ಹೊಸದಿಲ್ಲಿ: “ಪಿಂಚಣಿದಾರರು ಆನ್‌ಲೈನ್ ಮೂಲಕ ಪ್ರತೀ ವರ್ಷ ಸಲ್ಲಿಸಬೇಕಿರುವ ಜೀವನ ಪ್ರಮಾಣಪತ್ರಕ್ಕೆ (ಲೈಫ್ ಸರ್ಟಿಫಿಕೆಟ್) ಮುಖ ಗುರುತು ಪತ್ತೆ ಹಚ್ಚುವ (ಫೇಸ್ ರೆಕಗ್ನಿಷನ್) ವಿಧಾನವನ್ನೇ ಅಧಿಕೃತ ಪುರಾವೆಯ ಮಾರ್ಗವಾಗಿ ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಸಿಬಂದಿ, ಸಾರ್ವಜನಿಕ ಕುಂದು ಕೊರತೆಗಳು ಹಾಗೂ ಪಿಂಚಣಿ ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ, ಪಿಂಚಣಿದಾರರು ಪ್ರತೀ ವರ್ಷ ನವೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಹೋಗಿ ಜೀವನ ಪ್ರಮಾಣಪತ್ರ ಸಲ್ಲಿಸಬೇಕು. ಬ್ಯಾಂಕ್‌ಗಳಿಗೆ ಹೋಗಲಾಗದ ಪಿಂಚಣಿದಾರರು, ಡೋರ್‌ಸ್ಟೆಪ್ ಬ್ಯಾಂಕಿಂಗ್ ಸೇರಿದಂತೆ ಕೆಲವು ಸೌಲಭ್ಯಗಳ ಮೂಲಕ ಪ್ರತೀ ವರ್ಷ ಲೈಫ್ ಸರ್ಟಿ ಫಿಕೆಟ್ ಸಲ್ಲಿಸಬಹುದಾಗಿದೆ.
ಆದರೆ ಇತ್ತೀಚೆಗೆ ಕೇಂದ್ರ ಸರಕಾರ, ಡಿಜಿಟಲ್ ಮಾದರಿಯಲ್ಲಿ ಲೈಫ್ ಸರ್ಟಿಫಿಕೆಟ್ ಸಲ್ಲಿಸುವ ವಿಧಾನವನ್ನು ಜಾರಿಗೆ ತಂದಿದ್ದು ಅದನ್ನು ಬಳಸಿಕೊಂಡು, ಮನೆಗಳಲ್ಲಿರುವ ಲ್ಯಾಪ್‌ಟಾಪ್‌ಗ್ಳು, ಸ್ಮಾರ್ಟ್ ಫೋನ್‌ಗಳಿಂದ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ಈ ಪ್ರಕ್ರಿಯೆಯ ಭಾಗವಾದ ಫೇಸ್ ರೆಕಗ್ನಿಷನ್ ಮೂಲಕ ದಾಖಲಾಗುವ ಮುಖದ ಗುರುತನ್ನೇ ಪಿಂಚಣಿದಾರರ ಅಧಿಕೃತ ಪುರಾವೆ ಯನ್ನಾಗಿ ಪರಿಗಣಿಸಲಾಗುತ್ತದೆ.