Advertisement

ಅಮೆರಿಕದ ಮ್ಯೂಸಿಯಂನಲ್ಲಿ ಸೆರ್ಪೋಜಿ 2 ಕಲಾಕೃತಿ ಪತ್ತೆ!

12:13 PM Jul 23, 2022 | Team Udayavani |

ವಾಷಿಂಗ್ಟನ್‌: ಕೆಲ ವರ್ಷಗಳ ಹಿಂದೆ ತಮಿಳುನಾಡಿನ ತಾಂಜಾವೂರಿನ ಸರಸ್ವತಿ ಮಹಲ್‌ನಿಂದ ಕಳ್ಳತನವಾಗಿದ್ದ ಮಹಾರಾಜ ಇಮ್ಮಡಿ ಸೆರ್ಪೋಜಿ ಮತ್ತು ಅವರ ಪುತ್ರ “ಇಮ್ಮಡಿ ಶಿವಾಜಿ’ ಇರುವ ಕಲಾಕೃತಿ ಅಮೆರಿಕದ ಮ್ಯಾಸಚೂಸೆಟ್ಸ್‌ನ ಪೀಬಾಡಿ ಎಸೆಕ್ಸ್‌ ವಸ್ತು ಸಂಗ್ರಹಾಲಯದಲ್ಲಿ ಪತ್ತೆಯಾಗಿದೆ. ವಿಗ್ರಹ ವಿಭಾಗದ ಪೊಲೀಸರು ಚಿತ್ರಕಲೆಯನ್ನು ಪತ್ತೆ ಹಚ್ಚಿದ್ದಾರೆ.

Advertisement

ತಂಜಾವೂರಿನ ರಾಜ ಸೆರ್ಪೋಜಿ 1832ರಲ್ಲಿ ನಿಧನರಾಗಿದ್ದರು. ಅನಂತರ ಅವರ ಮಗ ಶಿವಾಜಿ 2 1855ರವರೆಗೆ ಆಳ್ವಿಕೆ ನಡೆಸಿದ್ದರು. ಅನಂತರ ಪ್ರದೇಶವು ಬ್ರಿಟಿಷರ ಪಾಲಾಗಿತ್ತು. ತಂದೆ-ಮಗ ಇಬ್ಬರೂ ಇರುವ ಚಿತ್ರವನ್ನು 1822-1827ರ ಕಾಲದಲ್ಲಿ ಬರೆಯಲಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಐತಿಹಾಸಿಕ ಚಿತ್ರವನ್ನು 2006ರಲ್ಲಿ ಅಂತಾರಾಷ್ಟ್ರೀಯ ಪುರಾತನ ವಸ್ತುಗಳ ವ್ಯಾಪಾರಿ ಸುಭಾಷ್‌ ಕಪೂರ್‌ರಿಂದ 28 ಲಕ್ಷ ರೂ.ಗಳಿಗೆ ಖರೀದಿಸಲಾಗಿತ್ತು.

ಬಳಿಕ ಅದನ್ನು ಸರಸ್ವತಿ ಮಹಲ್‌ನಲ್ಲಿ ಪ್ರದರ್ಶನಕ್ಕಿಡ ಲಾಗಿತ್ತು. ಆದರೆ ಈ ಚಿತ್ರವು ಕಳುವಾಗಿದ್ದಾಗಿ 2017ರಲ್ಲಿ ದೂರು ದಾಖಲಾಗಿದೆ. ವಿದೇಶಗಳಿಗೆ ಪುರಾತನ ವಸ್ತು ಕಳ್ಳಸಾಗಾಣಿಕೆ ಮಾಡುತ್ತಿರುವ ಆರೋಪದಲ್ಲಿ ಸುಭಾಷ್‌ ಕಪೂರ್‌ರನ್ನು 2011ರಲ್ಲಿಯೇ ಬಂಧಿಸಲಾಗಿದೆ. ಈ ಕಳ್ಳತನದ ಹಿಂದೆಯೂ ಅವರದ್ದೇ ಸಂಚಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next