಖಲೆಗಳನ್ನು ಹಿರಿಯ ಅಧಿಕಾರಿಗಳ ಒಪ್ಪಿಗೆ ಇಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಬಿತ್ತರಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸೈಬರ್ ಕ್ರೈಂ ನಿಯಮಾನುಸಾರ ವಾಟ್ಸ್‌ಆ್ಯಪ್ ಅಡ್ಮಿನ್‌ಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
Related Articles
● ಎಂ.ಶಿಲ್ಪಾ, ಮುಖ್ಯ ಆಡಳಿತಾಧಿಕಾರಿ, ಕಾಲೇಜು ಶಿಕ್ಷಣ ಇಲಾಖೆ
Advertisement
*ರಾಜು ಖಾರ್ವಿ ಕೊಡೇರಿ