ಉಡುಪಿ: ಕೊಂಕಣ ರೈಲ್ವೇಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದ ಗಣೇಶ ನಾಯ್ಕ್ ಅವರನ್ನು ಉಡುಪಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಆರೋಪಿಯು ಕೊಂಕಣ ರೈಲ್ವೆ ಇಲಾಖೆಯಲ್ಲಿ ಟಿ.ಸಿ ಆಗಿರುವುದಾಗಿ ಉಡುಪಿ ಮತ್ತು ಹೊರ ಜಿಲ್ಲೆಗಳಲ್ಲಿ ಸಾರ್ವಜನಿಕರನ್ನು ನಂಬಿಸಿ ಹಣ ವಂಚಿಸಿ ಮೋಸ ಮಾಡುತ್ತಿದ್ದ. ಅ.25ರಂದು ತಾನು ಕೊಂಕಣ ರೈಲ್ವೆ ಇಲಾಖೆಯಲ್ಲಿ ಟಿ ಸಿ ಆಗಿರುವುದಾಗಿ ಹೇಳಿಕೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಆಗಿರುವ ಮಥಾಯಿಸ್ ಎಂಬವರ ಬಳಿ ಬಂದಿದ್ದು, ರೈಲ್ವೆಯಲ್ಲಿ ಉದ್ಯೋಗ ಕೊಡುವುದಾಗಿ ಮಥಾಯಿಸ್ ಅವರನ್ನು ನಂಬಿಸಿ 20,000 ಹಣ ಹಾಗೂ ದಾಖಲೆ ಪತ್ರಗಳನ್ನು ತೆಗೆದುಕೊಂಡು ವಂಚಿಸಿದ್ದನು.
ಅದೇ ರೀತಿ ಪರ್ಕಳದ ವನಿತಾರವರಿಂದ ಹಣ ಪಡೆದು ನಕಲಿ ನೇಮಕಾತಿ ಪತ್ರವನ್ನು ನೀಡಿ ,ಉದ್ಯೋಗ ಕೊಡಿಸದೆ ಮೋಸ ಮಾಡಿದ್ದನು. ಈ ಬಗ್ಗೆ ಮಥಾಯಿಸ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃತ್ತ ನಿರೀಕ್ಷಕ ಮಂಜುನಾಥ , ಉಡುಪಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕಗಳಾದ ಸಕ್ತಿವೇಲು ಮತ್ತು ವಾಸಪ್ಪ ನಾಯ್ಕ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ಈತನನ್ನು ಬಂಧಿಸಿಲಾಗಿದೆ. ಈ ಕಾರ್ಯಾಚರಣೆ ಯಲ್ಲಿ ರೈಲ್ವೆ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ಗಾಂವ್ಕರ್ ಹಾಗೂ ಸಿಬ್ಬಂದಿಯವರು ಸಹಕರಿಸಿದ್ದರು.
ಈ ಕಾರ್ಯಚರಣೆಯನ್ನು ಎಸ್ಪಿ ಎನ್. ವಿಷ್ಣುವರ್ಧನ್ ಆದೇಶದಂತೆ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಉಪಾಧೀಕ್ಷಕರು ಕಾರ್ಕಳ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಉಡುಪಿ ನಗರ ವೃತ್ತದ ಸಿ.ಪಿ.ಐ ಮಂಜುನಾಥ , ಉಡುಪಿ ನಗರ ಠಾಣೆಯ ಪಿಎಸ್‌ಐಗಳಾದ ಸಕ್ತಿವೇಲು.ಇ, ಮತ್ತು ವಾಸಪ್ಪ ನಾಯ್ಕ, ಸಿಬ್ಬಂದಿಯವರಾದ ಎಎಸ್‌ಐ ಹರೀಶ್, ಹೆಚ್‌ಸಿ ಲೋಕೇಶ್, ಹೆಚ್‌ಸಿ ರಿಯಾಝ್,ಅಹ್ಮದ್, ಹೆಚ್‌ಸಿ ಹರ್ಷ, ಹೆಚ್‌ಸಿ ಉಮೇಶ್, ಪಿಸಿ ಇಮ್ರಾನ್, ಪಿಸಿ ಸಂತೋಷ್ ರಾಠೋಡ್, ಪಿ.ಸಿ ವಿಶ್ವನಾಥ ಶೆಟ್ಟಿ , ಚಾಲಕರಾದ ರಾಘವೇಂದ್ರ ನಡೆಸಿದ್ದಾರೆ.