Advertisement

ಅಮೆರಿಕದಿಂದ ಐ ಡ್ರಾಪ್ಸ್‌ಗಳನ್ನು ವಾಪಸ್‌ ಪಡೆದ ಭಾರತೀಯ ಕಂಪನಿ

10:03 PM Feb 03, 2023 | Team Udayavani |

ನವದೆಹಲಿ: ಅಮೆರಿಕದಲ್ಲೀಗ ಹೊಸರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಸೂಡೊಮೊನಾಸ್‌ ಅರಿಗೊನಾಸ ಎಂಬ ಬ್ಯಾಕ್ಟೀರಿಯದಿಂದ ಕಣ್ಣಿನ ಸೋಂಕು ಉಂಟಾಗಿ ಆ ದೇಶದಲ್ಲಿ ಐವರು ಅಂಧರಾಗಿದ್ದಾರೆ. ಒಬ್ಬರು ನಿಧನರಾಗಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಚೆನ್ನೈ ಮೂಲದ ಕಂಪನಿ ಗ್ಲೋಬಲ್‌ ಫಾರ್ಮಾ ಹೆಲ್ತ್‌ಕೇರ್‌; ತಾನು ತಯಾರಿಸಿದ್ದ “ಎಝಿಕೇರ್‌’ ಎಂಬ ಐ ಡ್ರಾಪ್ಸ್‌ಗಳನ್ನು ಅಮೆರಿಕದಿಂದ ಪೂರ್ಣ ಪ್ರಮಾಣದಲ್ಲಿ ವಾಪಸ್‌ ತರಿಸಿಕೊಂಡಿದೆ. ಈ ಔಷಧಗಳನ್ನು ಅಮೆರಿಕದ ಸಿಡಿಸಿ (ರೋಗನಿಯತ್ರಣ ಮತ್ತು ತಡೆ ಸಂಸ್ಥೆ) ಪರೀಕ್ಷೆಗೊಳಪಡಿಸುತ್ತಿದೆ. ಮತ್ತೊಂದು ಕಡೆ ಆ ದೇಶದ ಆಹಾರ ಮತ್ತು ಔಷಧ ನಿರ್ವಹಣೆ ಸಂಸ್ಥೆ (ಎಫ್ಡಿಎ), ಗ್ಲೋಬಲ್‌ ಫಾರ್ಮಾದ ಔಷಧ ಬಳಸದಂತೆ ಆದೇಶ ನೀಡಿದೆ. ಈ ಡ್ರಾಪ್ಸ್‌ಗಳು ಬ್ಯಾಕ್ಟೀರಿಯದಿಂದ ಹಾಳಾಗುವ ಸಾಧ್ಯತೆಯಿದೆ.

ಬ್ಯಾಕ್ಟೀರಿಯ ಬಾಧಿತವಾಗಿರುವ ಡ್ರಾಪ್ಸ್‌ಗಳ ಬಳಕೆಯಿಂದ ಶಾಶ್ವತವಾಗಿ ಅಂಧತ್ವ ಬರಬಹುದು, ಸಾವಿಗೆ ಕಾರಣವಾಗಬಹುದು ಎಂದು ಹೇಳಿದೆ. ಪ್ರಸ್ತುತ ಅಮೆರಿಕದ 12 ರಾಜ್ಯಗಳಲ್ಲಿ 55 ಮಂದಿಗೆ ಸೂಡಮೊನಾಸ್‌ ಅರಿಗೊನಾಸ ಬ್ಯಾಕ್ಟೀರಿಯದಿಂದ ಸೋಂಕು ಉಂಟಾಗಿದೆ. ಈ ಬ್ಯಾಕ್ಟೀರಿಯ ರಕ್ತ, ಶ್ವಾಸಕೋಶದಲ್ಲಿ ಸೋಂಕು ಉಂಟು ಮಾಡುತ್ತದೆ, ಗಾಯಕ್ಕೂ ಕಾರಣವಾಗುತ್ತದೆ. ಇದಕ್ಕೆ ಚಿಕಿತ್ಸೆ ನೀಡಲೂ ಆಗುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next