ಶ್ರೀನಗರ : ಪುಲ್ವಾಮಾದ ಹೆದ್ದಾರಿಯಲ್ಲಿ ಗುರುವಾರ ಸಂಜೆ ಸಿಆರ್‌ಪಿಎಫ್ ಯೋಧರ ವಾಹನಗಳನ್ನು ಗುರಿಯಾಗಿರಿಸಿ ಭೀಕರ ದಾಳಿ ನಡೆಸಲು ಸ್ಫೋಟಕ ಹೊತ್ತ ಕಾರನ್ನು ಬಳಸಲಾಗಿದೆ.
ಆವಂತಿಪೋರಾದ ಗೋರಿಪುರ ಪ್ರದೇಶದಲ್ಲಿ ಸಾಗುತ್ತಿದ್ದ ಸಿಆರ್‌ಪಿಎಫ್ ವಾಹನಗಳ ಸಾಲನ್ನು ಗುರಿ ಇರಿಸಿ ಉಗ್ರರು ಭೀಕರ ಹೊಂಚು ದಾಳಿ ನಡೆಸಿದ್ದು, 44 ಮಂದಿ ಯೋಧರು ಹುತಾತ್ಮರಾಗಿದ್ದು, ಹಲವು ಗಾಯಾಳು ಯೋಧರ ಸ್ಥಿತಿ ಚಿಂತಾಜನಕವಾಗಿದೆ. ಉರಿ ದಾಳಿಯ ಬಳಿಕ ನಡೆದ ಭೀಕರ ಉಗ್ರ ದಾಳಿ ಇದಾಗಿದೆ.
ಸ್ಫೋಟದು ತೀವ್ರತೆಗೆ ಯೋಧರ ದೇಹಗಳು ಛಿದ್ರ ಛಿದ್ರವಾಗಿದ್ದು, ದೃಶ್ಯ ಭೀಕರವಾಗಿದೆ. ಇಡೀ ದೇಶಾದ್ಯಂತ ಉಗ್ರರ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಯುರೋಪ್ ರಾಷ್ಟ್ರಗಳಲ್ಲಿ ನಡೆಸುತ್ತಿದ್ದ ಮಾದರಿಯಲ್ಲಿ ಕಾಶ್ಮೀರದಲ್ಲಿ ಉಗ್ರರು ದಾಳಿ ನಡೆಸಿದ್ದು, ಈ ದಾಳಿಗೆ ಉಗ್ರರು ಭಾರೀ ಸಿದ್ದತೆ ನಡೆಸಿಕೊಂಡಿದ್ದರು ಎನ್ನಲಾಗಿದೆ.
250 ಕೆಜಿ ಗೂ ಹೆಚ್ಚು ಸ್ಫೋಟಕ ತುಂಬಿದ್ದ ಕಾರನ್ನು ಸಿಆರ್‌ಪಿಎಫ್ ವಾಹನಕ್ಕೆ ಗುದ್ದಿದ ಪರಿಣಾಮ ಭೀಕರ ಸ್ಫೋಟ ಸಂಭವಿಸಿದೆ. ಈ ದಾಳಿಗೆ ಸ್ಥಳೀಯರ ಬೆಂಬಲ ಸಿಕ್ಕಿರುವ ಅನುಮಾನ ಬಂದಿದೆ. ಸ್ಥಳವನ್ನು ಪೊಲೀಸರು ಮತ್ತು ಸಾವಿರಾರು ಭದ್ರತಾ ಪಡೆಗಳು ಸುತ್ತುವರಿದಿದ್ದಾರೆ.
2547 ಮಂದಿ ಯೋಧರು ಶ್ರೀನಗರದಿಂದ ಜಮ್ಮವಿನಿಂದ ಹಲವು ವಾಹನಗಳಲ್ಲಿ ಪ್ರಯಾಣ ಬೆಳೆಸಿದ್ದ ವೇಳೆ ಈ ಹೊಂಚು ದಾಳಿ ನಡೆದಿದೆ.
ಜೈಶ್ ಎ ಮೊಹಮ್ಮದ್ ಉಗ್ರರು ದಾಳಿಯ ಹೊಣೆ ಹೊತ್ತಿದ್ದಾರೆ.