Advertisement
1ನೇ ತರಗತಿಯಿಂದ ಕನ್ನಡ ಮಾಧ್ಯಮ, ಕನ್ನಡಕ್ಕೆ ಪ್ರತ್ಯೇಕ ಧ್ವಜ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಸ್ಥಳೀಯ ಕನ್ನಡ ಭಾಷೆಯಲ್ಲಿ ನಡೆಸಬೇಕು ಎಂಬ ಒತ್ತಾಯ ಸೇರಿ ಕನ್ನಡ ಭಾಷೆ ಹಾಗೂ ಕನ್ನಡಿಗರ ಜೀವನಕ್ಕೆ ಸಂಬಂಧಪಟ್ಟ ವಿಚಾರಗಳು ಪದೇಪದೆ ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗುತ್ತಿವೆ. ಇದೀಗ ರಾಜ್ಯದಲ್ಲಿ ಸೃಷ್ಟಿಯಾಗಿರುವ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂಬ ಹಕ್ಕೊತ್ತಾಯದ ವಿಚಾರವೂ ಮತ್ತೆ ಮುಂಚೂಣಿಗೆ ಬಂದಿದೆ. ಈ ಕೂಗಿಗೂ ಹಲವು ದಶಕಗಳ ಇತಿಹಾಸವಿದೆ.
Related Articles
Advertisement
ರ್ಷಾನುಗಟ್ಟಲೇ ಹೋರಾಟ ನಡೆಸಿದ್ದರಿಂದ ಸರ್ಕಾರದ ಮೇಲೂ ಒತ್ತಡ ಸೃಷ್ಟಿಯಾಗಲಾರಂಭಿಸಿತು. ಮಲ್ಲೇಶ್ವರದಿಂದ ವಿಧಾನಸೌಧದವರೆಗೆ ನಡೆದ ಹೋರಾಟದಲ್ಲಿ ಸಾಮಾನ್ಯ ಕನ್ನಡಿಗನಾಗಿ ನಾನೂ ಪಾಲ್ಗೊಂಡಿದ್ದೆ ಎಂದು ಕನ್ನಡ ಪರ ಚಿಂತಕ ರಾ.ನಂ. ಚಂದ್ರಶೇಖರ್ ಮೆಲುಕು ಹಾಕುತ್ತಾರೆ.
1981ರಲ್ಲಿ ಕನ್ನಡಿಗರ ಹಕ್ಕೊತ್ತಾಯಕ್ಕೆ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಸರ್ಕಾರ ಸ್ಪಂದಿಸಿತ್ತು. ಈ ಸಂಬಂಧ 1981ರ ಮಾ. 27ರಂದು “ಕರ್ನಾಟಕದ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಅಭ್ಯರ್ಥಿ ಅಥವಾ ಅವರ ತಂದೆ- ತಾಯಿ, ಪತಿ- ಪತ್ನಿ ನೋಂದಾಯಿಸುವ ದಿನಾಂಕಕ್ಕೆ 15 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲದಿಂದ ಕರ್ನಾಟಕದ ನಿವಾಸಿಗಳಾಗಿರಲೇ ಬೇಕು’ ಎಂಬುದಾಗಿ ರಾಜ್ಯ ಸರ್ಕಾರ ಆದೇಶ ಕೂಡ ಹೊರಡಿಸಿತ್ತು.
1982ರ ನ.5ರಂದು ರಾಜ್ಯದ ಸಾರ್ವಜನಿಕ ವಲಯದಲ್ಲಿ ನೇಮಕಾತಿ ವೇಳೆ ಗರಿಷ್ಠ ಪ್ರಮಾಣದಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂಬುದು ರಾಜ್ಯ ಸರ್ಕಾರದ ಆಶಯ ಎಂದು ರಾಜ್ಯದ ಎಲ್ಲ ಉದ್ಯಮಗಳ ಮುಖ್ಯಸ್ಥರಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಪತ್ರ ಬರೆದಿದ್ದರು ಎಂದೂ ಸ್ಮರಿಸಿದರು.
ಮಣ್ಣಿನ ಮಕ್ಕಳಿಗೆ ಕೆಲಸ..: ಈ ಆದೇಶ ಹೊರಡಿಸಿದ ಸಂದರ್ಭದಲ್ಲಿ ಆರ್.ಗುಂಡೂರಾವ್ ಅವರು “ಮಣ್ಣಿನ ಮಕ್ಕಳಿಗೇ ಉದ್ಯೋಗ’ ಎಂಬ ಮಾತನ್ನು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು. ಕಾರ್ಮಿಕರ ನೇಮಕಾತಿಯಲ್ಲಿ ಎಲ್ಲ ಹುದ್ದೆಗಳಿಗೂ ಕನ್ನಡಿಗರನ್ನೇ ನೇಮಿಸುವಂತೆ ಕೈಗಾರಿಕೆಗಳಿಗೆ ಆದೇಶ ಹೊರಡಿಸುವ ಭರವಸೆಯನ್ನೂ ನೀಡಿದ್ದರು.
ಆದರೆ ಗುಂಡೂರಾವ್ ಅವರ ಈ ನಿಲುವನ್ನು ಅಂದಿನ ಕೇರಳ, ತಮಿಳುನಾಡು ಮುಖ್ಯಮಂತ್ರಿಗಳು ವಿರೋಧಿಸಿದ್ದರು. ರಾಷ್ಟ್ರೀಯ ಕಾಂಗ್ರೆಸ್ ಮುಖ್ಯಸ್ಥರೂ ಬೆಂಬಲಿಸದ ಕಾರಣ ಗುಂಡೂರಾವ್ ಅವರು ತಮ್ಮ ಹೇಳಿಕೆ ಹಿಂಪಡೆದರು ಎಂದು ರಾ.ನಂ.ಚಂದ್ರಶೇಖರ್ ಹೇಳಿದರು. ಹಲವು ದಶಕಗಳಿಂದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ಹಕ್ಕೊತ್ತಾಯ ನಿರಂತರವಾಗಿದೆ.
ಸಾರ್ವಜನಿಕವಾಗಿ ಅಭಿಪ್ರಾಯ ರೂಪಿಸುವಲ್ಲಿ ಈಚಿನ ದಿನಗಳಲ್ಲಿ ಪರಿಣಾಮಕಾರಿ ಎನಿಸಿರುವ ಟ್ವಿಟ್ಟರ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದಲ್ಲಿನ ಉದ್ಯೋಗ ಕನ್ನಡಿಗರಿಗೇ ಎಂಬ ಅಭಿಯಾನ ಕೈಗೊಂಡಿದೆ. ಈ ಅಭಿಯಾನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದಿಯಾಗಿ ಹಲವರು ಬೆಂಬಲಿಸಿದ್ದಾರೆ. ಮುಂದೆ ಸರ್ಕಾರದಿಂದ ಈ ಅಭಿಯಾನಕ್ಕೆ ಯಾವ ರೀತಿಯ ಸ್ಪಂದನೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಮಾತು ಕೃತಿಯಾಗಿ ಬರಲಿ: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನ್ಯ ಭಾಷಾ, ರಾಜ್ಯಗಳ ಅಧಿಕಾರಿಗಳು ತಮ್ಮ ಭಾಷಿಗರು, ರಾಜ್ಯದವರು ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಕೆಲ ಕಾನೂನುಗಳನ್ನು ದುರ್ಬಲಗೊಳಿಸುತ್ತಿದ್ದು, ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ನೀಡಬೇಕು ಎಂಬ ಅಭಿಯಾನ ಆರಂಭವಾಗಿರುವುದು ಸ್ವಾಗತಾರ್ಹ. ಈ ಹಕ್ಕೊತ್ತಾಯ ಅರಿವಿನ ಆಂದೋಲನವಾಗಬೇಕು. ಮುಖ್ಯಮಂತ್ರಿಗಳು ಅಭಿಯಾನ ಬೆಂಬಲಿಸಿರುವುದು ಶ್ಲಾಘನೀಯ. ಮುಖ್ಯಮಂತ್ರಿಗಳ ಮಾತು ಕೃತಿಯಾಗಿ ಬರಲಿ.-ಎಸ್.ಜಿ. ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ