Advertisement

ಸವಾಲು ಎದುರಿಸಿ ಸಾಧನೆಯ ಶಿಖರ ಏರಿ: ಡಿಸಿ

11:58 AM Apr 14, 2022 | Team Udayavani |

ಧಾರವಾಡ: ಶಿಕ್ಷಣ ಮೂಲಕ ಎಂತಹ ಕಠಿಣ ಸವಾಲುಗಳನ್ನೂ ಕೂಡ ಎದುರಿಸಲು ಸಾಧ್ಯವಿದೆ ಎಂದು ಡಿಸಿ ನಿತೇಶ ಪಾಟೀಲ ಹೇಳಿದರು.

Advertisement

ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಾ|ಬಿ.ಆರ್‌.ಅಂಬೇಡ್ಕರ್‌ ಜಯಂತಿ ಮುನ್ನಾ ದಿನ ಅಂಗವಾಗಿ ನಗರದ ಡಾ|ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಂಡಿದ್ದ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸವಾಲುಗಳನ್ನು ಮೆಟ್ಟಿಲಾಗಿಸಿಕೊಂಡು ಸಾಧನೆಯ ಉತ್ತುಂಗಕ್ಕೆ ಏರಬಹುದು ಎಂದರು. ಆಗಿನ ಕಾಲದ ಅನೇಕ ಸಂಕಷ್ಟಗಳ ನಡುವೆಯೂ ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಹಂತಕ್ಕೇರಿದ ಡಾ|ಬಿ.ಆರ್‌.ಅಂಬೇಡ್ಕರ್‌ ಅವರು ಕೋಲಂಬಿಯಾ ವಿವಿ, ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಂತಹ ಉನ್ನತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿ ವಿದ್ವತ್ತು, ಜ್ಞಾನ ಗಳಿಸಿ ಹಗಲಿರುಳು ಕಷ್ಟಪಟ್ಟು ಭಾರತದ ಒಳಿತಿಗೆ ಸಮ ಸಮಾಜದ ನಿರ್ಮಾಣಕ್ಕೆ ಸಂವಿಧಾನ ಮೂಲಕ ಭದ್ರ ಬುನಾದಿ ಹಾಕಿದರು ಎಂದರು.

ಕರ್ನಾಟಕ ವಿವಿ ಪ್ರಾಧ್ಯಾಪಕ ಡಾ|ಅರವಿಂದ ಮೂಲಿಮನಿ ಮಾತನಾಡಿ, ರಾಜಪ್ರಭುತ್ವ, ವಂಶಪಾರಂಪರ್ಯ ಆಡಳಿತಕ್ಕೆ ತಡೆಯೊಡ್ಡಿ ಪ್ರಜಾಪ್ರಭುತ್ವ ಮಾದರಿ ಸರ್ಕಾರ ಬರಲು ಡಾ|ಬಿ. ಆರ್‌. ಅಂಬೇಡ್ಕರ್‌ ಅವರು ನೀಡಿದ ಕೊಡುಗೆ ಅಮೂಲ್ಯವಾದುದು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್‌ ಮಾತನಾಡಿದರು.

Advertisement

ಡಾ|ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಚಳವಳಿಗಳ ಕುರಿತು, ಕವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|ಸುಭಾಸ್‌ ಹುಲ್ಲಣ್ಣವರ ಗೋಷ್ಟಿಯಲ್ಲಿ ವಿಚಾರಗಳನ್ನು ಮಂಡಿಸಿದರು.

ಜಿಪಂ ಸಿಇಒ ಡಾ|ಸುರೇಶ ಇಟ್ನಾಳ ಅಧ್ಯಕ್ಷತೆ ವಹಿಸಿದ್ದರು. ಡಿಸಿಪಿ ಗೋಪಾಲ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಡಾ|ಎನ್‌. ಆರ್‌.ಪುರುಷೋತ್ತಮ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಸಿದ್ಧಲಿಂಗಪ್ಪ ಕರೆಮ್ಮನವರ, ಇಂದುಮತಿ ಶಿರಗಾಂವ, ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ರೇಣುಕಪ್ಪ ಕೇಲೂರ, ಭೀಮರಾವ್‌ ಸವಣೂರ, ವಿದ್ಯಾ ನರಸಪ್ಪನವರ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಮಹಾದೇವಿ ಸಣ್ಣೇರ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next