Advertisement

Ram Mandir ಬರುವವರ ಸುಲಿಗೆ: 16 ಮಂದಿ ಕಳ್ಳರು ಪೊಲೀಸ್‌ ಬಲೆಗೆ

12:29 AM Feb 25, 2024 | Team Udayavani |

ಅಯೋಧ್ಯೆ: ಅಯೋಧ್ಯೆ ರಾಮಮಂದಿರ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಯಾತ್ರಾರ್ಥಿಗಳನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಬಿಹಾರ ಮೂಲದ 16 ಜನರ ಗ್ಯಾಂಗ್‌ಅನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ರಿಂದ 21ಲಕ್ಷ ರೂ. ಮೌಲ್ಯದ 11 ಚಿನ್ನದ ಸರ ಹಾಗೂ ಎರಡುಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಫೆ.10ರಂದು ರಾಮಮಂದಿರದಲ್ಲಿ ಸರಗಳ್ಳತನವಾಗಿರುವ ಬಗ್ಗೆ ಕರ್ನಾಟಕ ಮತ್ತು ತಮಿಳು ನಾಡಿನ ಭಕ್ತರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next