ಡ್ರೆಸ್‌ಗೆ ಹೊಂದುವ ಮ್ಯಾಚಿಂಗ್ ಟ್ರೆಂಡಿ ಸರಗಳು, ಕಿವಿ ಓಲೆಗಳು, ಬ್ರೇಸ್ಲೆಟ್‌ಗಳಂಥ ಆ್ಯಕ್ಸೆಸರೀಸ್ ಧರಿಸಿ ಸಕತ್ ಸ್ಟೈಲಿಷ್ ಆಗಿ ಕಾಣುವ ಹುಡುಗಿಯರು ತಲೆಗೂ ಕೂಡ ಆ್ಯಕ್ಸಸರೀಸ್ ಬಳಸುವ ಕುರಿತು ಇನ್ನೂ ಯೋಚನೆ ಮಾಡಿದಂತೆ ಕಾಣುತ್ತಿಲ್ಲ. ತಲೆಗೆ ಕ್ಲಿಪ್, ಹೇರ್ ಬೋ, ಹೇರ್ ಬ್ಯಾಂಡ್ ಅಲ್ಲದೇ ಇನ್ಯಾವ ಆ್ಯಕ್ಸಸರೀಸ್ ಇವೆ. ಇವೆಲ್ಲಾ ಸಿಕ್ಕಾಪಟ್ಟೆ ಹಳತು. ಇವಲ್ಲದೇ ತಲೆಗೆ ಎಂತ ಆ್ಯಕ್ಸಸರೀಸ್ ಹಾಕುವುದು ಎಂದು ಯೋಚಿಸುತ್ತಿದ್ದೀರಾ. ತಲೆಗೆ “ಹೆಡ್ ಸ್ಕಾರ್ಪ್’ ಅಂತ ಹೊಸತೊಂದು ಟ್ರೆಂಡ್ ಸೃಷ್ಟಿಯಾಗಿದೆ. ಇದು ನೀವಂದುಕೊಂಡಂತೆ ಮೆಟಲ್ ಆ್ಯಕ್ಸೆಸರಿ ಅಲ್ಲ, ಇದು ಬಟ್ಟೆಯ ಆ್ಯಕ್ಸೆಸರಿ. ತಲೆಗೆ ಹೆಡ್ ಸ್ಕಾರ್ಪ್ ಅನ್ನು ವಿವಿಧ ರೀತಿಯಲ್ಲಿ ಕಟ್ಟಿ ಹುಡುಗಿಯರು ಫ್ಯಾಷನ್ ಮಾಡಿದ್ದು ನೋಡಿದ್ದೇವೆ.
ಅದರಲ್ಲೂ ಪ್ರವಾಸ ಅಥವಾ ಟ್ರೆಕ್ಕಿಂಗ್ ಹೋಗುವ ಹುಡುಗಿಯರು ತಲೆಗೆ ವಿವಿಧ ರೀತಿಯಲ್ಲಿ ಸ್ಕಾರ್ಪ್ ಕಟ್ಟಿ ಬಿಂದಾಸ್ ಆಗಿ ಕಾಣಿಸಿಕೊಳ್ಳುವುದನ್ನು ಟ್ರೆಂಡ್ ಮಾಡಿದ್ದರು. ಅದರಂತೇ ಈ ಹೆಡ್ ರ್ಯಾಪ್ ಕೂಡಾ ಬಿಂದಾಸ್ ಆಗಿ ಕಾಣಿಸಿಕೊಳ್ಳಲು ಬಯಸುವ ಹುಡುಗಿಯರಿಗಾಗಿಯೇ ಇರುವ ಸ್ಟೈಲ್.
ಈ ಹೆಡ್ ಸ್ಕಾರ್ಪ್‌ಗ್ಳು ಅಂಗಡಿಗಳಲ್ಲಿ ಸಿಗುತ್ತವೆ. ಆದರೆ ಸದ್ಯ ಎಲ್ಲೆಂದರಲ್ಲಿ ಕೈಗೆಟುಕುತ್ತಿಲ್ಲ. ಆದರೆ ನಿಮ್ಮ ಹೆಡ್ ರ್ಯಾಪನ್ನು ನೀವೇ ಮಾಡಿಕೊಳ್ಳಬಹುದು. ನಿಮ್ಮ ಡ್ರೆಸ್ಸಿಗೆ ಹೊಂದುವಂತೆ ಕಲರ್‌ಫುಲ್ ಆಗಿ ಮಾಡಿಕೊಳ್ಳಬಹುದು.
– ತೀರಾ ಸಿಂಪಲ್ ಆಗಿ ಹೆಡ್ ಸ್ಕಾರ್ಪ್ ತಯಾರಿಸುವ ವಿಧಾನವೊಂದಿವೆ. ನಿಮ್ಮ ಹಳೆಯ ಟೀ-ಶರ್ಟನ ಕೆಳಭಾಗವನ್ನು ಅಡ್ಡಕ್ಕೆ ಕತ್ತರಿಸಿಕೊಳ್ಳಿ. ಬಳಿಕ ವೃತ್ತಾಕಾರವಾಗಿ ಇರಿಸಿರಿ. ಬಳಿಕ ಇಂಟು(x) ಆಕಾರವಾಗಿ ಮಡಚಿ ಒಂದು ತುದಿಯನ್ನು ಮತ್ತೂಂದು ತುದಿ ಮೇಲೆ ಇರಿಸಿ. ಇರಡೂ ಪದರಗಳನ್ನು ಸೇರಿಸಿರಿ. ಸ್ಕಾರ್ಪ್‌ನ ಗಂಟು ಮೇಲೆ ಕಾಣುವಂತೆ ತಲೆಗೆ ಹಾಕಿಕೊಳ್ಳಿ.
– ಟೀ ಶರ್ಟ್ ಅಥವಾ ಇನ್ಯಾವುದಾದರೂ ಬಟ್ಟೆಯನ್ನು ಉದ್ದಕೆ ಕತ್ತರಿಸಿಕೊಳ್ಳಿ. ಪ್ಲಸ್ ಆಕಾರವಾಗಿ ಒಂದರ ಮೇಲೊಂದನ್ನು ಇರಿಸಿರಿ. ಎರಡೂ ತುದಿಗಳು ಸೇರುವಂತೆ ಮಡಚಿಕೊಳ್ಳಿ. ಕತ್ತರಿಸಿದ್ದ ಒಂದು ತುಂಡಿನ ತುದಿ ಮತ್ತೂಂದು ತುಂಡಿನ ತುದಿ ಜೊತೆ ಸೇರಿಸಿ ಹೊಲೆದುಕೊಳ್ಳಿ. ಗಂಟು ಮೇಲೆ ಬರುವಂತೆ ತಲೆಗೆ ಹಾಕಿಕೊಳ್ಳಿ. ಬಾಕಿ ಉಳಿಯುವ 2 ತುದಿಗಳನ್ನು ಕಟ್ಟಿಕೊಳ್ಳಿ. ಹೆಡ್ ಸ್ಕಾರ್ಪ್ ಜೊತೆ ಕೂದಲನ್ನೂ ಎತ್ತಿ ಕಟ್ಟಿಕೊಳ್ಳಲು ಈ ಹೆಡ್ ಸ್ಕಾರ್ಪ್ ಹೇಳಿ ಮಾಡಿಸಿದಂತಿರುತ್ತದೆ. ಎರಡೆರಡು ಬಟ್ಟೆಗಳನ್ನು ಸೇರಿಸಿ ತಯಾರಿಸಿಕೊಳ್ಳುವುದರಿಂದ 2 ಬೇರೆ ಬೇರೆ ಬಣ್ಣಗಳ ಬಟ್ಟೆ ಬಳಸಿದರೆ ಇನ್ನೂ ಚಂದ. ಆದರೆ ಎರಡೂ ಬಟ್ಟೆಗಳೂ ವಿರುದ್ಧ ಬಣ್ಣಗಳಾಗಿರಲಿ.
– ಮೇಲೆ ತಯಾರಿಸುವ ಹೆಡ್ ಸ್ಕಾರ್ಪ್‌ನ್ನೇ ಮತ್ತೂಂದು ವಿಧಾನದಲ್ಲಿ ತಲೆಗೆ ಹಾಕಿಕೊಳ್ಳಬಹುದು. ತಲೆಯ ಮೇಲ್ಭಾಗದಲ್ಲಿ ಗೊಂಡೆ ಕಟ್ಟಿಕೊಳ್ಳಬೇಕು. ಹೆಡ್‌ಸ್ಕಾರ್ಪ್‌ನ ಹೊಲೆದುಕೊಂಡಿರುವ ಭಾಗವನ್ನು ಹಣೆಗೆ ಸಮೀಪ ಬರುವಂತೆ ಹಾಕಿಕೊಂಡು, ಹೊಲೆಯದೇ ಇರುವ ಭಾಗವನ್ನು ಗೊಂಡೆಯ ಕೆಳ ಭಾಗದಲ್ಲಿ ಕಟ್ಟಬೇಕು. ಇದು ನಿಮಗೆ ರೆಟ್ರೋ ಲುಕ್ಕನ್ನೂ ನೀಡಿತ್ತದೆ.
– ಈ ರೀತಿಯ ಹೆಡ್‌ಬ್ಯಾಂಡ್ ಸ್ಟೈಲ್ ಜನಪ್ರಿಯವಾಗ್ತಿದೆ. ಇದು ರೆಟ್ರೋ ಲುಕ್ ನೀಡೋ ಕಾರಣ ಔಟಿಂಗ್‌ಗೆ ಹೋಗುವಾಗ ಈ ಹೇರ್‌ಸ್ಟೈಲ್ ಮಾಡಿಕೊಳ್ಳಬಹುದು.
– ಟ್ರಾವೆಲ್ ಮಾಡುವಾಗ ಹೇಳಿ ಮಾಡಿಸಿದ ಸ್ಟೈಲ್. ಆ ಕಡೆ ಕೂದಲೂ ಹಾಳಾಗಲ್ಲ. ಈ ಕಡೆ ಸ್ಟೈಲಿಶ್ ಆಗಿಯೂ ಇರುತ್ತೆ.
– ನ್ಪೋರ್ಟಿ ಲುಕ್ ನೀಡೋದು ಈ ಹೆಡ್ ಸ್ಕಾರ್ಪ್ ಸ್ಪೆಷಾಲಿಟಿ. ಆ ಥರ ಇವೆಂಟ್‌ಗಳಿಗೆ ಈ ಬಗೆ ಸ್ಕಾರ್ಪ್ ಹಾಕ್ಕೊಂಡು ಹೋದರೂ ಚೆನ್ನಾಗಿರುತ್ತೆ.
ಯಾವªಕ್ಕೋ ಒಮ್ಮೆ ಟ್ರೈ ಮಾಡಿ, ಯೂ ಟ್ಯೂಬ್‌ನಲ್ಲೂ ಈ ಬಗ್ಗೆ ವಿವರ ಸಿಗುತ್ತೆ. ಲಿಂಕ್
: https://www.youtube.com/watch?v=6pI4R3EMtKo