Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರರು, ಈ ವರದಿಗಳ ಬಗ್ಗೆ ನಮಗೆ ಮಾಹಿತಿಯಿದೆ ಮತ್ತು ಹೆಚ್ಚಿನ ವಿವರಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದಿದ್ದಾರೆ. ಮೂಲಗಳ ಪ್ರಕಾರ ಒಪ್ಪಂದಗಳ ಉಲ್ಲಂಘನೆಯ ಬಗ್ಗೆ ಕಠಿನವಾಗಿ ಮೇಲ್ವಿಚಾರಣೆ ನಡೆಸಲಾಗುತ್ತದೆ. ಅಲ್ಲದೆ ದುರ್ಬಳಕೆ ಆರೋಪವನ್ನು ಗಂಭೀರವಾಗಿ ಪರಿಗಣಿಸುತ್ತದೆ. ಮೂಲಗಳ ಪ್ರಕಾರ ಎಫ್ 16 ಯುದ್ಧ ವಿಮಾನಗಳನ್ನು ಪಾಕಿಸ್ಥಾನವು ತನ್ನ ದೇಶದೊಳಗಿನ ಉಗ್ರರ ದಮನಕ್ಕೆ ಬಳಸಬೇಕು. ಇತರ ದೇಶಗಳ ಮೇಲೆ ದಾಳಿ ಅಥವಾ ಇತರ ಉದ್ದೇಶಕ್ಕೆ ಬಳಸುವುದಾದರೆ ಅಮೆರಿಕದ ಅನುಮತಿ ಪಡೆಯಬೇಕು ಎಂಬುದೂ ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಆದರೆ ಭಾರತದ ಮೇಲೆ ದಾಳಿಗೆ ಎಫ್16 ಬಳಸಿರುವುದು ಸಾಬೀತಾದರೆ ಪಾಕಿಸ್ಥಾನದ ವಿರುದ್ಧ ಅಮೆರಿಕ ಕೈಗೊಳ್ಳುವ ಕ್ರಮ ಯಾವುದು ಎಂಬುದು ಕುತೂಹಲ ಮೂಡಿಸಿದೆ. Advertisement
ಎಫ್16: ಮಾಹಿತಿ ಕೇಳಿದ ಅಮೆರಿಕ
12:30 AM Mar 03, 2019 | |
Advertisement
Udayavani is now on Telegram. Click here to join our channel and stay updated with the latest news.