ಆಬುಜಾ(ನೈಜೀರಿಯಾ): ಜನಾಂಗೀಯ ಮತ್ತು ಧಾರ್ಮಿಕ ಉದ್ವಿಗ್ನತೆಗಳು ಹೆಚ್ಚಾಗಿ ಸಂಭವಿಸುವ ಮಧ್ಯ ನೈಜೀರಿಯಾದಲ್ಲಿ ಬಾಂಬ್ ಸ್ಪೋಟ ಉಂಟಾಗಿ 27 ಮಂದಿ ಕುರಿಗಾಹಿಗಳು ಮೃತ ಪಟ್ಟಿರುವ ಘಟನೆ ನಸರವ ಮತ್ತು ಬೆನ್ಯೂ ಗಡಿಭಾಗದ ರುಕುಬಿ ಬಳಿ ನಡೆದಿದೆ ಎಂದು ವರದಿಯಾಗಿದೆ.
ಜಾನುವಾರುಗಳನ್ನು ಬೆನ್ಯುನಿಂದ ನಸರವಾ ಕರೆದುಕೊಂಡು ಹೋಗುತ್ತಿರುವ ವೇಳೆ ಬಾಂಬ್ ಸ್ಫೋಟ ಉಂಟಾಗಿದ್ದು, ಜಾನುವಾರುಗಳು ಸೇರಿದಂತೆ 27 ಮಂದಿ ಕುರಿಗಾಹಿಗಳ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುರಿಗಾಹಿಗಳನ್ನು ಪ್ರತಿನಿಧಿಸುವ ಗುಂಪು, ಈ ಬಾಂಬ್ ಕೃತ್ಯ ಮಿಲಿಟರಿ ದಾಳಿಯ ಪರಿಣಾಮವಾಗಿ ಆಗಿದೆ ಎಂದು ಆರೋಪಿಸಿದೆ.
ಕಳೆದ ಕೆಲ ಸಮಯದಿಂದ ಮಧ್ಯ ನೈಜೀರಿಯಾದಲ್ಲಿ, ಕುರಿಗಾಹಿ ಸಮುದಾಯ ಹಾಗೂ ರೈತರ ನಡುವೆ ನೀರಿನ ವಿಚಾರಕ್ಕೆ ವಿವಾದಗಳು ನಡೆಯುತ್ತಿವೆ. ಈ ಸಮುದಾಯದಲ್ಲಿ ಕುರಿಗಾಹಿಗಳು ಬಹುತೇಕ ಮುಸ್ಲಿಂಮರಾಗಿದ್ದಾರೆ. ರೈತ ಸಮುದಾಯದಲ್ಲಿ ಕ್ರಿಶ್ಚಿಯನ್ನರು ಅಧಿಕರಾಗಿದ್ದಾರೆ.
ಈ ಸಮುದಾಯದ ನಡುವೆ ಸಂಘರ್ಘ ಇತ್ತೀಚೆಗೆ ಜನಾಂಗೀಯ ಮತ್ತು ಧಾರ್ಮಿಕ ಉದ್ವಿಗ್ನತೆಗಳು ಹೆಚ್ಚಾಗಲು ಕಾರಣವಾಗಿದೆ.