Advertisement
ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಕಂಡ ಈ ಸಿನೆಮಾದಲ್ಲಿ ಇಂದಿನ ಯುವಜನಾಂಗಕ್ಕೆ ಬೇಕಾದ ಎಲ್ಲ ರೀತಿಯ ಮಸಾಲೆ ಅಂಶಗಳನ್ನು ಒಳಗೊಂಡಿದೆ ಎನ್ನಬಹುದು.
Related Articles
Advertisement
ಚಿತ್ರದ ಸಂಗೀತಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ರಣಬೀರ್‌ಕರ್ಪೂರ್ ಅವರ ಪಾತ್ರವನ್ನು ಪರಿಚಯಿಸುವ ಸೀನ್‌ನಲ್ಲಿ ಬಳಸಿರುವ ರೋಜಾ ಚಿತ್ರದ ಹಿನ್ನೆಲೆ ಸಂಗೀತ ಈಗಲೂ ಸುಮಧುರವಾಗಿದೆ. ಇದರಲ್ಲಿ ಬರುವ “ಪಾಪಾ ಮೇರಿಜಾನ್’ ಹಾಡು ಕೇಳಿದ ಪ್ರತಿಯೊಬ್ಬರಿಗೂ ತಮ್ಮ ತಂದೆಯ ಜತೆ ಕಳೆದ ಮಧುರ ಕ್ಷಣಗಳು ನೆನಪಾಗುವುದು ಖಂಡಿತ.
ಅನಿಮಲ್ ಹೆಸರಿಗೆ ತಕ್ಕಂತೆ ಚಿತ್ರದ ಖಳನಟ “ಬಾಬಿ ಡಿಯೋಲ್’ ತಮ್ಮ ನಟನೆಯಲ್ಲಿನ ಕ್ರೂರತೆಯನ್ನು ಮಾಡಲು ಪ್ರಾಣಿಯೆ ಅವರ ಮೈಯಲ್ಲಿ ಪರಕಾಯ ಪ್ರವೇಶ ಮಾಡಿದಂತೆ ನಟನೆ ಮಾಡಿದ್ದಾರೆ. ಮೂರುವರೆ ಗಂಟೆಯ ಅನಿಮಲ್ ಸಿನೆಮಾದಲ್ಲಿ ಕೊನೆಯ 15 ನಿಮಿಷ ಮಾತ್ರ ಕಾಣುವ ಖಳನಟ ಬಾಬಿ ಡಿಯೋಲ್ ಸಂಪೂರ್ಣ ಚಿತ್ರವನ್ನೇ ವ್ಯಾಪಿಸುವಂತಹ ನಟನೆಯನ್ನು ಮಾಡಿದ್ದಾರೆ.
ಕಳೆದ ಕೆಲವು ದಶಕಗಳಿಂದ ಆರಕ್ಕೆ ಏರದೆ ಮೂರಕ್ಕೂ ಇಳಿಯದೆ ನಟನೆ ಮಾಡುತ್ತಿದ್ದ ಬಾಬಿ ಡಿಯೋಲ್‌ಗೆ ಈ ಚಿತ್ರದ ಮೂಲಕ ಮತ್ತೂಂದು ಹೊಸ ಜೀವನ ಸಿಕ್ಕಿಂತಾಗಿದೆ. ಆದರೆ ಇಂದಿನ ಯುವಜನಾಂಗಕ್ಕೆ ಬೇಕಾದ ಎಲ್ಲ ಅಂಶಗಳು ಇದರಲ್ಲಿದ್ದು ಮೂರುವರೆ ಗಂಟೆ ಪ್ರೇಕ್ಷಕರಿಗೆ ಮೋಸವಿಲ್ಲದಂತೆ ಮನರಂಜನೆ ನೀಡುವ ಚಿತ್ರವಾಗಿದೆ.
-ರಾಸುಮ ಭಟ್
ಕುವೆಂಪು ವಿವಿ, ಶಿವಮೊಗ್ಗ