Advertisement

ಸ್ಪರ್ಧೆಯನ್ನು ಎದುರಿಸಿ ಮುನ್ನಡೆಯಬೇಕಿದೆ: ಕೇಶವ ಕುಮಾರ್‌

10:33 PM Oct 01, 2020 | mahesh |

ಕಾಟಿಪಳ್ಳ: ಬ್ರಾಹ್ಮಣರ ಸಂಘ ಕಾಟಿಪಳ್ಳ-ಕೃ ಷ್ಣಾಪುರ ಇದರ ವತಿಯಿಂದ ಎಸೆಸೆಲ್ಸಿ ಹಾಗೂ ಪಿಯುಸಿ ಸಾಧಕರಿಗೆ ಸಮ್ಮಾನ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಮೂಲನಾಗ ಬ್ರಹ್ಮಸ್ಥಾನ ಕಾಟಿಪಳ್ಳದಲ್ಲಿ ಇತ್ತೀಚೆಗೆ ಜರಗಿತು.

Advertisement

ಉತ್ತಮ ಅಂಕ ಪಡೆದು ತೇರ್ಗಡೆಯಾದ 20 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಪಿಯುಸಿಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದ ಶಿಶಿರ್‌ ವಿ.ಎಸ್‌. ಅವರಿಗೆ ಪ್ರತಿಭಾ ಪುರಸ್ಕಾರ, ಸಮ್ಮಾನ ಸಹಿತ ಇತರ ಅರ್ಹ 9 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ವಿದ್ಯಾರ್ಥಿಗಳನ್ನು ಸಮ್ಮಾನಿಸಿ ಮಾತನಾಡಿದ, ಎಂಆರ್‌ಪಿಎಲ್‌ ಜನರಲ್‌ ಮ್ಯಾನೇಜರ್‌ ಕೇಶವ ಕುಮಾರ್‌ ಕೆ. ಅವರು ವಿದ್ಯಾರ್ಥಿಗಳಿಗೆ ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಜನೆಯಲ್ಲಿರುವ ಪೈಪೋಟಿಯನ್ನು ಎದುರಿಸಿ ನಾವು ಮುನ್ನಡೆಯಬೇಕಿದೆ ಎಂದರು.

ಅಧ್ಯಕ್ಷ ದೇವಸ್ಯ ವಾಸುದೇವ ರಾವ್‌ ಅವರು ವಿದ್ಯಾನಿ ಧಿಗೆ ನಿಸ್ವಾರ್ಥ ಮನಸ್ಸಿನಿಂದ ಸಹಕರಿಸಿದ ಸ್ಥಳೀಯ ಎಂಆರ್‌ಪಿಎಲ್‌ ಉದ್ಯೋಗಿಳಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರಧಾನ ಕಾರ್ಯದರ್ಶಿ ಟಿ. ದಿನೇಶ್‌ ರಾವ್‌ ಅವರು ಬ್ರಾಹ್ಮಣ ಸಂಘಟನೆ ಬೆಳೆದು ಬಂದ ಹಾದಿ ಹಾಗೂ ಪರಸ್ಪರ ಸಹಕಾರ, ಸಹಬಾಳ್ವೆಯ ಬಗ್ಗೆ ಮಾಹಿತಿ ನೀಡಿ ಸದಸ್ಯರನ್ನು ಅಭಿನಂದಿಸಿದರು.

Advertisement

ಸಂಘದ ಪದಾಧಿಕಾರಿಗಳಾದ ಬಿ. ರಘುರಾಮ ತಂತ್ರಿ, ಕೆ. ರಾಘವೇಂದ್ರ ರಾವ್‌, ಜಯಲಕ್ಷ್ಮೀ ಟಿ., ರಾಘವೇಂದ್ರ ರಾವ್‌, ವರುಣ್‌ ಡಿ. ರಾವ್‌, ಭರತ್‌ ಪಟೇಲ್‌, ಹರೀಶ್‌ ಭಟ್‌, ಟಿ.ಪಿ. ಶ್ರೀನಿವಾಸ, ಬಿ. ಸುರೇಂದ್ರ ರಾವ್‌, ಶ್ರೀನಿವಾಸ ಐತಾಳ, ಯೋಗೀಶ್‌ ರಾವ್‌, ಎಂ.ಎಸ್‌. ಪ್ರಭಾಕರ್‌, ಮನೋಹರ್‌ ಕೆ., ಶ್ರಾವ್ಯಾ ಕೆ., ಕಾರ್ತಿಕ್‌, ಸುಬ್ರಹ್ಮಣ್ಯ ಮಯ್ಯ, ಗೋಪಾಲ ಮಯ್ಯ, ಪಟೇಲ್‌ ಶ್ರೀನಿವಾಸ ರಾವ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next