Advertisement

9-10ನೇ ತರಗತಿವರೆಗೂ ಆರ್‌ಟಿಇ ಕಾಯ್ದೆ ವಿಸ್ತರಿಸಿ

05:49 PM Oct 22, 2020 | Suhan S |

ಹೊಸಪೇಟೆ: ಆರ್‌ಟಿಇ ಕಾಯ್ದೆ ವಿಸ್ತರಣೆ ಹಾಗೂ ಪಿಯುಸಿ ಉಪನ್ಯಾಸಕರಿಗೆ ನೇಮಕಾತಿ ಪತ್ರ ಶೀಘ್ರದಲ್ಲಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿ, ಎಸ್‌ಎಫ್‌ಐ ಪದಾಧಿ ಕಾರಿಗಳುಬುಧವಾರ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶಿಕ್ಷಣ-ವಿದ್ಯಾರ್ಥಿ ವಿರೋಧಿ ನೀತಿಯಿಂದರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿ ಹಾಗೂ ಯುವ ಸಮುದಾಯ ಶಿಕ್ಷಣ, ಉದ್ಯೋಗ ವಂಚಿತರಾಗಿ ನಿರುದ್ಯೋಗಿಗಳಾಗಿ ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ದೇಶದಾದ್ಯಂತ ಶಿಕ್ಷಣವನ್ನು ಖಾಸಗೀಕರಣ, ವ್ಯಾಪಾರೀಕರಣ ಮಾಡುವುದರಮೂಲಕ ರಾಜ್ಯದಲ್ಲಿ,ದೇಶದಲ್ಲಿ ಮಧ್ಯಮವರ್ಗಕ್ಕೆ,  ಬಡವ, ದಲಿತ, ಅಲ್ಪಸಂಖ್ಯಾತರಿಗೆ ಶಿಕ್ಷಣವನ್ನು ಸರಕಾರವೇ ಮೊಟಕುಗೊಳಿಸುವಂತಹ ಕೆಲಸಕ್ಕೆ ಕೈಹಾಕಲು ಹೊರಟಿದೆ ಎಂದು ದೂರಿದರು.

ಆರ್‌ಟಿಇ ವಿಸ್ತರಣೆ: ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ 1 ನೇ ತರಗತಿಯಿಂದ 8ನೇ ತರಗತಿವರೆಗೆ ಪೂರೈಸಿರುವ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯಲ್ಲಿ 9 ತರಗತಿ ದಾಖಲಾತಿಗೆ ಹೆಚ್ಚಿನ ಹಣ ಕಟ್ಟಲು ಆಗದೇ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿವಂತಾಗಿದೆ. ಕೋವಿಡ್ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ವಿದ್ಯಾರ್ಥಿ ಪಾಲಕರು, ಹೆಚ್ಚುವರಿ ಶುಲ್ಕ ಕಟ್ಟಲಾಗದೆ ಬಹುತೇಕ ಮಕ್ಕಳು ಪಾಲಕರು ಶಾಲೆಯಿಂದ ಮಕ್ಕಳನ್ನು ಬಿಡಿಸಿ, ಸರ್ಕಾರಿ ಶಾಲೆಗೆ 9ನೇ ತರಗತಿ ದಾಖಲಾತಿ ಮಾಡುತ್ತಿದ್ದಾರೆ. ಇದರಿಂದಾಗಿ 8ನೇ ತರಗತಿವರೆಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ 9ಮತ್ತು 10ನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕಾದ  ಅನಿವಾರ್ಯತೆ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆರ್‌ ಟಿಇ ಕಾಯ್ದೆಯನ್ನು 9 ಮತ್ತು 10ನೇ ತರಗತಿವರೆಗೂ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಅಕ್ಷರ ದಾಸೋಹ ಯೋಜನೆಯ ಆಹಾರ ಧಾನ್ಯಗಳನ್ನು ವಿದ್ಯಾರ್ಥಿಗಳ ಮನೆಯ ಬಾಗಿಲಿಗೆ ತಲುಪಿಸಲು ಎಸ್‌ಎಫ್‌ಐ ಆಗ್ರಹಿಸಿದೆ. ಕೋವಿಡ್ ಹಿನ್ನಲೆಯಲ್ಲಿ ಶಾಲೆಗಳು ಆರಂಭವಾಗದ ಹಿನ್ನಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಊಟ ನೀಡಲು ಬಂದಿರುವ ದಾಸ್ತಾನಿನ ದವಸಧಾನ್ಯಗಳು ಜಿಲ್ಲಾ ಕೇಂದ್ರಗಳಲ್ಲಿ ಆಹಾರದ ಉಗ್ರಣ ನಿಗಮ ದಲ್ಲಿ ಕೊಳೆಯುತ್ತಿವೆ. ಇದರಿಂದಾಗಿ ಬಡ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗದಿದ್ದರೆ ರೋಗ ನಿರೋಧಕ ಶಕ್ತಿಯನ್ನುಕಳೆದುಕೊಳ್ಳುವ ಸಾಧ್ಯತೆ ಇದೆ. ರಾಜ್ಯದ ಎಲ್ಲಾ ಸರಕಾರಿ ಶಾಲೆಗಳ ಮಕ್ಕಳಿಗೆ ಕಳೆದ ಮೇಯಿಂದ ನವಂಬರ್‌ ತಿಂಗಳವರೆಗೂ ಎಲ್ಲಾ ವಿದ್ಯಾರ್ಥಿಗಳಿಗೆ ಕೊಡಬೇಕಾದ ದವಸ-ಧಾನ್ಯಗಳನ್ನು ಕೇರಳರಾಜ್ಯದ ಮಾದರಿಯಲ್ಲಿ ಶಾಲೆಯ ಶಿಕ್ಷಕರ ಮೂಲಕ ವಿದ್ಯಾರ್ಥಿಗಳ ಮನೆಗೆ ತಲುಪಿಸಬೇಕೆಂದು ಒತ್ತಾಯಿಸಿದೆ. ಮುಖಂಡರಾದ ಜೆ.ಶಿವಕುಮಾರ್‌, ಹೆಚ್‌.ಎಂ.ಮಾರುತಿ ಹಾಗೂ ಕೆ.ಎ.ಪವನ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next