ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ಬೆನ್ನಲ್ಲೇ, ಉಕ್ರೇನ್ ನ ಎರಡು ಪ್ರಾಂತ್ಯಗಳಲ್ಲಿ ದೊಡ್ಡ ಮಟ್ಟದ ಸ್ಪೋಟ ನಡೆದಿದೆ.
ಅಮೆರಿಕ ಆಧಾರಿತ ಬಿಎನ್ ಓ ನ್ಯೂಸ್ ವೀಡಿಯೋ ತುಣುಕನ್ನು ಪ್ರಕಟ ಮಾಡಿದೆ. ‘ಇದು ಪೂರ್ವ ಉಕ್ರೇನ್ ನ ಮೇಲಿನ ರಷ್ಯಾದ ದಾಳಿಯ ಭಾಗವಾಗಿದೆ. ಕತ್ತಲಲ್ಲಿ ಖಾರ್ಕಿವ್ ನಗರದಲ್ಲಿ ದೊಡ್ಢ ಸ್ಫೋಟ ನಡೆದಿದೆ”.
ಡೊನೆಟ್ಸ್ಕ್ ಪ್ರಾಂತ್ಯದ ನಗರವಾದ ಮರಿಯುಪೋಲ್ ಮತ್ತು ರಷ್ಯಾದ ಬೆಲ್ಗೊರೊಡ್ ಒಬ್ಲಾಸ್ಟ್ ನಲ್ಲಿಯೂ ಸ್ಫೋಟಗಳು ವರದಿಯಾಗಿವೆ.
ಇದನ್ನೂ ಓದಿ:ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್!
ದಿಗ್ಬಂಧನದ ಹೊರತಾಗಿಯೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಂದು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಣೆ ಮಾಡಿದ್ದಾರೆ. ರಷ್ಯಾ ಮತ್ತು ಉಕ್ರೇನಿಯನ್ ಪಡೆಗಳ ನಡುವಿನ ಘರ್ಷಣೆಗಳು “ಅನಿವಾರ್ಯ” ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಉಕ್ರೇನಿಯನ್ ಸೈನಿಕರಿಗೆ “ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗಿ” ಎಂದು ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಯುದ್ಧ ನಿಲ್ಲಿಸಿ: ಯುದ್ಧ ಘೋಷಣೆಯಾಗುತ್ತಿದ್ದಂತೆ ವಿಶ್ವಸಂಸ್ಥೆ ತುರ್ತು ಸಭೆಯಲ್ಲಿ ಮಾತನಾಡಿದ ಉಕ್ರೇನ್ ಪ್ರತಿನಿಧಿ, “ಈ ಯುದ್ಧವನ್ನು ನಿಲ್ಲಿಸುವುದು ಈ ಸಂಸ್ಥೆಯ ಜವಾಬ್ದಾರಿಯಾಗಿದೆ. ಯುದ್ಧವನ್ನು ನಿಲ್ಲಿಸಲು ನಾನು ಎಲ್ಲರಿಗೂ ಕರೆ ನೀಡುತ್ತೇನೆ” ಎಂದರು.