ಉಡುಪಿ: ಕೇಂದ್ರದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇವರು ಇಂದು ಉಡುಪಿ ಕೃಷ್ಣನ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಮಾಡಿದರು.
ನಂತರ ಪರ್ಯಾಯ ಶ್ರೀ ಕೃಷ್ಣಾಪುರ ಮಠ ಪೀಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರಿಂದ ಕೃಷ್ಣಾನುಗ್ರಹ ಪ್ರಸಾದ ಸ್ವೀಕರಿಸಿದರು. ಮಠದ ದಿವಾನರಾದ ವರದರಾಜ್ ಭಟ್ ಸಚಿವರನ್ನು ಸ್ವಾಗತಿಸಿದರು.
ಇದನ್ನೂ ಓದಿ:ವಿವಾದ ನಡುವೆಯೇ ಸಿದ್ಧವಾಯಿತು ʼಉರೀಗೌಡ ನಂಜೇಗೌಡ’ ಸಿನಿಮಾ: ಮುಹೂರ್ತಕ್ಕೆ ಡೇಟ್ ಫಿಕ್ಸ್
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ವಕ್ತಾರ ಕೆ ರಾಘವೇಂದ್ರ ಕಿಣಿ, ಪೂರ್ಣಿಮಾ ಸುರೇಶ್, ವಿಷ್ಣು ಪ್ರಸಾದ್ ಪಾಡಿಗಾರ, ಜಿಲ್ಲಾ ಮಾಧ್ಯಮ ಸಂಚಾಲಕರಾದ ಶ್ರೀನಿಧಿ ಹೆಗಡೆ, ಬಿಜೆಪಿ ಪ್ರಭುದ್ಧರ ಪ್ರಕೋಷ್ಠದ ಪಾಂಡುರಂಗ ಲಾಗ್ವಂಕರ್ ಉಪಸ್ಥಿತರಿದ್ದರು.