ಮುಳಬಾಗಿಲು: ಪ್ರತಿಯೊಬ್ಬರು ಹಾಗಾಗ ಕಣ್ಣಿನ ತಪಾಸಣೆ ಮಾಡಿಸಿ ಕೊಳ್ಳಬೇಕು. ಹಸಿರು ಸೊಪ್ಪು ಮತ್ತು ವಿಟಮಿನ್-ಎ ಇರುವ ತರಕಾರಿಗಳನ್ನು ಸೇವಿಸಬೇಕು. ಹೆಚ್ಚು-ಹೆಚ್ಚು ನೀರು ಕುಡಿದು ಕಣ್ಣನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬೇಕೆಂದು ಬಿಇಒ ಡಿ.ಗಿರಿಜೇಶ್ವರಿದೇವಿ ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ 2020- 21ನೇ ಸಾಲಿನಲ್ಲಿ ದೃಷ್ಟಿದೋಷವಿರುವ ಶಾಲಾ ಮಕ್ಕಳಿಗೆ ಉಚಿತ ಕನ್ನಡಕಗಳನ್ನು ವಿತರಿಸುವ ಉದ್ದೇಶದಿಂದ ಶಿಬಿರ ಏರ್ಪಡಿಸಲಾಗಿದ್ದು ಆವಣಿ, ಅಂಗೊಂಡಹಳ್ಳಿ, ಅಗರ, ಅಂಬ್ಲಿಕಲ್ಲು, ಬಲ್ಲ, ಬೈರಕೂರು, ಗುಡಿಪಲ್ಲಿ, ಗುಮ್ಮಕಲ್ಲು, ಹೆಬ್ಬಣಿ, ಮುದಿಗೆರೆ, ನಂಗಲಿ, ಆಲಂಗೂರು, ಟಿ.ಆರ್.ಹಳ್ಳಿ. ದೇವರಾಯಸಮುದ್ರ, ಹನುಮನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಇದನ್ನೂ ಓದಿ:ಫೋಟೋ ಶೂಟ್ ವೇಳೆ ಕಾಲುವೆಗೆ ಬಿದ್ದ ಯುವಕರು: ಇಬ್ಬರ ಶವ ಪತ್ತೆ
ಡಾ.ಸುಮಾ ಮಾತನಾಡಿ, ಶಿಕ್ಷಕರು ತರಗತಿಗಳಲ್ಲಿ ಪ್ರತಿ ಮಗುವನ್ನು ವೈಯಕ್ತಿಕವಾಗಿ ಗಮನಿಸುತ್ತಿರಬೇಕು. ಕಣ್ಣಿನ ರಕ್ಷಣೆಯ ಬಗ್ಗೆ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರಬೇಕು. ದೃಷ್ಟಿ ದೋಷವಿರುವ ಮಕ್ಕಳನ್ನು ಗುರುತಿಸಿ ತಪಾಸಣೆ ಮಾಡಿಸ ಬೇಕೆಂದರು. 80 ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕ ವಿತರಿಸಲು ಶಿಫಾರಸು ಮಾಡಿದರು. ವೈದ್ಯರಾದ ಡಾ.ಭಾರತಿ ಮತ್ತು ನೇತ್ರ ತಂತ್ರಜ್ಞಾನರಾದ ಜಿ.ಎನ್.ಶ್ರೀನಿವಾಸ್ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಜಿ.ಶ್ರೀನಿವಾಸ್ ಹಾಗೂ ಆಲಂಗೂರು ಸಿಆರ್‌ಪಿ ಎಸ್.ಶಂಕರ್, ಕ್ಷೇತ್ರ ಸಮನ್ವಯ ಶಿಕ್ಷಣದ ಸಂಪನ್ಮೂಲ ಶಿಕ್ಷಕರಾದ (ಬಿ.ಐ.ಇ.ಆರ್.ಟಿ) ಎಂ. ನಾರಾಯಣಸ್ವಾಮಿ, ಶಿವಕುಮಾರ್ ಮತ್ತು ಎನ್.ಸುಜಾತಮ್ಮ ಹಾಗೂ ಚಂದ್ರಕಾಂತ್ ಕಾರ್ಯಕ್ರಮದಲ್ಲಿ ಇದ್ದರು.