Advertisement

ನೇತ್ರ ಪರೀಕ್ಷಕರಿಲ್ಲದೆ  ಯೋಜನೆ ಮರೀಚಿಕೆ!

07:53 PM Mar 05, 2021 | Team Udayavani |

ಬರಗೂರು: ನೇತ್ರದೋಷದಿಂದ ಬಳಲುತ್ತಿರುವವರಿಗಾಗಿ ಕೇಂದ್ರ ಸರ್ಕಾರ ರಾಷ್ಟ್ರಾದ್ಯಂತ ಕಣ್ಣಿನ ಶಸ್ತ್ರಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸಿದೆ. ಶಿರಾ ತಾಲೂಕಿನ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೇತ್ರ ಪರೀಕ್ಷಕರಿಲ್ಲದ ಕಾರಣ ಅನೇಕ ಮಂದಿ ಫ‌ಲಾನುಭವಿಗಳು ನೇತ್ರ ಶಸ್ತ್ರ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ.

Advertisement

ಶಿರಾ ತಾಲೂಕಿನಲ್ಲಿ ಬರಗೂರು, ತಾವರೇಕೆರೆ,ಬುಕ್ಕಾಪಟ್ಟಣ, ಹುಲಿಕುಂಟೆ, ಚಿರತಹಳ್ಳಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇದರಲ್ಲಿ ಬರಗೂರುಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೋಬಳಿ ಮಟ್ಟದಲ್ಲಿ ಪ್ರಥಮವಾಗಿ ಸ್ಥಾಪಿಸಲಾದ ಆಸ್ಪತ್ರೆಇದಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯೋಜನೆ ಇದಾಗಿದ್ದು, ಪ್ರತಿ ತಿಂಗಳಿಗೊಮ್ಮೆ ಬರಗೂರಿನಲ್ಲಿ ಮೋದಿ ಆಸ್ಪತ್ರೆಯಿಂದ ಕಣ್ಣಿನ ಕ್ಯಾಂಪ್‌ ನಡೆಸಲಾಗುತ್ತಿತ್ತು. ಕೊರೊನಾ ಹಿನ್ನೆಲೆ ಕ್ಯಾಂಪ್‌ಸ್ಥಗಿತಗೊಂಡು ಒಂದೂವರೆ ವರ್ಷಗಳಾಗಿದೆ.ಇತ್ತೀಚೆಗೆ ತಾಲೂಕಿನಲ್ಲಿ ಕೊರೊನಾ ತಗ್ಗಿದ್ದು, ಈಭಾಗದ ಕಣ್ಣಿನ ದೋಷವಿರುವ ಜನರು ಶಸ್ತ್ರ ಚಿಕಿತ್ಸೆಗೆ ಒತ್ತಾಯಿಸುತ್ತಿದ್ದಾರೆ.

ಶಿರಾ ತಾಲೂಕು ವ್ಯಾಪ್ತಿಯಲ್ಲಿಒಂದು ತಿಂಗಳಿಗೆ ಸುಮಾರು 50ರಿಂದ 100ಮಂದಿಗೆ ಪರೀಕ್ಷಿಸಿ ಮೋದಿ ಆಸ್ಪತ್ರೆಗೆ ಕರೆದೊಯ್ದು ಉಚಿತವಾಗಿಕಣ್ಣಿನ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಪ್ರಸ್ತುತ ಬರಗೂರು ಆರೋಗ್ಯ ಕೇಂದ್ರದಲ್ಲಿ ನೇತ್ರಪರೀಕ್ಷಕರಿಲ್ಲದಿದ್ದರೂ, ಬೆಂಗಳೂರಿನಿಂದ ನೇತ್ರ ಕಣ್ಣಿನ ಶಿಬಿರವನ್ನು ಏರ್ಪಡಿಸಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆಮುಂದಾಗಬಹುದು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ಇಲ್ಲಿನ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದನೇತ್ರ ಪರೀಕ್ಷಕರು ನಿವೃತ್ತಿ ಹೊಂದಿ ಒಂದೂವರೆ ವರ್ಷಗಳು ಕಳೆದರೂ ಸರ್ಕಾರ ಮತ್ತೂಬ್ಬರನ್ನುನೇಮಕ ಮಾಡಿಲ್ಲ.

ಪಾವಗಡ ತಾಲೂಕಿನ ಆರೋಗ್ಯ ಕೇಂದ್ರದಲ್ಲಿ ನೇತ್ರ ಪರೀಕ್ಷಕರಾಗಿ ಶಿರಾ ಮೂಲದನಾಗಭೂಷಣ್‌ ಎಂಬ ನೇತ್ರ ಪರೀಕ್ಷಕ 16ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟುವರ್ಷಗಳ ಕಾಲ ಕಾರ್ಯನಿರ್ವಹಿಸಿ ಬೇರೆಡೆಗೆ ವರ್ಗಾವಣೆ ಮಾಡುವುದು ನಿಯಮ. ಇವರನ್ನುಶಿರಾ ತಾಲೂಕಿಗೆ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದೂ ಯಾವುದೇ ಜನಪ್ರತಿನಿಧಿಗಳು,ಅಧಿಕಾರಿಗಳು ಸ್ಪಂದಿಸಿಲ್ಲ. ತಾಲೂಕಿನ ಶಿರಾ, ಬರಗೂರು, ಕಳ್ಳಂಬೆಳ್ಳ, ತಾವರೆಕೆರೆ ಪ್ರಾಥಮಿಕಆರೋಗ್ಯ ಕೇಂದ್ರಗಳಲ್ಲಿ ನಿಯಮಾನುಸಾರ ನೇತ್ರ ಪರೀಕ್ಷಕರಿರಬೇಕು. ಕಳ್ಳಂಬೆಳ್ಳ ಹಾಗೂ ಶಿರಾದಲ್ಲಿಪರೀಕ್ಷಕರಿದ್ದ, ಬರಗೂರು ಹಾಗೂ ತಾವರೇಕೆರೆಗಳಲ್ಲಿ ಹುದ್ದೆ ತುಂಬದಿರುವುದು ವಿಪರ್ಯಾಸ. ಖಾಸಗಿ ಆಸ್ಪತ್ರೆಗಳಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಮಾಡಿಸಿಕೊಂಡರೆ 15-20 ಸಾವಿರ ರೂ.ಗಳ ಖರ್ಚುಮಾಡಬೇಕಾಗುತ್ತದೆ. ಸರ್ಕಾರರಿಂದ ಉಚಿತವಾಗಿಚಿಕಿತ್ಸೆ ದೊರೆಯುತ್ತದೆ. ಕ್ಷೇತ್ರ ಸಂಸದರು ಹಾಗೂಶಾಸಕರು ಈಬಗ್ಗೆ ತುರ್ತಾಗಿ ಗಮನ ಹರಿಸಿಸಂಬಂಧಿಸಿದ ಆರೋಗ್ಯ ಕೇಂದ್ರಗಳಿಗೆ ನೇತ್ರ ಪರೀಕ್ಷಕರನ್ನು ನೇಮಿಸಿದರೆ ಅನೇಕ ಮಂದಿ ಅಂಧರಿಗೆದೃಷ್ಟಿ ದಾನ ಮಾಡಿದಂತಾಗುತ್ತದೆ.

ವೀರಭದ್ರಸ್ವಾಮಿ, ಬರಗೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next