Advertisement

ಬೈಕ್‌ ಪತ್ತೆ ಮಾಡಲು ಸಹಕಾರಿಯಾದ ಫೇಸ್‌ಬುಕ್‌

11:28 AM Aug 11, 2018 | |

ದೊಡ್ಡಬಳ್ಳಾಪುರ: ಮನೆ ಕಾಂಪೌಂಡ್‌ನ‌ಲ್ಲಿ ನಿಲ್ಲಿಸಿದ್ದ ಬೈಕ್‌ ಕಳುವಾಗಿದ್ದನ್ನು ಫೇಸ್‌ ಬುಕ್‌ನಲ್ಲಿ ಹಾಕಿದ್ದ ಪರಿಣಾಮ ಚಿಂತಾಮಣಿಯಲ್ಲಿ ಕಳುವಾಗಿದ್ದ ಬೈಕ್‌ ದೊಡ್ಡಬಳ್ಳಾಪುರದಲ್ಲಿ ಪತ್ತೆಯಾದ ಅಪರೂಪದ ಪ್ರಕರಣ ಶುಕ್ರವಾರ ನಡೆದಿದೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಿವಾಸಿ ಸುನಿಲ್‌ಕುಮಾರ್‌ ಅವರ ಮನೆ ಮುಂದೆ ನಿಲ್ಲಿಸಿದ್ದ ಆರ್‌.ಎಕ್ಸ್‌ ಬೈಕ್‌ ಶುಕ್ರವಾರ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಕಳವು ಮಾಡಿದ್ದಾರೆ. ಯಾರಿಗಾದರೂ ಸಿಕ್ಕಿದ್ದಲ್ಲಿ ತಿಳಿಸಿ, ಹುಡುಕಿಕೊಟ್ಟವರಿಗೆ ಬಹುಮಾನ ನೀಡಲಾಗುವುದು ಎಂದು ತನ್ನ ಫೇಸ್‌ಬುಕ್‌ನಲ್ಲಿ ಬೈಕ್‌ ಮೇಲೆ ಕುಳಿತಿರುವ ಫೋಟೋ ಹಾಗೂ ಬೈಕ್‌ ನಂಬರ್‌ ಪೋಸ್ಟ್‌ ಮಾಡಿದ್ದರು.

ದೊಡ್ಡಬಳ್ಳಾಪುರದಲ್ಲಿ ಪತ್ತೆ: ಸುನಿಲ್‌ಕುಮಾರ್‌ ಹಾಕಿದ್ದ ಫೇಸ್‌ಬುಕ್‌ನ ಪೋಸ್ಟ್‌ ನೋಡಿದ್ದ ದೊಡ್ಡಬಳ್ಳಾಪುರದ ಸುನಿಲ್‌ಕುಮಾರ್‌ ಗೆಳೆಯ ಸಂತೋಷ್‌ ಎಂಬಾತ ಗಮನಿಸಿದ್ದ. ಆರ್‌.ಎಕ್ಸ್‌ ಬೈಕ್‌ನಲ್ಲಿ ಪೆಟ್ರೋಲ್‌ ಮುಗಿದಿದ್ದರಿಂದ ನಗರದ ರೈಲ್ವೆ ನಿಲ್ದಾಣದ ಸಮೀಪದ ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸಿಕೊಳ್ಳಲು ಕಳ್ಳರು ಬೈಕ್‌ ತಳ್ಳಿಕೊಂಡು ಬರುತ್ತಿದ್ದನ್ನು ಈತ ಗಮನಿಸಿ, ಬೈಕ್‌ನ ಗುರುತು ಪತ್ತೆ ಹಚ್ಚಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ನಗರ ಠಾಣೆ ಪೊಲೀಸರು,  ಬೈಕ್‌ ಸಮೇತ ಇಬ್ಬರು ಬೈಕ್‌ ಕಳ್ಳರನ್ನು ಬಂಧಿಸಿದ್ದಾರೆ. ಈ ಬಗ್ಗೆ ಇನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next