Advertisement
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ನೀತಿ ಸಂಹಿತೆ ಜಾರಿ ಸಮಿತಿ, ವಾರ್ಡ್ ಮಟ್ಟದ ಚುನಾವಣಾ ವೆಚ್ಚ ವೀಕ್ಷಕರು, ಇವರ ಮೇಲೆ ನೋಡಲ್ ಅಧಿಕಾರಿ ಈ ರೀತಿಯ ಮೂರು ಹಂತದ ಜಾಲ ಚುನಾವಣಾ ವೆಚ್ಚದ ನಿಯಂತ್ರಣದ ಕೆಲಸ ಮಾಡಲಿದೆ.
Related Articles
Advertisement
30 ವೆಚ್ಚ ವೀಕ್ಷಕರುಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ 30 ಮಂದಿ ಜಂಟಿ ನಿಯಂತ್ರಕರು ಹಾಗೂ ಉಪ ನಿಯಂತ್ರಕರನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ರಾಜ್ಯ ಚುನಾವಣಾ ಆಯೋಗ ನಿಯೋಜಿಸಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ, ನೋಡಲ್ ಅಧಿಕಾರಿ ಹಾಗೂ ವಾರ್ಡ್ ಮಟ್ಟದ ವೆಚ್ಚ ವೀಕ್ಷಕರ ಮೇಲುಸ್ತುವಾರಿಯ ಕೆಲಸ ಈ ತಂಡ ಮಾಡಲಿದೆ. ಜತೆಗೆ ವಿಶೇಷ ವೀಕ್ಷಕರಾಗಿ ನಿಯೋಜಸಲ್ಪಟ್ಟಿರುವ ಏಳು ಮಂದಿ ಹಿರಿಯ ಐಎಎಸ್ ಅಧಿಕಾರಿಗಳು, ಸಾಮಾನ್ಯ ವೀಕ್ಷಕರಾಗಿ ನಿಯೋಜನೆಗೊಂಡಿರುವ 25 ಮಂದಿ ಹಿರಿಯ ಕೆಎಎಸ್ ಅಧಿಕಾರಿಗಳು ನೆರವು ನೀಡಲಿದ್ದಾರೆ. ಚುನಾವಣಾ ವೆಚ್ಚ
2011ರ ಸರ್ಕಾರದ ಅಧಿಸೂಚನೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ. ಅದರಂತೆ, ನಗರಸಭೆಯ ಅಭ್ಯರ್ಥಿಗಳಿಗೆ ಗರಿಷ್ಠ 2 ಲಕ್ಷ, ಪುರಸಭೆ ಅಭ್ಯರ್ಥಿಗಳಿಗೆ 1.50 ಲಕ್ಷ ಹಾಗೂ ಪಟ್ಟಣ ಪಂಚಾಯಿತಿ ಅಭ್ಯರ್ಥಿಗೆ 1 ಲಕ್ಷ ರೂ. ಗರಿಷ್ಟ ವೆಚ್ಚದ ಮಿತಿ ನಿಗದಿಪಡಿಸಲಾಗಿದೆ. ಇದರಲ್ಲಿ ಈ ಬಾರಿ ಅಬÂರ್ಥಿಗಳ “ಸೋಶಿಯಲ್ ಮೀಡಿಯಾ ಅಕೌಂಟ್’ಗಳಲ್ಲಿನ ಲೆಕ್ಕವೂ ಸೇರಿಸಿಕೊಳ್ಳಲಿದೆ. ಅಭ್ಯರ್ಥಿಗಳ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ವಿವರ ಕೊಡುವಂತೆ ಆಯೋಗದಿಂದ ಹೇಳಿಲ್ಲ. ಆದರೆ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಭ್ಯರ್ಥಿಗಳ ಬಲ್ಕ್ ಎಸ್ಸೆಮ್ಮೆಸ್, ವಾಟ್ಸಪ್, ಫೇಸ್‌ಬುಕ್‌ಗಳಲ್ಲಿ ಬರುವ ಅಂಶಗಳು ಚುನಾವಣಾ ವೆಚ್ಚದ ವ್ಯಾಪ್ತಿಗೆ ಬರುತ್ತಿದ್ದರೆ, ಅದನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸುವ ಬಗ್ಗೆ ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ.
– ಎನ್.ಆರ್. ನಾಗರಾಜು, ಅಧೀನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ – ರಫೀಕ್ ಅಹ್ಮದ್