Advertisement

ಉಗ್ರನ FB ಖಾತೆ ರದ್ದು

08:00 AM Jul 16, 2018 | Team Udayavani |

ಲಾಹೋರ್‌: ಮುಂಬಯಿ ದಾಳಿ ಸಂಚುಕೋರ, ಉಗ್ರ ಹಫೀಜ್‌ ಸಯೀದ್‌ ನ ರಾಜಕೀಯ ಪಕ್ಷ MMLನ ಫೇಸ್‌ ಬುಕ್‌ ಖಾತೆಯನ್ನು ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೂ ಕೆಲವೇ ದಿನಗಳಿಗೆ ಮುನ್ನ ರದ್ದುಗೊಳಿಸಲಾ ಗಿದೆ ಎಂದು ತಿಳಿದುಬಂದಿದೆ. ಮಿಲಿ ಮುಸ್ಲಿಂ ಲೀಗ್‌ ನ ಫೇಸ್‌ ಬುಕ್‌ ಪುಟ ಹಾಗೂ ಹಲವು ಖಾತೆಗಳನ್ನೂ ನಿಷ್ಕ್ರಿಯಗೊಳಿಸಲಾಗಿದೆ. ಭಾರತ, ಪಾಕಿಸ್ತಾನ ಹಾಗೂ ಇತರ ದೇಶಗಳ ಚುನಾವಣೆ ವೇಳೆ ಧನಾತ್ಮಕ ಅಂಶಗಳನ್ನು ಬಿಂಬಿಸುವ ಮತ್ತು ದುರ್ಬಳಕೆ ತಡೆಯುವುದಕ್ಕೆ ಫೇಸ್‌ ಬುಕ್‌ ಬದ್ಧವಾಗಿದೆ ಎಂದು ಇತ್ತೀಚೆಗಷ್ಟೇ ಸಂಸ್ಥೆ ಮುಖ್ಯಸ್ಥ ಝುಕರ್‌ಬರ್ಗ್‌ ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next