Advertisement
ಇತ್ತೀಚೆಗೆ ನಡೆದ ಕಸಾಪ ಕಾರ್ಯಕಾರಿಣಿಯಲ್ಲಿ ಹಾಲಿ ಅಧ್ಯಕ್ಷರ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಆಡಳಿತಾವಧಿಯನ್ನು ಮತ್ತೆ ಆರು ತಿಂಗಳಿಗೆ ವಿಸ್ತರಿಸಲಾಗಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ತಿಳಿಸಿದ್ದಾರೆ. 2019ರ ಮಾರ್ಚ್ 2ರಂದು ಈಗಿನ ಕಾರ್ಯಕಾರಿಣಿ ಸಮಿತಿ ಸದಸ್ಯರ ಅವಧಿ (ಮೂರು ವರ್ಷ) ಅಂತ್ಯಗೊಳ್ಳಬೇಕಾಗಿತ್ತು. ಆದರೆ, ಬೈಲಾದಲ್ಲಿ ರುವ ರೀತಿಯಲ್ಲೇ ಹೆಚ್ಚುವರಿಯಾಗಿ ಆರು ತಿಂಗಳು ಅಧಿಕಾರ ವಿಸ್ತರಣೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಅಧಿಕಾರ ಅಂತ್ಯಗೊಳ್ಳಲಿದೆ.
ಸಂಘರ್ಷ ಸಮಿತಿ ಅಧ್ಯಕ್ಷ ಕೋ.ವೆಂ.ರಾಮ ಕೃಷ್ಣೇಗೌಡ, ಅಧಿಕಾರ ವಿಸ್ತರಣೆ ಸಂಬಂಧಿಸಿದ ವಿಷಯ ನ್ಯಾಯಾಲಯದಲ್ಲಿರುವುದರಿಂದ 6 ತಿಂಗಳು ಅಧಿಕಾರ ವಿಸ್ತರಣೆ ಮಾಡಿಕೊಂಡಿರುವು ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ತೇಲಿಬರುತ್ತಿವೆ ಹೆಸರುಗಳು: ಈತನ್ಮಧ್ಯೆ ಕಸಾಪ ಅಧ್ಯಕ್ಷರ ಗುದ್ದುಗೆಗಾಗಿ ಹುರಿಯಾಳುಗಳು ಸಜ್ಜಾಗುತ್ತಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಕೆ.ಸಿ.ರಾಮೇಗೌಡ, ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಶೇಖರಗೌಡ ಮಾಲೀ ಪಾಟೀಲ್ ಮತ್ತು ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್ ಜೋಷಿ ಅವರ ಹೆಸರು ಕೇಳಿ ಬಂದಿವೆ. ಬೆಂಗಳೂರು ನಗರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಕೆ.ಸಿ.ರಾಮೇಗೌಡ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿರುವ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಸಂಕ್ಷಿಪ್ತ ಪರಿಚಯವುಳ್ಳ ಕರಪತ್ರವನ್ನು ಹಂಚಿಕೆ ಮಾಡುತ್ತಿದ್ದಾರೆ. ಅತ್ತ ಶೇಖರಗೌಡ ಮಾಲೀ ಪಾಟೀಲ್ ಕೂಡ ಪ್ರಚಾರ ನಡೆಸಿದ್ದಾರೆ.
Related Articles
ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾಗೆ ತಿದ್ದುಪಡಿ ತಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ ದಲ್ಲಿ ವಿಚಾರಣೆ ನಡೆಯಿತು. ಅಲ್ಲದೆ ಈ ಸಂಬಂಧ ಜನವರಿ 8ಕ್ಕೆ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿತು. ಕಸಾಪ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಹಾಜರಾಗಿದ್ದರು.
Advertisement
ಕಳೆದ ಬಾರಿಯ ಚುನಾವಣೆ ದುಂದುವೆಚ್ಚದಲ್ಲಿ ನಡೆದಿತ್ತು. ಆದರೆ ತಾವು ಆ ಕಾರ್ಯಕ್ಕೆ ಕೈ ಹಾಕದೇ ಪತ್ರ ಮುಖೇನ ಮತನೀಡುವಂತೆ ಮತದಾರರಿಗೆ ಮನವಿ ಮಾಡುತ್ತಿದ್ದೇನೆ.
● ಸಿ.ಕೆ.ರಾಮೇಗೌಡ, ಬೆಂ.ನಗರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಕಸಾಪ ಅಧ್ಯಕ್ಷರ ಅವಧಿ ವಿಸ್ತರಣೆ ವಿಷಯ ಈಗಾಗಲೇ ನ್ಯಾಯಾಲಯದಲ್ಲಿದೆ. ಕೋರ್ಟ್ ಚುನಾವಣೆಗೆ ಸೂಚಿಸುವು
ದನ್ನು ಕಾಯುತ್ತಿದ್ದೇವೆ. ನಾನು ಕೂಡ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ.
● ಮಹೇಶ್ ಜೋಷಿ , ದೂರದರ್ಶನ ಕೇಂದ್ರದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ನಾನು ಕೂಡ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದು, ಈಗಾಗಲೇ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ಮಾತುಕತೆ
ನಡೆಸಿದ್ದೇನೆ. ಐದು ವರ್ಷ ವಿಸ್ತರಣೆ ಸಂಬಂಧದ ವಿಷಯ ನ್ಯಾಯಾಲಯದಲ್ಲಿದೆ. ಕೋರ್ಟ್ ಯಾವ ರೀತಿಯ ತೀರ್ಪು
ನೀಡುತ್ತದೆಯೋ, ಅದಕ್ಕೆ ಬದ್ಧವಿದ್ದೇನೆ.
● ಶೇಖರಗೌಡ ಮಾಲೀ ಪಾಟೀಲ್, ಕೊಪ್ಪಳ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ದೇವೇಶ ಸೂರಗುಪ್ಪ