Advertisement
ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ತಾಲೂಕಿನ ಶಿವನಹಳ್ಳಿ ಬಳಿ ನಂದಿನಿ ಹಾಲು ಉತ್ಪನ್ನ ಸಂಕೀರ್ಣದ ಆವರಣದಲ್ಲಿ ತಮಗೆ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಗೆ ನಾಮನಿರ್ದೇಶಿತನಾಗುತ್ತೇನೆ ಎಂಬ ಕಲ್ಪನೆಯೂ ನನಗಿರಲಿಲ್ಲ. ನಾನು ಅದರ ಹಿಂದೆ ಹೋಗುವವನೂ ಅಲ್ಲ. ಇದು ತಾನಾಗಿಯೇ ಒಲಿದು ಬಂದಿದೆ ಎಂದರು.
Related Articles
Advertisement
6 ದಶಕಗಳ ಹಿಂದೆ ಹಾವಾಡಿಗರ ದೇಶ ಎಂದು ಕರೆಯಲ್ಪಡುತ್ತಿದ್ದ ಭಾತರ ಇಂದು ಹೈನುಗಾರಿಕೆಯಲ್ಲಿ ಅದ್ಬುತ ಸಾಧನೆ ಮಾಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ತಿಳಿಸಿದರು.
ನಮ್ಮ ದೇಶದಲ್ಲಿ ಗೋವುಗಳನ್ನು ದೇವರು ಎಂದೇ ಪೂಜಿಸುತ್ತೇವೆ. ರೈತರು ಯಾವುದೇ ಕೃಷಿ ಬೆಳೆಗಳಿಂದ ಆದಾಯ ಕಾಣಬೇಕಾದರೆ, ಕನಿಷ್ಠ 6 ತಿಂಗಳಿಂದ 1 ವರ್ಷ ಕಾಯಬೇಕು. ಆದರೆ, ಹೈನುಗಾರಿಕೆ ಆಗಲ್ಲ. ಹೈನುಗಾರಿಕೆಯಿಂದ ರೈತರಿಗೆ ಬಹಳ ಅನುಕೂಲವಾಗಿದ್ದು, ಲಾಭದಾಯಕವಾಗಿದೆ ಎಂದರು.
ಕಸಾಯಿ ಖಾನೆಗೆ ಬಿಡಬೇಡಿ :
ದೈವ ಸ್ವರೂಪಿಯಾದ ಗೋವುಗಳನ್ನು ವಯಸ್ಸಾದಾಗ ಕಸಾಯಿ ಖಾನೆಗೆ ನೀಡುವ ಬದಲು ಗೋ ಶಾಲೆಗಳಿಗೆ ಕೊಡಬೇಕು. ದೇಸಿ ತಳಿಯ ಗೋವುಗಳನ್ನು ಸಂರಕ್ಷಣೆ ಮಾಡಲೇಬೇಕಾಗಿದೆ. ರೈತರು ಹೆಚ್ಚು ದೇಸಿ ತಳಿಯ ಹಸುಗಳನ್ನು ಸಾಕಾಣಿಕೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.
ಧರ್ಮಸ್ಥಳದ ದರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಗೆ ಆಯ್ಕೆಯಾಗಿರುವುದು ಕರ್ನಾಟಕ ಹಾಗೂ ಕನ್ನಡಿಗರಿಗೆ ಹೆಮ್ಮೆ ತಂದಿದೆ.ಹೆಗ್ಗಡೆಯವರು ಮೊದಲಿನಿಂದಲೂ ಗ್ರಾಮೀಣ ಬದುಕಿನಲ್ಲಿ ಬೆಳೆದವರು. ಅವರು ಗ್ರಾಮೀಣ ಭಾಗದ ಮಹಿಳೆಯರ ಮನದಲ್ಲಿದ್ದಾರೆ. ಅವರನ್ನು ಆಯ್ಕೆ ಮಾಡಿದುದಕ್ಕಾಗಿ ರಾಷ್ಟ್ರಪತಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ .–ಡಿ.ಕೆ.ಸುರೇಶ್, ಸಂಸದ