Advertisement
ಈಗಾಗಲೇ ಮಸೂದೆ ಜಾರಿಗೆ ಬಾರ್‌ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಎಲ್ಲ ರಾಜ್ಯಗಳ ಬಾರ್‌ಕೌನ್ಸಿಲ್‌ಗಳ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದು, ಏಪ್ರಿಲ್ 8 ಹಾಗೂ 9ರಂದು ನಡೆದ ಜಂಟಿ ಸಭೆಯಲ್ಲಿ ಉದ್ದೇಶಿತ ಮಸೂದೆ ಸಂಸತ್ತಿನಲ್ಲಿ ಮಂಡಿಸದೆ ತಿರಸ್ಕರಿಸಬೇಕು. ಕಾನೂನು ಆಯೋಗದ ಅಧ್ಯಕ್ಷ ಸ್ಥಾನದಿಂದ ನ್ಯಾ. ಬಿ.ಎಸ್.ಚೌಹಾಣ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ವಕೀಲ ಸಮೂಹದಿಂದ ರಾಷ್ಟ್ರವ್ಯಾಪಿ ಸಹಿ ಸಂಗ್ರಹಕ್ಕೆ ಕರೆ ನೀಡಲಾಗಿದೆ.
ರಾಷ್ಟ್ರೀಯ ಕಾನೂನು ಆಯೋಗದ ಅಧ್ಯಕ್ಷ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎಸ್ ಚೌಹಾಣ್ ನೇತೃತ್ವದ ಸಮಿತಿ, 1961ರ ವಕೀಲರ ಕಾಯಿದೆಗೆ ತಿದ್ದುಪಡಿ ಮಾಡಿ, ವಕೀಲರ ಕಾಯ್ದೆ 2017ರ ತಿದ್ದುಪಡಿ ಮಸೂದೆಯನ್ನು ಕೇಂದ್ರ ಕಾನೂನು ಇಲಾಖೆಗೆ ಶಿಫಾರಸು ಮಾಡಿದೆ.
Related Articles
Advertisement
ಇಂತಹ ವಿಚಾರಗಳಲ್ಲಿ ಸಮರ್ಪಕವಾಗಿ ನಿರ್ವಹಿಸುವಲ್ಲಿ ರಾಷ್ಟ್ರೀಯ ಬಾರ್‌ಕೌನ್ಸಿಲ್, ಆಯಾ ರಾಜ್ಯಗಳ ಬಾರ್‌ಕೌನ್ಸಿಲ್‌ಗಳ ಶಿಸ್ತು ಸಮಿತಿಗಳು ವೈಫಲ್ಯ ಅನುಭವಿಸಿವೆ ಎಂದು ಅಭಿಪ್ರಾಯಪಟ್ಟು ಬಾರ್‌ಕೌನ್ಸಿಲ್‌ಗಳ ನೇಮಕ ಹಾಗೂ ಶಿಸ್ತುಸಮಿತಿ ಮುಖ್ಯಸ್ಥರ ನೇಮಕದಲ್ಲಿ ನ್ಯಾಯಮೂರ್ತಿಗಳ ಅಧಿಕಾರಕ್ಕೆ ವಹಿಸಿಕೊಡಲು ತೀರ್ಮಾನಿಸಲಾಗಿದೆ.
ಅದೇ ರೀತಿ ಕಕ್ಷಿದಾರ ತನ್ನ ವಕೀಲರ ವಿರುದ್ಧ ನೀಡಿದ ದೂರು ಸಾಬೀತಾದರೆ 3 ಲಕ್ಷ ದಂಡ ಹಾಗೂ 5 ಲಕ್ಷ ಪರಿಹಾರ ನೀಡಲು ಉದ್ದೇಶಿತ ಮಸೂದೆಯಡಿ ಅವಕಾಶ ನೀಡಲಾಗಿದೆ. ಪ್ರಸ್ತುತ ರಾಜ್ಯದ ಬಾರ್‌ಕೌನ್ಸಿಲ್ ಸದಸ್ಯರ ಅಡ್ವೋಕೇಟ್ ಜನರಲ್ ಅವರನ್ನೂ ಸೇರಿಸಿ 26 ಮಂದಿ ಇರುತ್ತಿತ್ತು.
(ಕರ್ನಾಟಕದ ಬಾರ್ ಕೌನ್ಸಿಲ್) ಇದರಲ್ಲಿ 25 ಮಂದಿಯನ್ನೂ ಚುನಾವಣಾ ಮೂಲಕವೇ ಆಯ್ಕೆ ಮಾಡಲಾಗುತ್ತದೆ. ಆದರೆ ಉದ್ದೇಶಿತ ಮಸೂದೆಯ ಪ್ರಕಾರ ಎಲ್ಲ ಬಾರ್‌ಕೌನ್ಸಿಲ್ ಸದಸ್ಯರ ಸಂಖ್ಯೆಯನ್ನು 21ಕ್ಕೆ ನಿಗದಿಪಡಿಸಲಾಗಿದೆ. ಇದರಲ್ಲಿ 10 ಮಂದಿ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಆಯ್ಕೆಯಾಗಲಿದ್ದಾರೆ. ಉಳಿದ 11 ಮಂದಿಯ ಪೈಕಿ 5 ಮಂದಿ ಹಿರಿಯ ವಕೀಲರು ಹಾಗೂ 6 ಮಂದಿ ಬೇರೆ ಕ್ಷೇತ್ರದ ತಜ್ಞರನ್ನು ನೇಮಕಮಾಡಲಾಗುತ್ತದೆ.
ಈ ಅಧಿಕಾರ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗೆ ನೀಡಲಾಗಿರುತ್ತದೆ. ಅಲ್ಲದೆ ಬಾರ್ ಕೌನ್ಸಿಲ್‌ನಲ್ಲಿ ರೂಪುಗೊಳ್ಳಲಿರುವ ವಿಚಾರಣೆಯನ್ನು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು ಅಥವಾ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ನ್ಯಾಯಾಧೀಶರು ನಡೆಸಲಿದ್ದಾರೆ.
ಇದೇ ಮಾದರಿಯಲ್ಲಿ ಸೆಂಟ್ರಲ್ ಬಾರ್ ಕೌನ್ಸಿಲ್ ಸದಸ್ಯರ ನೇಮಕದಲ್ಲೂ ನಾಮನಿರ್ದೇಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 19 ಸದಸ್ಯರ ಪೈಕಿ 10 ಮಂದಿ ಎಲೆಕ್ಷನ್‌ಲ್ಲಿ ಆಯ್ಕೆ, ಹಾಗೂ ಉಳಿದ 5 ಸದಸ್ಯರನ್ನು ಎಲ್ಲಾ ರಾಜ್ಯಗಳ ಒಬ್ಬೊಬ್ಬ ಸದಸ್ಯರನ್ನು ರೊಟೇಶನ್ ಆಧಾರದಲ್ಲಿ ನೇಮಕಗೊಳಿಸಲಾಗುತ್ತಿದೆ.
ಈ ರೊಟೇಶನ್ ಮಾದರಿಯಲ್ಲಿ ಕರ್ನಾಟಕದ ಒಬ್ಬರೇ ಒಬ್ಬ ಸದಸ್ಯ ಬಾರ್‌ಕೌನ್ಸಿಲ್ ಸದಸ್ಯರಾಗಲು ಕನಿಷ್ಟ 16 ವರ್ಷ ಕಾಯಬೇಕಾಗುತ್ತದೆ. ಈ ಸಂಕಷ್ಟ ಎಲ್ಲಾ ರಾಜ್ಯಗಳ ಬಾರ್‌ಕೌನ್ಸಿಲ್‌ಗಳಿಗೂ ಅನ್ವಯ ಆಗಲಿದೆ. ಅಲ್ಲದೆ ಇದರ ಸಂಪೂರ್ಣ ಹಿಡಿಯ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಹಿಡಿತದಲ್ಲಿರಲಿದೆ. ಇಂತಹ ಪರಿಸ್ಥಿತಿ ಸೃಷ್ಟಿಯಾದಗ ಬಾರ್‌ಕೌನ್ಸಿಲ್‌ನ ಸ್ವಾಯತ್ತತೆ ಹೇಗೆ ಉಳಿಯಲಿದೆ ಎಂಬ ಪ್ರಶ್ನೆಯನ್ನು ವಕೀಲ ಸಮೂಹ ಎತ್ತಿದೆ.
ದಂಡ ಪ್ರಯೋಗದ ಆತಂಕಉದ್ದೇಶಿತ ತಿದ್ದುಪಡಿ ಮಸೂದೆಯಲ್ಲಿ ಕಕ್ಷಿದಾರ ತನ್ನ ವಕೀಲರ ವಿರುದ್ಧ ನೀಡಿದ ದೂರು ಸಾಬೀತಾದರೆ 3 ಲಕ್ಷ ದಂಡ ಹಾಗೂ 5 ಲಕ್ಷ ಪರಿಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಈ ಮೊದಲು ವಕೀಲರ ವಿರುದ್ಧ ದೂರು ಬಂದರೆ ಅದನ್ನು ಪರಿಷತ್‌ನ ಸಭೆಯಲ್ಲಿ ಮಂಡಿಸಿ ಶಿಸ್ತು ಸಮಿತಿ ವಿಚಾರಣೆಗೆ ವಹಿಸಲಾಗುತ್ತಿತ್ತು. ಈ ಶಿಸ್ತು ಸಮಿತಿಯಲ್ಲಿ ಒಬ್ಬ ಪರಿಷತ್ ಸದಸ್ಯ ಹಾಗೂ ಇಬ್ಬರು ಹಿರಿಯ ವಕೀಲರು ಇರುತ್ತಿದ್ದರು. ಆದರೆ, ಉದ್ದೇಶಿತ ತಿದ್ದುಪಡಿ ಮಸೂದೆಯ ಅನುಸಾರ ಇನ್ನು ಮುಂದೆ ವಕೀಲರ ವಿರುದ್ಧ ದಾಖಲಾಗುವ ದೂರುಗಳನ್ನು ನಿವೃತ್ತ ಜಿÇÉಾ ನ್ಯಾಯಾಧೀಶರ ಅಧ್ಯಕ್ಷತೆಯ ಐವರ ಸಮಿತಿ ವಿಚಾರಣೆ ನಡೆಸುತ್ತದೆ. ಇದರಲ್ಲಿ ಇಬ್ಬರು ಪರಿಷತ್ ಹಾಗೂ ಇಬ್ಬರು ಸಾರ್ವಜನಿಕ ವಲಯದ ತಜ್ಞರು ಇರುತ್ತಾರೆ. ಉದ್ದೇಶಿತ ಮಸೂದೆಯಲ್ಲಿ ಬಾರ್‌ಕೌನ್ಸಿಲ್‌ಗಳ ಶಿಸ್ತು ಸಮಿತಿ ಕಾರ್ಯನಿರ್ವಹಣೆಗೆ ಅಸಮಾಧಾನವ್ಯಕ್ತವಾಗಿರುವುದು ಮೇಲ್ನೋಟಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೆ ವಾಸ್ತವದಲ್ಲಿ ಆಯಾ ರಾಜ್ಯಗಳ ಬಾರ್ ಕೌನ್ಸಿಲ್‌ಗಳ ಶಿಸ್ತು ಸಮಿತಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಕಕ್ಷಿದಾರರ ದೂರುಗಳನ್ನು ಸ್ವೀಕರಿಸಿ ಆರೋಪ ಸಾಬೀತಾದ ವಕೀಲರಿಗೆ ಕೆಲವು ವರ್ಷಗಳ ಕಾಲ ಕಲಾಪಗಳಿಂದ ಸಸ್ಪೆಂಡ್ ಮಾಡುವುದು, ಅಲ್ಪ ಪ್ರಮಾಣದ ಪರಿಹಾರ ಕೊಡಿಸುವುದು ಕೆಲವು ದಿಟ್ಟನಿರ್ಧಾರಗಳನ್ನು ಕೈಗೊಂಡಿದೆ. ಹೀಗಿದ್ದಾಗ ಕೆಲವೊಂದು ರಾಜ್ಯಗಳ ಬಾರ್‌ಕೌನ್ಸಿಲ್‌ಗಳು ವಿಫಲ ಕಂಡಿರುವುದನ್ನೇ ಮುಂದಿಟ್ಟುಕೊಂಡು ಈ ರೀತಿ ಬಾರ್‌ಕೌನ್ಸಿಲ್‌ಗಳ ಸ್ವಾಂತ್ರತ್ರ್ಯವನ್ನು ಕಿತ್ತುಕೊಂಡು, ನ್ಯಾಯಾಧೀಶರ ಅಧೀನಕ್ಕೆ ನೀಡುವುದು, ಸಾರ್ವಜನಿಕ ವಲಯದ ತಜ್ಞರನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳುವುದು ಎಷ್ಟು ಸರಿ ಎಂಬ ವಾದ ಮುಂದಿಟ್ಟಿದ್ದಾರೆ. ” ಕಾನೂನು ಆಯೋಗ ಶಿಫಾರಸು ಮಾಡಿರುವ ಮಸೂದೆಯಲ್ಲಿ ಬಾರ್‌ಕೌನ್ಸಿಲ್‌ಗಳಲ್ಲಿ ವಕೀಲರ ಸಂಖ್ಯೆಯನ್ನು ಕಡಿಮೆಗೊಳಿಸಿ, ಅವರ ಸ್ವಾಂತ್ರ್ಯವನ್ನೇ ಮೊಟಕುಗೊಳಿಸುವ ಹುನ್ನಾರ ಅಡಗಿದೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಕೀಲರಿಗಿರುವ ಮೂಲಭೂತ ಹಕ್ಕುಗಳನ್ನೇ ಕಿತ್ತುಕೊಳ್ಳಲು ಯತ್ನಿಸಲಾಗಿದೆ. ವಕೀಲರಿಗೆ ಮಾರಕವಾಗಿರುವ ಈ ಮಸೂದೆಯನ್ನು ಜಾರಿಯಾಗಲು ಬಿಡುವುದಿಲ್ಲ.
-ಎಚ್.ಸಿ.ಶಿವರಾಮು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ “ಉದ್ದೇಶಿತ ಮಸೂದೆ ಜಾರಿಯಾದರೆ ವಕೀಲರಿಗೆ ಇನ್ನಿಲ್ಲದ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಅಲ್ಲದೆ ವಕೀಲರ ವಿರುದ್ಧದ ದೂರು ಸಾಬೀತಾದರೆ 5 ಲಕ್ಷ ಪರಿಹಾರ ಕೊಡಿಸಲು ಅವಕಾಶ ಕಲ್ಪಿಸಿರುವುದರಿಂದ, ಈ ಮಸೂದೆಯನ್ನು ದುರ್ಬಳಕೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.ಕೆಲವು ಸುಧಾರಿತ ಅಂಶಗಳನ್ನು ಜಾರಿಗೊಳಿಸುವುದನ್ನು ಮರೆತು ವಕೀಲರ ಮೇಲೆ ದಂಡ ಪ್ರಯೋಗಕ್ಕೆ ಮುಂದಾಗಿರುವ ಈ ಉದ್ದೇಶಿತ ಮಸೂದೆ ಜಾರಿಯಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಈ ಬಗ್ಗೆ ಬಾರ್‌ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಆಯಾ ರಾಜ್ಯಗಳ ಬಾರ್‌ಕೌನ್ಸಿಲ್‌ಗಳ ಅಧ್ಯಕ್ಷರು ಚರ್ಚಿಸಿ ಒಮ್ಮತದ ನಿರ್ಣಯ ಕೈಗೊಳ್ಳುವ ಅಗತ್ಯವಿದೆ”
-ರಾಜ್ಯ ವಕೀಲರ ಪರಿಷತ್ ಸಹ ಅಧ್ಯಕ್ಷ ವೈ.ಆರ್.ಸದಾಶಿವ ರೆಡ್ಡಿ