Advertisement

ಪ್ಯಾಲೇಸ್ತೀನ್‌ ಪ್ರಧಾನಿ ಹತ್ಯೆಗೆ ವಿಫ‌ಲ ಯತ್ನ: ಬಾಂಬ್‌ ಸ್ಫೋಟ

03:38 PM Mar 13, 2018 | Team Udayavani |

ಜಬಾಲಿಯಾ, ಗಾಜಾ ಪಟ್ಟಿ : ಗಾಜಾ ಪಟ್ಟಿಗೆ ನೀಡಿದ ಅಪರೂಪದ ಭೇಟಿಯ ವೇಳೆ ಪ್ಯಾಲೇಸ್ತೀನ್‌ ಪ್ರಧಾನಿ ರಮೀ ಹಮದಲ್ಲ ಅವರ ಬೆಂಗಾವಲು ವಾಹನಗಳ ಸಾಲನ್ನು ಗುರಿ ಇರಿಸಿ ನಡೆಸಲಾದ ದಾಳಿಯಲ್ಲಿ  ಭಾರೀ ಬಾಂಬ್‌ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ.

Advertisement

ಪ್ರಧಾನಿಯವರ ಫ‌ತಾ ಪಕ್ಷವು ಈ ದಾಳಿಗೆ ಗಾಜಾ ಬಂಡುಕೋರರೇ ಕಾರಣ ಎಂದು ದೂರಿದ್ದು ಪ್ರಧಾನಿಯ ಹತ್ಯೆಗೆ ನಡೆಸಲಾದ ವಿಫ‌ಲ ಯತ್ನವೆಂದು ಹೇಳಿದೆ.  

ಇಸ್ರೇಲ್‌ ಜತೆಗಿನ ಎರೆಝ ಕ್ರಾಸಿಂಗ್‌ ಮೂಲಕ ಪ್ಯಾಲೇಸ್ತೀನ್‌ ಪ್ರಧಾನಿಯವರ ಬೆಂಗಾವಲು ವಾಹನ ಸಾಲು ಗಾಜಾ ಪಟ್ಟಿ ಪ್ರವೇಶಿಸುತ್ತಿದ್ದಂತೆಯೇ ಈ ಬಾಂಬ್‌ ನ್ಪೋಟ ನಡೆದಿದೆ. ಆದರೆ ಪ್ರಧಾನಿ ಹಮದಲ್ಲ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next