Advertisement

ಅಂಬಾನಿ ಮನೆ ಮುಂದೆ ಸ್ಪೋಟಕ ತುಂಬಿದ ಕಾರು ಪ್ರಕರಣ : ಎನ್.ಐ.ಎ ತನಿಖೆ..!

04:29 PM Mar 08, 2021 | Team Udayavani |

ನವದೆಹಲಿ : ಫೆಬ್ರುವರಿ 25ರಂದು ಉದ್ಯಮಿ ಮುಕೇಶ್  ಅಂಬಾನಿಯ ಮುಂಬೈ ನಿವಾಸದ ಸಮೀಪ 20 ಜಿಲಟಿನ್‌ ಕಡ್ಡಿಗಳಿದ್ದ ಸ್ಕಾರ್ಪಿಯೊ ಕಾರು ಪತ್ತೆಯಾದ ಪ್ರಕರಣವನ್ನು  ರಾಷ್ಟ್ರೀಯ ತನಿಖಾ ದಳ (ಎನ್‌ ಐ ಎ) ಕೈಗೆತ್ತಿಕೊಂಡಿದೆ.

Advertisement

ಈ ಪ್ರಕರಣವನ್ನು ಎಸ್ ಐ ಎ ತನಿಖೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಅದೇಶ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿರುವುದಾಗಿ ತನಿಖಾ ಸಂಸ್ಥೆಯ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಇನ್ನು ಅಂಬಾನಿ ನಿವಾಸದ ಮುಂದೆ ಅನುಮಾಸ್ಪದವಾಗಿ ನಿಂತಿದ್ದ ಕಾರು, ಐರೊಲಿ–ಮುಲುಂಡ್‌ ಸೇತುವೆಯ ಬಳಿ ಕಳ್ಳತನವಾಗಿತ್ತು. ಈ ಕಾರಿನ ಮಾಲೀಕ ಹಿರೆನ್ ಮನ್ಸುಖ್ ಮೃತ ದೇಹ ಶುಕ್ರವಾರ ಥಾಣೆಯ ಹಳ್ಳವೊಂದರಲ್ಲಿ ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next