Advertisement
ಈ ಸಾಫ್ಟ್ ವೇರ್ ತೆಗೆಯುವುದರಿಂದ ಏನಾಗಲಿದೆ? ಫೇಸ್‌ಬುಕ್‌ನ ಮೂರನೇ ಒಂದು ಭಾಗದಷ್ಟು ಜನ ಈ ಫೇಸಿಯಲ್ ರೆಕಗ್ನಿಷನ್ ಸಾಫ್ಟ್ವೇರ್ ಬಳಕೆ ಮಾಡಿ ಬೇರೆಯವರಿಗೆ ಫೋಟೋ ಟ್ಯಾಗ್ ಮಾಡುತ್ತಿದ್ದರು. ಈಗ ಇದನ್ನು ತೆಗೆಯುವುದರಿಂದ ಕೋಟ್ಯಂತರ ಬಳಕೆದಾರರ ಫೇಸಿಯಲ್ ರೆಕಗ್ನಿಷನ್ ಟೆಂಪ್ಲೇಟ್‌ಗಳು ಡಿಲೀಟ್ ಆಗಲಿವೆ. ಜತೆಗೆ ಇನ್ನು ಮುಂದೆ ಗ್ರೂಫ್ ಫೋಟೋ ಹಾಕಿದಾಗ, ಆಟೋಮ್ಯಾಟಿಕ್ ಆಗಿ ಇತರರನ್ನು ಟ್ಯಾಗ್ ಮಾಡುವ ಆಪ್ಶನ್ ಕೇಳುವುದಿಲ್ಲ.
ಫೇಸ್‌ಬುಕ್ ವಿರುದ್ಧ ಈ ಸಾಫ್ಟ್ವೇರ್ ಸಂಬಂಧವೇ ಖಾಸಗಿತನದ ಉಲ್ಲಂಘನೆಯ ದೂರುಗಳು ದಾಖಲಾಗಿವೆ. ಅಮೆರಿಕದಲ್ಲಿ ಈ ಬಗ್ಗೆ ತನಿಖೆಯೂ ನಡೆಯುತ್ತಿದೆ. ಹೀಗಾಗಿಯೇ ಫೇಸ್‌ಬುಕ್ ಈ ವ್ಯವಸ್ಥೆಯನ್ನೇ ತೆಗೆದುಹಾಕಲು ಹೊರಟಿದೆ. ಫೇಸ್‌ಬುಕ್‌ನಿಂದ ಇದನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆಯೇ?
ಹೌದು, ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಈ ಡಿಸೆಂಬರ್ ವೇಳೆಗೆ ಫೇಸಿಯಲ್ ರೆಕಗ್ನಿಷನ್‌ನ ಟೆಂಪ್ಲೇಟ್‌ಗಳನ್ನು ಡಿಲೀಟ್ ಮಾಡಲಿದೆ. ಆದರೆ, ಇದಕ್ಕೆ ಬದಲಾಗಿ ಮುಂದುವರಿದ ದೀಪ್‌ಫೇಸ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿದೆ.
Related Articles
ಭಾರತದ ಕೆಲವು ವಿಮಾನ ನಿಲ್ದಾಣಗಳು ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಈ ವ್ಯವಸ್ಥೆಯುಂಟು. ಈ ಮೂಲಕ ರಿಯಲ್ ಟೈಮ್‌ನಲ್ಲೇ ಜನರನ್ನು ವಿವಿಧ ಕೆಮರಾಗಳ ಮೂಲಕ ಪರಿಶೀಲಿಸಲಾಗುತ್ತಿದೆ.
Advertisement
ಏನಿದು ಫೇಸಿಯಲ್ ರೆಕಗ್ನಿಷನ್ ವ್ಯವಸ್ಥೆ?ಬಳಕೆದಾರರೊಬ್ಬರು ಗುಂಪಿನ ಫೋಟೋವೊಂದನ್ನು ಅಪ್‌ಲೋಡ್ ಮಾಡಿದರೆ, ಈ ಫೋಟೋದಲ್ಲಿರುವ ಇತರರನ್ನು ಚಹರೆ ಆಧಾರದಲ್ಲಿ ಗುರುತಿಸಿ ಅವರನ್ನು ಈ ಫೋಟೋಗೆ ಟ್ಯಾಗ್ ಮಾಡಬಹುದೇ ಎಂದು ಕೇಳುತ್ತಿತ್ತು. ಈ ವ್ಯವಸ್ಥೆಯ ಮೂಲವೇ ಫೇಸಿಯಲ್ ರೆಕಗ್ನಿಷನ್ ಸಾಫ್ಟ್ವೇರ್.