ಲಂಡನ್: ಭಾರತದಲ್ಲಿ ಭಾರೀ ಹಣಕಾಸು ಅವ್ಯವಹಾರ ನಡೆಸಿ ಇಂಗ್ಲೆಂಡ್‌ಗೆ ಪರಾರಿಯಾಗಿರುವ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಗಡೀಪಾರು ಪ್ರಕ್ರಿಯೆ ಇನ್ನಷ್ಟು ಸಲೀಸಾಗಲಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಆಗಿರುವ ಹೊಸ “ವಲಸೆ ಮತ್ತು ಸಂಚಾರ ಸಹಯೋಗ ಒಪ್ಪಂದ’ (ಎಂಎಂಪಿ) ಈ ರೀತಿಯ ಆಶಾವಾದಕ್ಕೆ ಕಾರಣ. ಈ ಒಪ್ಪಂದದಿಂದ ವಲಸೆ ವಿವಾದಗಳನ್ನು ಇತ್ಯರ್ಥಪಡಿಸಲು ನೆರವಾಗಲಿದೆ. ಹಾಗೆಯೇ ಎರಡೂ ದೇಶಗಳ ನಡುವೆ ಗಡೀಪಾರು ಪ್ರಕ್ರಿಯೆ ಇನ್ನಷ್ಟು ಸುಗಮಗೊಳ್ಳಲಿದೆ ಎಂದು ಇಂಗ್ಲೆಂಡ್ ಗೃಹ ಸಚಿವೆ ಪ್ರೀತಿ ಪಟೇಲ್ ಹೇಳಿದ್ದಾರೆ.
ಕಿಂಗ್‌ಫಿಶರ್ ಏರ್‌ಲೈನ್ಸ್ ಮಾಜಿ ಮಾಲಿಕ ವಿಜಯ್ ಮಲ್ಯ, ವಜ್ರದ ವ್ಯಾಪಾರಿ ನೀರವ್ ಮೋದಿ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಪ್ರೀತಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಆರ್ಥಿಕ ಅಪರಾಧಗಳ ಪ್ರಕರಣಗಳು ಸ್ವಲ್ಪ ಕಷ್ಟಕರ. ಮೇಲಿನಿಬ್ಬರ ಪ್ರಕರಣಗಳ ಬಗ್ಗೆ ನಾನು ಗೃಹಸಚಿವೆಯಾಗುವುದಕ್ಕೆ ಮುನ್ನವೇ ತಿಳಿದುಕೊಂಡಿದ್ದೇನೆ. ಇನ್ನು ಮುಂದೆ ಹಿಂದಿನ ಆತಂಕಗಳು ಇರುವುದಿಲ್ಲ.
ಇದನ್ನೂ ಓದಿ :ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ
ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಯಲಿವೆ ಎಂದು ಹೇಳಿದ್ದಾರೆ. ನೀರವ್ ಮೋದಿಯನ್ನು ಗಡೀಪಾರು ಮಾಡಲು ಪ್ರೀತಿ ಆದೇಶಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.