ಮೊನ್ನೆಯಷ್ಟೇ ರಾತ್ರಿಯಲ್ಲಿ ಫೇಸ್‌ಬುಕ್ ಅನ್ನು ನೋಡಲು ಅನುಕೂಲವಾಗುವಂತೆ ರಾತ್ರಿ ಆವರಣವನ್ನು (ಡಾರ್ಕ್ ಮೋಡ್) ಶುರು ಮಾಡಿದೆ. ಜೊತೆಗೆ ಸಣ್ಣ ವ್ಯಾಪಾರಿಗಳಿಗೆ ತಮ್ಮ ವಸ್ತುಗಳನ್ನು ಮಾರಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಶಾಪ್ಸ್
ಎಂಬ ಸೇವೆಯನ್ನೂ ಆರಂಭಿಸಿದೆ.
Advertisement
ಇದೀಗ ಫೇಸ್‌ಬುಕ್ ಕೇವಲ ಭಾರತೀಯ ಬಳಕೆದಾರರಿಗೆಂದೇ ಒಂದು ವಿಶೇಷ ಅನುಕೂಲ ನೀಡಿದೆ. ಇನ್ನು ಭಾರತೀಯರುತಮ್ಮ ಪ್ರೊಫೈಲ್ ಅನ್ನು ಎಲ್ಲರೂ ನೋಡದಂತೆ ಮುಚ್ಚಿಡ ಬಹುದು. ಒಮ್ಮೆ ಹೀಗೆ ಮಾಡಿಕೊಂಡರೆ, ಬಳಕೆದಾರರ ಸ್ನೇಹ
ವಲಯದಲ್ಲಿರುವ ವ್ಯಕ್ತಿಗಳಿಗೆ ಮಾತ್ರ ಪ್ರೊಫೈಲ್ ನೋಡಲು ಸಾಧ್ಯವಾಗುತ್ತದೆ. ಆದರೆ ಇದರಿಂದ ಒಂದು ನಷ್ಟವೂ ಇದೆ.
ಹೀಗೆ ಮಾಡಿಕೊಂಡ ಕೂಡಲೇ ಅವರ ಪೋಸ್ಟ್‌ಗಳು ಕೇವಲ ಸ್ನೇಹವಲಯಕ್ಕೆ ಮಾತ್ರ ತಲುಪುತ್ತವೆ.