ಹಾಸನ: ರಾಜ್ಯದಲ್ಲಿ ಲಾಕ್‌ಡೌನ್ ಜೂ.30 ರವರೆಗೂ ವಿಸ್ತರಿಸಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.5 ಕ್ಕಿಂತ ಕೆಳಗೆ ಇಳಿಯುವರೆಗೂ ಅನ್‌ಲಾಕ್ ಮಾಡಕೂಡದು. ರಾಜ್ಯದಲ್ಲಿ ಕೊರೊನಾದಿಂದ 25 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಕೆಲವು ಸಚಿವರಿಗೆ ಕೊರೊನಾ ದುಷ್ಪರಿಣಾಮದ ವಾಸ್ತವವೇಗೊತ್ತಾಗುತ್ತಿಲ್ಲ.ಹಾಗಾಗಿಲಾಕ್‌ಡೌನ್ ತೆರವುಗೊಳಿಸಬೇಕು ಎಂದು ಹೇಳುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೆಲವು ಸಚಿವರಿಗೆಕಲೆಕ್ಷನ್ ಕಡಿಮೆಯಾಗಿರಬಹುದು. ಹಾಗಾಗಿ ಲಾಕ್ ಡೌನ್ ತೆರವಿಗೆ ಮುಂದಾಗಿರಬಹುದು ಎಂದು ವ್ಯಂಗ್ಯವಾಡಿದರು.
ಪರೀಕ್ಷೆಮುಂದೂಡಲಿ: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಪರೀಕ್ಷೆಗಳು ನಡೆಯಲಿ.ಆದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ಪರೀಕ್ಷೆ ನಡೆಸುವುದು ಬೇಡ. ಜುಲೈ ಅಂತ್ಯದವರೆಗ ಪರೀಕ್ಷೆ ಮುಂದೂಡಲಿ ಎಂದು ಆಗ್ರಹಿಸಿದರು.
ಕೋವಿಡ್ ಲಸಿಕೆಯೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಜಿಲ್ಲೆಯಲ್ಲಿ 1.32 ಲಕ್ಷ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಆದರೆ 2ನೇ ಡೋಸ್ ಲಸಿಕೆಯನ್ನುಕೇವಲ 4,500 ಜನರಿಗೆ ಮಾತ್ರ ನೀಡಲಾಗಿದೆ. ಮೊದಲ ಡೋಸ್ ಪಡೆದವರು 2ನೇ ಡೋಸ್‌ಗಾಗಿ ಪರದಾಡುತ್ತಿದ್ದಾರೆ ಎಂದರು.
ಕುಡಿಯುವ ನೀರೂ ಕೊಡುತ್ತಿಲ್ಲ: ಹೇಮಾವತಿ ಯೋಜನೆ ಅಚ್ಚುಕಟ್ಟು ಪ್ರದೇಶಲ್ಲಿ ಹಾಸನ ಜಿಲ್ಲೆಯ ಜನರಿಗೆ ಕುಡಿಯುವ ನೀರು ಬಿಡಿ ಎಂದು ಒತ್ತಾಯಿಸಿದರೂ ನಾಲೆಗಳಲ್ಲಿ ನೀರು ಬಿಡುತ್ತಿಲ್ಲ. ಆದರೆ ತುಮಕೂರು ಜಿಲ್ಲೆಗೆ ನೀರು ಹರಿಸಲಾಗುತ್ತಿದೆ. ಜಿಲ್ಲೆಯ ಕೆರೆಗಳಿಗೆ ನೀರು ಬಿಡಿ ಎಂದರೆ ಕಾವೇರಿ ಟ್ರಿಬ್ಯೂನಲ್ ಆದೇಶದ ಕಾರಣ ನೀಡುತ್ತಾರೆ. ಆದರೆ ತುಮಕೂರು ಜಿಲ್ಲೆಗೆ ನೀರುಬಿಡಲು ಕಾವೇರಿ ಟ್ರಿಬ್ಯೂನಲ್ ಆದೇಶ ಅಡ್ಡಿಯಾಗುವುದಿಲ್ಲವೇಎಂದು ಪ್ರಶ್ನಿಸಿದರು. ಜಿಲ್ಲೆಗೆ ಕುಡಿಯುವ ನೀರು ಬಿಡಲೂ ತಾರತಮ್ಯ ಮಾಡುತ್ತಿದೆ. ಶ್ರೀ ರಾಮದೇವರ ಅಣೆಕಟ್ಟು ಅಚ್ಚುಕಟ್ಟು ಪ್ರದೇಶದಲ್ಲಿ ವರ್ಷಕ್ಕೆ 2 ಬೆಳೆಯಲಾಗುತ್ತಿತ್ತು. ಈಗ ವರ್ಷಕ್ಕೆ ಒಂದೇ ಬೆಳೆ ನಿಗದಿಪಡಿಸಲಾಗಿದೆ. ಈ ಸರ್ಕಾರ ಕಳೆದ 2ವರ್ಷಗಳಿಂದಲೂ ಹಾಸನ ಜಿಲ್ಲೆಗೆ ಅನ್ಯಾಯ ಮಾಡುತ್ತಲೇ ಬರುತ್ತಿದೆ ಎಂದು ಆರೋಪ ಮಾಡಿದರು.