Advertisement

SBI ಅಧ್ಯಕ್ಷ ದಿನೇಶ್‌ ಖಾರ ಅವಧಿ ವಿಸ್ತರಣೆ

09:11 PM Oct 05, 2023 | Team Udayavani |

ನವದೆಹಲಿ: ಎಸ್‌ಬಿಐನ ಹಾಲಿ ಅಧ್ಯಕ್ಷ ದಿನೇಶ್‌ ಖಾರ ಅಧಿಕಾರವಧಿಯನ್ನು ಮುಂದಿನ ವರ್ಷದ ಆಗಸ್ಟ್‌ವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. 2020ರ ಅ.7ರಂದು ದಿನೇಶ್‌ ಅವರನ್ನು 3 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ನೇಮಿಸಲಾಗಿತ್ತು. 2023ಕ್ಕೆ ಆ ಅವಧಿ ಪೂರ್ಣಗೊಂಡಿದೆ.

Advertisement

ಆದರೆ ನಿಯಮಗಳ ಪ್ರಕಾರ 63 ವರ್ಷ ವಯಸ್ಸಿನ ವರೆಗೆ ಅಧ್ಯಕ್ಷರು ಸ್ಥಾನದಲ್ಲಿರಲು ಅರ್ಹರಾಗಿರುವ ಕಾರಣ ಮತ್ತೆ ಅಧಿಕಾರವಧಿ ವಿಸ್ತರಿಸಲಾಗಿದೆ. ಶೀಘ್ರವೇ ಈ ಸಂಬಂಧಿಸಿದಂತೆ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next