ಅರ್ಜಿದಾರರು ತಹಶೀಲ್ದಾರ್ ಅವರಿಗೆ ದೂರು ನೀಡಿದ ಪರಿಣಾಮ ಉಪನೋಂದಣಿ ಇಲಾಖಾಧಿಕಾರಿ ಅವರು ಕರ್ತವ್ಯ ನಿರತ ಸಿಬಂದಿ ಪರವಾಗಿ ಅರ್ಜಿದಾರರ ಕ್ಷಮೆ ಕೋರಿ ಹೆಚ್ಚುವರಿ ಪಡೆದುಕೊಂಡ 480 ರೂ.ಗಳನ್ನು ಹಿಂತಿರುಗಿಸಲು ಒಪ್ಪಿಕೊಂಡಿದ್ದರು. ಘಟನೆಯ ಪೂರ್ಣ ವಿವರವನ್ನು ದಾಖಲಿಸಿ ಡಿಸಿ ಅವರಿಗೆ ಸಲ್ಲಿಸಲು ತಹಶೀಲ್ದಾರ್ ಮುಂದಾಗಿದ್ದಾರೆ.
Advertisement
ಸಿಬಂದಿ ಬದಲಿಗೆ ಸೂಚನೆಪ್ರಕರಣದ ಬಗ್ಗೆ ಎಲ್ಲ ಮಾಹಿತಿ ಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಿ ದ್ದೇನೆ. ಹೆಚ್ಚುವರಿ ಹಣ ಪಡೆದು ಕೊಂಡ ಸಂದರ್ಭ ಕರ್ತವ್ಯ ನಿರತರಾಗಿದ್ದ ಸಿಬಂದಿಯನ್ನು ತತ್‌ಕ್ಷಣ ಕೈ ಬಿಟ್ಟು, ಬೇರೆ ಸಿಬಂದಿ ನಿಯೋಜಿಸುವಂತೆ ಉಪನೋಂದಣಿ ಅಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ತಹಶೀಲ್ದಾರ್ ಎನ್.ಎ. ಕುಂಞಿ ಅಹ್ಮದ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಐವರ್ನಾಡು ಗ್ರಾಮದ ಎಡಮಲೆ ನಿವಾಸಿ ಅಶೋಕ್ ಅವರು ತನ್ನ ಆಸ್ತಿ ಹಕ್ಕು ವಿಭಾಗ ಪತ್ರದ ನಕಲು ಮತ್ತು ಋಣಭಾರ ಪತ್ರಕ್ಕೆ ಡಿ.2ರಂದು ಸುಳ್ಯ ಉಪ ನೋಂದಣಿ ಕಚೇರಿಯಲ್ಲಿ ಅರ್ಜಿ ನೀಡಿದ್ದರು. ಈ ಸಂದರ್ಭ ನಿಯಾಮನುಸಾರ ಪಡೆಯಬೇಕಿದ್ದ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಪಡೆದು ಕೊಂಡ ಕಾರಣ ಅಶೋಕ್ ರಶೀದಿ ಸಹಿತ ತಹಶೀಲ್ದಾರ್‌ಗೆ ದೂರು ಸಲ್ಲಿಸಿ ದ್ದರು. ಈಗ ಡಿ.26ರಂದು ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರ ಸಾರ್ವಜನಿಕ ಅಹವಾಲು ಸ್ವೀಕಾರ ಸಂದರ್ಭ ದೂರು ಸಲ್ಲಿಸಿದ್ದಾರೆ.