Advertisement

ಜನವರಿ ಮೊದಲ ವಾರ ರಫ್ತು ಏರಿಕೆ

10:50 AM Jan 11, 2021 | |

ಹೊಸದಿಲ್ಲಿ: ಜನವರಿ ತಿಂಗಳ ಮೊದಲ ವಾರದಲ್ಲಿ ದೇಶದ ರಫ್ತು ಕಳೆದ ವರ್ಷದ ಇದೇ ಅವಧಿಗಿಂತ ಶೇ. 16.22ರಷ್ಟು ಏರಿಕೆಯಾಗಿದೆ. ಫಾರ್ಮಾಸ್ಯುಟಿಕಲ್ಸ್‌ ಮತ್ತು ಎಂಜಿನಿಯರಿಂಗ್‌ ಕ್ಷೇತ್ರಗಳಲ್ಲಿ ಆರೋಗ್ಯಕರ ಬೆಳವಣಿಗೆಯಿಂದಾಗಿ ಈ ಹೆಚ್ಚಳ ದಾಖ ಲಾಗಿದ್ದು, ಇದು ಆರ್ಥಿಕ ಚೇತರಿಕೆಯ ಲಕ್ಷಣ ಎಂದು ಮೂಲಗಳು ತಿಳಿಸಿವೆ.

Advertisement

ಕಳೆದ ವರ್ಷದ ಜನವರಿ ಪ್ರಥಮ ವಾರದಲ್ಲಿ 534 ಕೋ. ಡಾಲರ್‌ ರಫ್ತು ದಾಖಲಾಗಿದ್ದರೆ, ಈ ವರ್ಷದ ಇದೇ ಅವಧಿಯಲ್ಲಿ 621 ಕೋ. ಡಾಲರ್‌ ಮೌಲ್ಯದ ರಫ್ತು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜನವರಿ 1ರಿಂದ 7ರ ನಡುವಣ ಅವಧಿ ಯಲ್ಲಿ ಆಮದು ಕೂಡ ಶೇ. 1.7 ಹೆಚ್ಚಳ ವಾಗಿದೆ. ಕಳೆದ ವರ್ಷದ ಇದೇ ಅವಧಿ ಯಲ್ಲಿ 86 ಕೋಟಿ ಡಾಲರ್‌ ಮೌಲ್ಯದ ಸರಕು ಗಳು ಆಮದಾಗಿದ್ದರೆ ಈ ವರ್ಷ ಇದೇ ಅವಧಿಯಲ್ಲಿ 87 ಕೋಟಿ ಡಾಲರ್‌ ಮೌಲ್ಯದ ಆಮದು ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next