Advertisement
ಬೆಂಗಳೂರು – ಮೈಸೂರು ಮಾರ್ಗ ವಾಗಿ ಮಂಗಳೂರಿಗೆ ಬರುತ್ತಿದ್ದ ಎಕ್ಸ್ ಪ್ರಸ್(ನಂ. 16585) ಅನ್ನು ಮುರ್ಡೇಶ್ವರದವರೆಗೆ ವಿಸ್ತರಿಸಿ ದರೆ, ಮಂಗಳೂರಿ ನಿಂದ-ಮೈಸೂರು ಮಾರ್ಗ ವಾಗಿ ಬೆಂಗಳೂರಿಗೆ ಸಂಚ ರಿಸುತ್ತಿದ್ದ (ನಂ. 16586) ಎಕ್ಸ್‌ಪ್ರೆಸ್ಸನ್ನು ಮುರ್ಡೇಶ್ವರದಿಂದ ಆರಂಭಿಸಿ ಇಲಾಖೆ ಆದೇಶ ಹೊರಡಿಸಿದೆ.
Related Articles
ಪಂಚಗಂಗಾ ಎಕ್ಸ್‌ಪ್ರೆಸ್ ಬೆಂಗ ಳೂರಿನಿಂದ ಬೇಗನೆ ಹೊರಡುತ್ತದೆ. ಅದರಲ್ಲಿ ಟಿಕೇಟು ಸಿಗದು ಎಂಬ ದೂರಿಗೆ ಈ ರೈಲು ಪರಿಹಾರ. ಈ ರೈಲು ಬೈಯಪ್ಪನಹಳ್ಳಿಯಿಂದ ಹೊರಟು ರಾತ್ರಿ 9ಕ್ಕೆ ಮೆಜೆಸ್ಟಿಕ್‌ಗೆ ಬರಲಿದ್ದು, ಮೈಸೂರು- ಮಂಗಳೂರು- ಉಡುಪಿ- ಕುಂದಾಪುರ, ಮುಡೇìಶ್ವರ ಸೇರಲಿದೆ. ಮಂಗಳೂರಿ ನಿಂದೀಚೆಗೆ ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರದಲ್ಲಿ ನಿಲುಗಡೆಯಿದೆ. ಮುರ್ಡೇಶ್ವರದಿಂದ ಮಧ್ಯಾಹ್ನ 3.30ಕ್ಕೆ ಹೊರಟು, ಬೆಳಗ್ಗೆ 6ಕ್ಕೆ ಬೆಂಗಳೂರು ಸೇರುತ್ತದೆ. ನಮ್ಮ ಸಮಿತಿ ಮತ್ತು ಕೊಡಗು- ಮೈಸೂರು ಸಂಸದ ಪ್ರತಾಪಸಿಂಹರ ಪ್ರಯತ್ನ ದಿಂದಾಗಿ ಇದು ಸಾಧ್ಯವಾಗಿದೆ ಎಂದು ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಗೌತಮ ಶೆಟ್ಟಿ ತಿಳಿಸಿದ್ದಾರೆ.
Advertisement