Advertisement

ಹೆಸರಿಗೆ ಎಕ್ಸ್‌ಪ್ರೆಸ್‌-ಎಲ್ಲ ಕಡೆ ನಿಲುಗಡೆ

12:13 PM Jan 29, 2018 | Team Udayavani |

ಆಳಂದ: ಸಂಜೆಯಾದರೆ ಸಾಕು ಪಟ್ಟಣದ ನಿಲ್ದಾಣದಲ್ಲಿ ಬಸ್‌ ಇದೇ ಇಲ್ಲೋವೋ. ಸೀಟು ಸಿಗುತ್ತದೆ ಏನೋ? ಸೀಟು ಇಲ್ಲದಿದ್ದರೂ ನಿಂತಾದರು ಹೋಗೋಣ ಏನು ಮಾಡೋದೋ ಇಲ್ಲಂದ್ರೆ ಕ್ರೂಜರ್‌ ಸಿಕ್ಕರೆ ಸಾಕು ಎನ್ನುತ್ತಲೆ ನಿತ್ಯ ಸಂಜೆ ವೇಳೆ ಕಲಬುರಗಿಗೆ ತೆರಳಲು ಬಸ್‌ಗಾಗಿ ಕಾಯುವ ಪ್ರಯಾಣಿಕರು ಒಂದೇ ಸವನೆ ಪರದಾಡುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.

Advertisement

ಪಟ್ಟಣದಿಂದ ಜಿಲ್ಲಾ ಕೇಂದ್ರ ಕಲಬುರಗಿ ನಗರಕ್ಕೆ ನಿತ್ಯ ಸಂಜೆ ವೇಳೆ ಸಮಯಕ್ಕೆ ಸಾರಿಗೆ ಸಂಸ್ಥೆಗಳ ಬಸ್‌ ಸೌಲಭ್ಯ
ಇಲ್ಲದಿರುವುದು ಪ್ರಯಾಣಿಕರಲ್ಲಿ ತಳಮಳ, ಗೊಂದಲಕ್ಕೆ ಕಾರಣವಾಗುತ್ತಿದೆ. ಒಂದೊಮ್ಮೆ ಬಸ್‌ ಸಿಕ್ಕರು ಆಸನಗಳು ಸಿಗದೆ ಸುಮಾರು ಒಂದು ಗಂಟೆ ವರೆಗೆ ನಿಂತೆ ಪ್ರಯಾಣಿಸುವುದು ಅನಿವಾರ್ಯವಾಗಿದೆ. ವೃದ್ಧರು, ಮಹಿಳೆಯರು, ಮಕ್ಕಳಿಗೆ ಇದು ನುಂಗದ ತುತ್ತಾಗಿ ಪರಿಣಮಿಸಿದೆ ಎಂದು ದೂರಿದ್ದಾರೆ.

ಸಮಯಕ್ಕೆ ಬಸ್‌ ಬಾರದಿದ್ದಲ್ಲಿ ಖಾಸಗಿ ವಾಹನದಲ್ಲಿ ಕುಳಿತು ಜೀವಭದಿಂದಲೇ ಅನಿವಾರ್ಯವಾಗಿ ನಾಗರಿಕರು ಪ್ರಯಾಣಿಸುತ್ತಿದ್ದಾರೆ. ಸಂಜೆ ವೇಳೆ ಬಸ್‌ನಲ್ಲಿ ಪ್ರಯಾಣಿಸಲು ನೌಕರರು, ವ್ಯಾಪಾರಿಗಳು ಮತ್ತು ಸಾರ್ವಜನಿಕರು ಪರದಾಡುತ್ತಿರುವ ಪರಿಸ್ಥಿತಿ ಸಾಮಾನ್ಯವಾಗಿದೆ. 10 ನಿಮಿಷ್ಯಕ್ಕೊಂದು ಬಸ್‌ ಓಡಿಸಿದರು ಪೂರ್ಣ ಭರ್ತಿಯಾಗುತ್ತದೆ. ಆದರೆ ಅರ್ಧ ಗಂಟೆ, ಒಂದು ಗಂಟೆಯವರೆಗೂ ಬಸ್‌ಗಾಗಿ ಕಾದು ಸುಸ್ತಾಗಿ ಕೊನೆಗೆ ಖಾಸಗಿ ವಾಹನಗಳ ಮೋರೆ ಹೋಗುವ ಪರಿಸ್ಥಿತಿ ಇದೆ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.

ಸಂಜೆ ಹೊತ್ತಿನಲ್ಲಿ ಸಮಯಕ್ಕೆ ಬಸ್‌ ಓಡಿಸದೆ ಇರುವುದು ಒಂದಡೆ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ. ಇನ್ನೊಂದಡೆ
ಪ್ರಯಾಣಿಕರಿಗೆ ಬಾರೀ ತೊಂದರೆ ಎದುರಾಗುತ್ತಿದೆ. ಇಲ್ಲಿನ ಘಟಕದ ವ್ಯವಸ್ಥಾಪಕರು, ನಿಯಂತ್ರಣಾಧಿ ಕಾರಿಗಳಿಗೆ ಇಂತಹ ಪರಿಸ್ಥಿತಿಗೊತ್ತಿದ್ದರು ಮೇಲಾಧಿ ಕಾರಿಗಳತ್ತ ಬೊಟ್ಟು ಮಾಡುತ್ತಲೆ ದಿನದೊಡುತ್ತಾರೆ. ಆದರೆ ಪ್ರಯಾಣಿಕರ  ನುಕೂಲಕ್ಕೆ ತಕ್ಕಂತೆ ಜಿಲ್ಲಾ ಕೇಂದ್ರಗಳಿಗೆ ಬಸ್‌ ಸಂಚಾರಕ್ಕೆ ಮುಂದಾಗುತ್ತಿಲ್ಲ ಎಂದು ನಿತ್ಯ ಜಿಲ್ಲಾ ಕೇಂದ್ರಗಳಿಗೆ ಪ್ರಯಾಣಿಸುವ ಪ್ರಯಾಣಿಕರು ದೂರಿದ್ದಾರೆ. ಬಸ್‌ನಲ್ಲಿ 40 ಕಿಮೀ ಪ್ರಯಾಣ ಕಡಿಮೆ ಟಿಕೆಟ್‌ ದರವಿದೆ. ಆದರೆ ಇಲ್ಲಿನ ಪ್ರಯಾಣಕ್ಕೆ 48 ರೂ. ಅಧಿಕ ಟಿಕೆಟ್‌ ಪಡೆಯಲಾಗುತ್ತಿದೆ. ಹೆಸರಿಗೆ ತಡೆರಹಿತ ಬಸ್‌ ಬಿಡಲಾಗುತ್ತಿದೆ. 

ಆದರೆ ಎಲ್ಲ ಸ್ಥಳದಲ್ಲಿಯೂ ನಿಲ್ಲಿಸುತ್ತಲೆ ಹೋಗಿ ಸಮಯಕ್ಕೆ ತಲುಪುತ್ತಿಲ್ಲ ಎಂಬುದು ಪ್ರಯಾಣಿಕರ ಆರೋಪವಾಗಿದೆ.
ಈಗಲೂ ಕಾಲಮಿಂಚಿಲ್ಲ. ಸಂಬಂಧಿಸಿದ ಅಧಿಕಾಗಳು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್‌ ಓಡಿಸುವರೆ
ಎಂಬುದು ಕಾದುನೋಡುವಂತೆ ಮಾಡಿದೆ.

Advertisement

 ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next